ಕರ್ನಾಟಕ

karnataka

ETV Bharat / bharat

ಅವಳಿ - ಜವಳಿಯ ಲಾಭ ಪಡೆದ ಸಹೋದರರು: ಇಬ್ಬರಿಂದಲೂ ನವವಧು ಮೇಲೆ ನಿರಂತರ ಲೈಂಗಿಕ ದೌರ್ಜನ್ಯ - ಹೊಸದಾಗಿ ಮದುವೆಯಾದ ಯುವತಿಯನ್ನು ಲೈಂಗಿಕವಾಗಿ ಬಳಕೆ ಮಾಡಿಕೊಂಡ ಸಹೋದರರು

ಲಾತೂರಿನ ರಿಂಗ್ ರೋಡ್ ಪ್ರದೇಶದಲ್ಲಿ ವಾಸವಾಗಿದ್ದ ಯುವಕನೊಬ್ಬ ಆರು ತಿಂಗಳ ಹಿಂದೆ ವಿವಾಹವಾಗಿದ್ದ. ಈ ವಿವಾಹಿತ ವ್ಯಕ್ತಿಗೆ ಇನ್ನೊಬ್ಬ ಅವಳಿ ಸಹೋದರನೂ ಇದ್ದ. ಇವರಿಬ್ಬರನ್ನು ಬೇರೆ ಬೇರೆ ಎಂದು ಗುರುತಿಸಲು ಸಾಧ್ಯವಾಗದಷ್ಟು ಸಾಮ್ಯತೆ ಇತ್ತು. ಈ ಕಾರಣಕ್ಕೆ ಇಬ್ಬರೂ ಯುವತಿಯನ್ನ ಲೈಂಗಿಕವಾಗಿ ಬಳಕೆ ಮಾಡಿಕೊಂಡಿದ್ದಾರೆ.

ಅವಳಿ-ಜವಳಿಯ ಲಾಭ ಪಡೆದ ಸಹೋದರರು
ಅವಳಿ-ಜವಳಿಯ ಲಾಭ ಪಡೆದ ಸಹೋದರರು

By

Published : May 20, 2022, 7:55 PM IST

ಲಾತೂರ್(ಮಹಾರಾಷ್ಟ್ರ): ಒಂದೇ ಕುಟುಂಬದ ಇಬ್ಬರು ಅವಳಿ ಸಹೋದರರು ತಮ್ಮ ಸಾಮ್ಯತೆಯ ಲಾಭ ಪಡೆದು ಹೊಸದಾಗಿ ಮದುವೆಯಾದ ಯುವತಿಯನ್ನು ಲೈಂಗಿಕವಾಗಿ ಬಳಕೆ ಮಾಡಿಕೊಂಡಿದ್ದಾರೆ. ಈಕೆ ತವರು ಮನೆಗೆ ಬಂದ ನಂತರ ಘಟನೆ ಬೆಳಕಿಗೆ ಬಂದಿದೆ.

ಏನಿದು ಘಟನೆ?: ಲಾತೂರಿನ ರಿಂಗ್ ರೋಡ್ ಪ್ರದೇಶದಲ್ಲಿ ವಾಸವಾಗಿದ್ದ ಯುವಕನೊಬ್ಬ ಆರು ತಿಂಗಳ ಹಿಂದೆ ವಿವಾಹವಾಗಿದ್ದ. ಈ ವಿವಾಹಿತ ವ್ಯಕ್ತಿಗೆ ಇನ್ನೊಬ್ಬ ಅವಳಿ ಸಹೋದರನೂ ಇದ್ದ. ಇವರಿಬ್ಬರನ್ನು ಬೇರೆ ಬೇರೆ ಎಂದು ಗುರುತಿಸಲು ಸಾಧ್ಯವಾಗದಷ್ಟು ಸಾಮ್ಯತೆ ಇತ್ತು. ಹಾಗಾಗಿ, ಮನೆಗೆ ಬಂದ 20 ವರ್ಷದ ವಧುವಿಗೆ ಗಂಡ ಮತ್ತು ಗಂಡನ ಅಣ್ಣ ಯಾರು ಎಂಬುದು ಅರ್ಥವಾಗಿರಲಿಲ್ಲ.

ಇದರ ಲಾಭವನ್ನು ಪಡೆದುಕೊಂಡ ಯುವಕನ ಅಣ್ಣ ಆಕೆಯನ್ನು ನಿರಂತರವಾಗಿ ಲೈಂಗಿಕವಾಗಿ ಬಳಕೆ ಮಾಡಿಕೊಂಡಿದ್ದಾನಂತೆ. ಮದುವೆಯಾದ ಆರು ತಿಂಗಳ ನಂತರ ಇದು ಬೆಳಕಿಗೆ ಬಂದಿದೆ.

ಗಂಡ, ಅತ್ತೆಯ ಬೇಜವಾಬ್ದಾರಿ:ವಿವಾಹಿತ ಮಹಿಳೆ ಇದನ್ನು ಗಮನಿಸಿದ ಕೂಡಲೇ ಪತಿಗೆ ಸೂಚಿಸಿದ್ದಾಳೆ. ಆದರೆ, ಆತ ಏನು ತೊಂದರೆ ಇಲ್ಲ ಮುಂದುವರಿಸು ಎಂದು ಸಲಹೆ ನೀಡಿದ್ದಾನೆ. ಇದರಿಂದ ಕಂಗೆಟ್ಟ ಸಂತ್ರಸ್ತೆ ಅತ್ತೆಗೆ ಮಾಹಿತಿ ನೀಡಿದ್ದಾಳೆ. ಅತ್ತೆ ಸಹ ಮಗ ಹೇಳಿದಂತೆ ಹೇಳಿ ಕಳುಹಿಸಿದ್ದಾಳೆ.

ಈ ಎಲ್ಲಾ ಘಟನೆಯಿಂದ ಬೇಸತ್ತ ಯುವತಿ ತವರು ಮನೆಗೆ ಮರಳಿದ್ದಾಳೆ. ಕೆಲವು ದಿನಗಳ ನಂತರ ಮಾವ ಯುವತಿಯನ್ನು ಮನೆಗೆ ಕರೆದುಕೊಂಡು ಬರಲು ಹೋಗಿದ್ದಾನೆ. ಆದರೆ, ಯುವತಿ ಮಾವನೊಂದಿಗೆ ಹೋಗಲು ನಿರಾಕರಿಸಿದ್ದಾಳೆ. ಗಂಡನ ಮನೆಗೆ ಯಾಕೆ ಹೋಗಲ್ಲ ಎಂದು ಆಕೆಯ ಮನೆಯವರು ಕೇಳಿದಾಗ ಆಕೆ ಈ ಎಲ್ಲ ಮಾಹಿತಿ ಹೊರ ಹಾಕಿದ್ದಾಳೆ.

ವಿವಾಹಿತ ಯುವತಿಯ ಪೋಷಕರಿಗೆ ಈ ಗಂಭೀರ ವಿಷಯ ತಿಳಿದ ನಂತರ ಅವರು ಶಿವಾಜಿನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಐಪಿಸಿ ಸೆಕ್ಷನ್ 378, 323, 506 ಮತ್ತು 24ರ ಅಡಿ ಪ್ರಕರಣ ದಾಖಲಾಗಿದ್ದು, ಅವಳಿ ಸಹೋದರರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಹಗಲಲ್ಲೇ ಫೈನಾನ್ಸ್ ಕಂಪನಿ ಮಾಲೀಕನ ಹತ್ಯೆ: ಬೆಚ್ಚಿಬೀಳಿಸುವ ಸಿಸಿಟಿವಿ ದೃಶ್ಯಾವಳಿ

For All Latest Updates

TAGGED:

ABOUT THE AUTHOR

...view details