ಈರೋಡ್(ತಮಿಳುನಾಡು): ಪರಿಹಾರ ಪೂಜೆಗಾಗಿ ಹಾವಿನ ಮುಂದೆ ನಾಲಿಗೆ ಚಾಚಿದ ಕೇಂದ್ರ ಸರ್ಕಾರಿ ಅಧಿಕಾರಿಯೊಬ್ಬರಿಗೆ ಹಾವು ಕಚ್ಚಿದೆ. ಗಾಯಗೊಂಡು ಆಸ್ಪತ್ರೆ ಸೇರಿದ್ದ ಅಧಿಕಾರಿ ಇದೀಗ ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಹಿನ್ನೆಲೆ: ಅಧಿಕಾರಿಗೆ ಆಗಾಗ ಕನಸಿನಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿದ್ದವಂತೆ. ಮನೆಯವರ ಬಳಿ ಹೇಳಿದಾಗ ಜ್ಯೋತಿಷ್ಯರ ಬಳಿ ಕರೆದೊಯ್ದಿದ್ದರು. ಜ್ಯೋತಿಷ್ಯರು ಈರೋಡಿನಲ್ಲಿರುವ ಹಾವು ಪೂಜಿಸುವ ಪೂಜಾರಿಯ ಬಳಿಗೆ ಕಳುಹಿಸಿದ್ದರು. ಈ ವೇಳೆ ಪೂಜಾರಿಯು ಕನಸಿನಲ್ಲಿ ಯಾವ ರೀತಿಯ ಹಾವು ಕಾಣಿಸುತ್ತದೆ ಎಂದೆಲ್ಲಾ ಪ್ರಶ್ನಿಸಿದ್ದು, ಕನ್ನಡಿ ಹಾವು ಕಾಣಿಸುತ್ತಿತ್ತು ಎಂದು ಹೇಳಿದ್ದಾರೆ. ಅದಕ್ಕೆ ಪೂಜಾರಿಯು ಆ ಹಾವನ್ನು ಪೂಜಿಸಿ ಕ್ಷಮೆಯಾಚಿಸಬೇಕೆಂದು ಹೇಳಿದ್ದರಂತೆ. ಅದರಂತೆ ಮನೆಯವರು ಒಪ್ಪಿ ಪೂಜೆಗೆ ಏರ್ಪಾಡು ಮಾಡಿದ್ದರು.