ಕರೀಂನಗರ(ತೆಲಂಗಾಣ):ಕರೀಂನಗರ ಜಿಲ್ಲೆಯ ಗಂಗೇಪಲ್ಲಿ ಗ್ರಾಮದ ಗನ್ನೇರುವರಂ ಮಂಡಲದಲ್ಲಿ ವಿಚಿತ್ರವಾದ ಘಟನೆಯೊಂದು ನಡೆದಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಹಾವೊಂದು ಅಡ್ಡಪಡಿಸಿ, ಆತನ ಕಾಲಿಗೆ ಸುತ್ತಿಕೊಂಡಿದೆ.
ನಡೆದುಕೊಂಡು ಹೋಗ್ತಿದ್ದ ವ್ಯಕ್ತಿಗೆ ಅಡ್ಡಿಪಡಿಸಿ, ಕಾಲಿಗೆ ಸುತ್ತಿಕೊಂಡ ಹಾವು ರಾಜಯ್ಯ ಎಂಬ ವ್ಯಕ್ತಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕೆಲ ನಿಮಿಷಗಳ ಕಾಲ ಆತನಿಗೆ ತೊಂದರೆ ನೀಡಿರುವ ಹಾವು, ನಿಧಾನವಾಗಿ ಆತನ ದೇಹದ ಮೇಲೆ ಏರಲು ಪ್ರಯತ್ನಿಸಿದೆ.
ಈ ವೇಳೆ ವ್ಯಕ್ತಿ ಹಾವಿನ ತಲೆ ಹಿಡಿದುಕೊಂಡು ಬಿಡಿಸುವ ಯತ್ನ ನಡೆಸಿದ್ದಾನೆ. ಆದರೆ, ಆತನ ಕಾಲಿಗೆ ಬಿಗಿಯಾಗಿ ಸುತ್ತಿಕೊಂಡಿರುವ ಕಾರಣ ಮತ್ತೋರ್ವ ವ್ಯಕ್ತಿಯ ಸಹಾಯದಿಂದ ತಪ್ಪಿಸಿಕೊಂಡಿದ್ದಾನೆ. ಇದಾದ ಬಳಿಕ ಕೋಲಿನಿಂದ ಹೊಡೆದು ಅದನ್ನ ಸಾಯಿಸಿದ್ದಾನೆ.
ಇದನ್ನೂ ಓದಿರಿ: CCTV Video : ಬೈಕ್ನಿಂದ ಬಿದ್ದ ಮಹಿಳೆ ಮೇಲೆ ಹರಿದ ಬಸ್, ಸ್ಥಳದಲ್ಲೇ ದುರ್ಮರಣ
ಘಟನೆಯ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.