ನವದೆಹಲಿ:200 ಭಾರತೀಯ ನಾಗರಿಕರನ್ನು ಹೊತ್ತ ವಿಶೇಷ ವಿಮಾನ ರೊಮೇನಿಯಾದಿಂದ ನವದೆಹಲಿಗೆ ಬಂದಿಳಿದಿದೆ. ಈ ನಡುವೆ ಉಕ್ರೇನ್ನಲ್ಲಿ ಭೀಕರ ಕಾಳಗ ಮುಂದುವರಿದಿದೆ. ರಷ್ಯಾ ಮೂರನೇ ಬಾರಿಗೆ ಘೋಷಿಸಿದ ಕದನ ವಿರಾಮ ವಿಫಲವಾಗಿದೆ.
ಮತ್ತೊಂದೆಡೆ ಭಾರತ ಸರ್ಕಾರ ಆಪರೇಷನ್ ಗಂಗಾ ಕಾರ್ಯಾಚರಣೆ ಮುಂದುವರಿಸಿದೆ. ಈ ವರೆಗೂ ಭಾರತ ಸರ್ಕಾರ 17 ಸಾವಿರಕ್ಕೂ ಹೆಚ್ಚು ಜನರನ್ನು ಉಕ್ರೇನ್ನಿಂದ ಭಾರತಕ್ಕೆ ಕರೆ ತಂದಿದೆ ಎಂದು ತಿಳಿದು ಬಂದಿದೆ.