ಹೈದರಾಬಾದ್:ಉಪ್ಪಳದಲ್ಲಿ ಅಮಾನುಷ ಘಟನೆಯೊಂದು ನಡೆದಿದೆ. ಬಾಲಕಿಯ ಮೇಲೆ ವೃದ್ಧನೊಬ್ಬ ಅತ್ಯಾಚಾರ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪೊಲೀಸರ ವರದಿ ಪ್ರಕಾರ, ಉಪ್ಪಳದ ಬಾಲಕಿ ಸ್ಥಳೀಯ ಶಾಲೆಯೊಂದರಲ್ಲಿ 7ನೇ ತರಗತಿ ಓದುತ್ತಿದ್ದಾಳೆ. ಓಲ್ಡ್ ಸಿಟಿಯ ಶೇಖ್ ಸದಕ್ (60) ಉಪ್ಪಳ್ ಬಸ್‌ಸ್ಟಾಂಡ್ ಪ್ರದೇಶದಲ್ಲಿ ಉರುವಲು ಮಿಷನ್‌ನಲ್ಲಿ ಕೆಲಸ ಮಾಡುತ್ತಾನೆ. ಜನವರಿ 3 ರಂದು ಉಪ್ಪಳ್ ಬಸ್ ನಿಲ್ದಾಣದಲ್ಲಿ ಬಾಲಕಿ ಬಸ್ ಹತ್ತಲು ಕಾಯುತ್ತಿದ್ದಳು. ಆರೋಪಿ ಸದಕ್, ಹುಡುಗಿಯನ್ನು ಪರಿಚಿತ ಹೆಸರಿನಿಂದ ಕರೆದಿದ್ದಾನೆ. ಹುಡುಗಿಗೆ ನಿಮ್ಮ ಹೆತ್ತವರ ಪರಿಚಯವಿದೆ ಎಂದು ಆರೋಪಿ ನಂಬಿಸಿದ್ದನು. ಮನೆಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿ, ಬಸ್ ನಿಲ್ದಾಣದಿಂದ ಹೊರಗೆ ಕರೆದೊಯ್ದಿದ್ದಾನೆ. ಅಲ್ಲಿಂದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ನಂತರ ಬಾಲಕಿಯನ್ನು ಅಲ್ಲೇ ಬಿಟ್ಟು ಓಡಿ ಹೋಗಿದ್ದಾನೆ.
ಬಾಲಕಿ ಮನೆಗೆ ತಡವಾಗಿ ಬಂದಿದ್ದಾಳೆ. ಮನೆಯಲ್ಲಿ ಸುಸ್ತಾದ ಕಾರಣ ಕುಟುಂಬಸ್ಥರಿಗೆ ಅನುಮಾನ ಬಂದಿತ್ತು. ಆಕೆಯನ್ನು ವಿಚಾರಿಸಿದ ನಂತರ, ಬಾಲಕಿ ನಡೆದ ಘಟನೆ ಬಗ್ಗೆ ತನ್ನ ತಾಯಿಗೆ ತಿಳಿಸಿದ್ದಾಳೆ. ಅದೇ ದಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಸಿಸಿಟಿವಿ ಕ್ಯಾಮರಾಗಳ ದೃಶ್ಯಾವಳಿಯ ಆಧಾರದ ಮೇಲೆ ಅತ್ಯಾಚಾರ ಎಸಗಿದ ವೃದ್ಧನನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ.
ಪ್ರತ್ಯೇಕ ಪ್ರಕರಣ, ಯುವತಿ ಮೇಲೆ ಅತ್ಯಾಚಾರ:ಯುವತಿಯ ಮೇಲೆ ಇಬ್ಬರು ಆರೋಪಿಗಳು ಅತ್ಯಾಚಾರ ಎಸಗಿರುವ ಘಟನೆ ಶನಿವಾರ ಮಧ್ಯರಾತ್ರಿ ಹೈದರಾಬಾದ್‌ನ ಹಳೆ ಬಸ್ತಿ ಬಂಡ್ಲಗುಡ ಪ್ರದೇಶದಲ್ಲಿ ನಡೆದಿತ್ತು. ಪ್ರಕರಣ ಬೆಳಕಿಗೆ ಬಂದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಗೌಸನಗರದ ಮುಳಕಲಪೆಂಟ ಶ್ರೀಕಾಂತ್ (22) ಹಾಗೂ ಅಫ್ಜಲ್ ಗಂಜ್‌ನ ಪಾನಗಂಟಿ ಕಾಶಿವಿಶ್ವನಾಥ್ (32) ಬಂಧಿತರು.
ಪೊಲೀಸ್ ಮಾಹಿತಿ:ಪ್ರಕರಣದ ಕುರಿತು ಮಾಹಿತಿ ನೀಡಿದ್ದ ಇನ್ಸ್ಪೆಕ್ಟರ್ ಮೊಹಮ್ಮದ್ ಶಾಕಿರ್ ಅಲಿ ಅವರು, "ಸಂತ್ರಸ್ತ ಯುವತಿ (21) ಸೂರ್ಯಪೇಟೆ ಮೂಲದವಳು. ತನ್ನ ಸಹೋದರ ಮತ್ತು ತಾಯಿಯೊಂದಿಗೆ ಮನೆಯಲ್ಲಿ ವಾಸವಾಗಿದ್ದಳು. ಶನಿವಾರ ತನ್ನ ಸಹೋದರನೊಂದಿಗೆ ಯಾವುದೋ ವಿಚಾರಕ್ಕೆ ಜಗಳವಾಡಿದ್ದಳು. ಇದರಿಂದ ಕೋಪಗೊಂಡಿದ್ದ ಆಕೆಯನ್ನು ಸಹೋದರ ಥಳಿಸಿದ್ದನು. ನೊಂದ ಯುವತಿ ಒಂಟಿಯಾಗಿ ಬಸ್ ನಿಲ್ದಾಣಕ್ಕೆ ಬಂದು ಹೈದರಾಬಾದ್ ಬಸ್ ಹತ್ತಿದ್ದಳು.
ರಾತ್ರಿ 10.40ರ ವೇಳೆಯಲ್ಲಿ ಹೈದರಾಬಾದ್‌ನ ಎಂಜಿಬಿಎಸ್ ಬಸ್ ನಿಲ್ದಾಣದಲ್ಲಿ ಇಳಿದಿದ್ದಳು. ಈ ಬಸ್ ನಿಲ್ದಾಣದಿಂದ ಹೊರಬಂದು ಟೀ ಸ್ಟಾಲ್ನಲ್ಲಿ ಟೀ ಕುಡಿದಿದ್ದಳು. ನಂತರ ಅಫ್ಜಲ್‌ಗಂಜ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಆರೋಪಿಗಳಾದ ಶ್ರೀಕಾಂತ್ ಹಾಗೂ ಕಾಶಿವಿಶ್ವನಾಥ್ ತಮ್ಮ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದು ಮಾತನಾಡಿಸಿದ್ದರು. ತಾನು ಸಮೀಪದ ಪೊಲೀಸ್ ಠಾಣೆಗೆ ಹೋಗುತ್ತಿರುವುದಾಗಿ ಯುವತಿ ಹೇಳಿದ್ದಾಳೆ. ಈ ಸಮಯದಲ್ಲಿ ಆರೋಪಿಗಳು, ನಾವೂ ಅಲ್ಲಿಗೆ ಹೋಗುತ್ತಿದ್ದೇವೆ, ನಿನ್ನನ್ನು ಕರೆದುಕೊಂಡು ಹೋಗುತ್ತೇವೆ ಎಂದು ನಂಬಿಸಿ, ಬೈಕ್ ಹತ್ತಿಸಿಕೊಂಡಿದ್ದರು.
ಈ ಆರೋಪಿಗಳನ್ನು ನಂಬಿದ ಯುವತಿ ಅವರ ಬೈಕ್ ಹತ್ತಿದ್ದಳು. ಆಕೆಯ ನಂಬಿಕೆಯನ್ನು ಇನ್ನೂ ಬಲವಾಗಿಸಲು ಅಫ್ಜಲ್‌ಗಂಜ್ ಪ್ರದೇಶದ ಐಸ್‌ಕ್ರೀಂ ಪಾರ್ಲರ್ ಹತ್ತಿರ ವಾಹನ ನಿಲ್ಲಿಸಿ, ಐಸ್‌ಕ್ರೀಂ ಖರೀದಿಸಿ ಆಕೆಗೆ ಕೊಟ್ಟಿದ್ದರು. ಬಳಿಕ, ನೇರವಾಗಿ ಬಂಡ್ಲಗುಡ ಪೊಲೀಸ್ ಠಾಣಾ ವ್ಯಾಪ್ತಿಯ ಲೇಕ್‌ವ್ಯೂ ಹಿಲ್ಸ್ ಬಳಿ ಆರೋಪಿ ಶ್ರೀಕಾಂತ್ ಸ್ಕ್ರ್ಯಾಪ್ ಗೋಡೌನ್‌ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಸ್ಥಳೀಯರು ಯುವತಿಯ ಕಿರುಚಾಟ ಕೇಳಿ ಹುಡುಕಾಡಿದಾಗ ಆರೋಪಿಗಳು ಸ್ಥಳದಿಂದ ಓಡಿ ಹೋಗಿದ್ದರೆ'' ಎಂದು ಇನ್ಸ್ಪೆಕ್ಟರ್ ತಿಳಿಸಿದರು. ಪೊಲೀಸರು ಇಬ್ಬರನ್ನೂ ಬಂಧಿಸಿ, ತನಿಖೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ:ಗಂಡನ ಜೊತೆ ಸೇರಿ ಹೆತ್ತ ತಾಯಿಯನ್ನೇ ಕೊಂದಿದ್ದ ಮಗಳು: ಮಂಡ್ಯದಲ್ಲಿ ವರ್ಷದ ಬಳಿಕ ಕೊಲೆ ಕೇಸ್ ಬಯಲು