ಚಂದ್ರಾಪುರ(ಮಹಾರಾಷ್ಟ್ರ): ಇಲ್ಲಿನ ಗ್ರಾಮವೊಂದರ ಮನೆಯೊಳಗೆ ನುಗ್ಗಿದ ವಿಷಕಾರಿ ಹಾವೊಂದು ಒಂದಲ್ಲ, ಎರಡಲ್ಲ, ಬರೋಬ್ಬರಿ 10 ಮೊಟ್ಟೆ ನುಂಗಿರುವ ಘಟನೆ ನಡೆದಿದ್ದು, ಅದರಿಂದ ಒದ್ದಾಡಿ ಒದ್ದಾಡಿ ಕೊನೆಗೆ ಎಲ್ಲವನ್ನೈ ಹೊರ ಹಾಕಿರುವ ಘಟನೆ ನಡೆದಿದೆ.
ಮಹಾರಾಷ್ಟ್ರದ ಚಂದ್ರಾಪುರದ ಕೊಸಾಂಬಿ ಗ್ರಾಮದಲ್ಲಿನ ವ್ಯಕ್ತಿಯೊಬ್ಬರ ಮನೆಯೊಳಗೆ ಹೋಗಿದೆ. ಈ ವೇಳೆ ಕೋಳಿ ಕುಳಿತುಕೊಳ್ಳುತ್ತಿದ್ದ ಸ್ಥಳವೊಂದರಲ್ಲಿಟ್ಟಿದ್ದ ಮೊಟ್ಟೆಗಳನ್ನ ಒಂದೊಂದಾಗಿ ನುಂಗಿದೆ. ಈ ವೇಳೆ ಮನೆಯವರು, ಹಾವನ್ನ ನೋಡಿದ್ದು ತಕ್ಷಣವೇ ಉರುಗತಜ್ಞನಿಗೆ ಮಾಹಿತಿ ನೀಡಿದ್ದಾರೆ.