ಅಜ್ಮೀರ್(ರಾಜಸ್ಥಾನ):ಡ್ರಗ್ ಸಾಗಿಸುತ್ತಿದ್ದ ಕಾರೊಂದು ಪೊಲೀಸರಿಂದ ತಪ್ಪಿಸಿಕೊಳ್ಳಲು ಅತಿ ವೇಗವಾಗಿ ಹೋಗುತ್ತಿದ್ದಾಗ ಅಜ್ಮೀರ್ ಷರೀಫ್ ದರ್ಗಾಕ್ಕೆ ತೆರಳುತ್ತಿದ್ದ ಭಕ್ತರಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿ, ನಾಲ್ವರು ಗಾಯಗೊಂಡ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಕಾರಿನಲ್ಲಿ ದೋಡಾ ಪಾಪಿ ಎಂಬ ಡ್ರಗ್ಸ್ ಸಾಗಣೆ ಮಾಡುತ್ತಿದ್ದಾಗ ಪೊಲೀಸರನ್ನು ಕಂಡ ಚಾಲಕನ ವಾಹನವನ್ನು ಅತಿ ವೇಗವಾಗಿ ಓಡಿಸಿಕೊಂದು ಹೋಗಿದ್ದಾನೆ. ಈ ವೇಳೆ, ನಾಗ್ಪುರ ಮತ್ತು ರಾಯ್ಪುರದಿಂದ ಅಜ್ಮೀರ್ನ ಷರೀಫ್ ದರ್ಗಾಕ್ಕೆ ಚಾದರ್ ಹೊದಿಸಲು ಬರುತ್ತಿದ್ದ ಭಕ್ತರ ಮೇಲೆ ನಿಯಂತ್ರಣ ತಪ್ಪಿ ಕಾರು ಗುದ್ದಿದ್ದಾನೆ.
ಈ ವೇಳೆ ಸ್ಥಳದಲ್ಲಿಯೇ ಓರ್ವ ಭಕ್ತ ಸಾವನ್ನಪ್ಪಿದ್ದಾನೆ. ಅಲ್ಲದೇ ನಾಲ್ವರು ಗಾಯಗೊಂಡಿದ್ದಾರೆ. ಘಟನೆಯ ಬಳಿಕ ಕಾರು ಚಾಲಕ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ, ಕ್ರೋಧಗೊಂಡ ಭಕ್ತರು ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಬಳಿಕ ಪೊಲೀಸರು ಕಾರು ಚಾಲಕನನ್ನು ಬಂಧಿಸಿ, ಕಾರನ್ನು ವಶಕ್ಕೆ ಪಡೆದಿದ್ದಾರೆ.
ತಪಾಸಣೆ ವೇಳೆ ಕಾರಿನಲ್ಲಿ ಡ್ರಗ್ಸ್ ಪತ್ತೆಯಾಗಿದೆ. ಗಾಯಾಳಯಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಎಸ್ಪಿ ವಿಕಾಸ್ ಶರ್ಮಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಓದಿ:ಆರ್ಥಿಕ ಸಂಕಷ್ಟ: ಫೇಸ್ಬುಕ್ ಲೈವ್ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ದಂಪತಿ - ಪತ್ನಿ ಸಾವು!