ಆಲಪ್ಪುಳ (ಕೇರಳ): ಇಲ್ಲೊಬ್ಬ ಬಾಲಕನಿಗೆ ಹುಂಜವೊಂದು ಉತ್ತಮ ಸ್ನೇಹಿತನಾಗುವ ಜೊತೆಗೆ ರಕ್ಷಕ ಕೂಡ ಆಗಿದೆ. ಹುಂಜ ಮತ್ತು ಬಾಲಕನ ಈ ಅಪರೂಪದ ಸ್ನೇಹಕ್ಕೆ ಸಾಕ್ಷಿಯಾಗಿರುವುದು ಕೇರಳದ ಆಲಪ್ಪುಳ. ಕರುಮಾಡಿ ಸರ್ಕಾರಿ ಪ್ರೌಢಶಾಲೆಯ 6ನೇ ತರಗತಿ ವಿದ್ಯಾರ್ಥಿ ಮಿಧುನ್‌ಗೆ ಹುಂಜ ಅತ್ಯಂತ ಆತ್ಮೀಯ ಸ್ನೇಹಿತ ಆಗಿದೆ.
ಈ ಹುಂಜದ ಹೆಸರು ‘ಕುಟ್ಟಪ್ಪನ್’. 11 ವರ್ಷದ ಮಿಧುನ್‌ಗೆ ನಿನ್ನ ಆತ್ಮೀಯ ಗೆಳೆಯನ ಹೆಸರು ಏನು? ಎಂದು ಕೇಳಿದ್ರೆ, ಅವನು ಹೇಳುವ ಹೆಸರು ಕುಟ್ಟಪ್ಪನ್. ಮಿಧುನ್ ಅವರ ಮನೆಯವರು ಸುಮಾರು ಒಂದೂವರೆ ವರ್ಷಗಳ ಹಿಂದೆ ಈ ಹುಂಜವನ್ನು ತಂದು ಕುಟ್ಟಪ್ಪನ್ ಎಂದು ಹೆಸರಿಸಿದರು. ಲಾಕ್‌ಡೌನ್ ಅವಧಿಯಲ್ಲಿ ಕುಟ್ಟಪ್ಪನ್ ಮತ್ತು ಮಿಧುನ್ ಹತ್ತಿರವಾದರು.
ಮೊದಲು ಕುಟ್ಟಪ್ಪನ್ ದೂರದಿಂದಲೇ ಮಿಧುನ್ ಆಟ ನೋಡುತ್ತಿದ್ದ. ಆದರೆ ಇದೀಗ ಬಾಲ್ನೊಂದಿಗೆ ಕುಟ್ಟಪ್ಪನ್ ಮಿಧುನ್ ಜೊತೆ ಆಡುತ್ತಾನೆ. ಮಿಧುನ್ ತನ್ನ ಸೈಕಲ್ನನ್ನು ಹೊರತೆಗೆದಾಗ, ಕುಟ್ಟಪ್ಪನೂ ಸವಾರಿಗಾಗಿ ಅದರ ಮೇಲೆ ಹೋಗುತ್ತಾನೆ. ಮಿಧುನ್‌ಗೆ ಕುಟ್ಟಪ್ಪನ್ ಗೆಳೆಯನಷ್ಟೇ ಅಲ್ಲ ಸೆಕ್ಯೂರಿಟಿ ಗಾರ್ಡ್ ಕೂಡ ಹೌದು. ಕುಟ್ಟಪ್ಪನ್ ಯಾರಿಗೂ ಮಿಧುನ್‌ನನ್ನು ಬೈಯಲು ಬಿಡುವುದಿಲ್ಲ ಮತ್ತು ಯಾರಾದರೂ ಹಾಗೆ ಮಾಡಿದರೆ, ಅವರ ಮೇಲೆ ದಾಳಿ ಮಾಡುತ್ತಾನೆ.
ಇದನ್ನೂ ಓದಿ:'ಪ್ರೇಮಿ'ಗಾಗಿ ರಸ್ತೆಯಲ್ಲೇ ಕಾಲೇಜು ಹುಡುಗಿಯರ ಕಿತ್ತಾಟ: ವಿಡಿಯೋ
ಕುಟ್ಟಪ್ಪನ್ ಅಪರಿಚಿತರನ್ನು ಮಿಧುನ್‌ಗೆ ಹೆಚ್ಚು ಹತ್ತಿರವಾಗಲು ಬಿಡುವುದಿಲ್ಲ. ಅಲ್ಲದೇ ಅವನ ಅಜ್ಜಿಯೊಂದಿಗೆ ಮಾತ್ರ ಸ್ನೇಹದಿಂದ ಇರುತ್ತಾನೆ. ಅವನು ಮಿಧುನ್‌ನ ಸಹೋದರ ಹರಿಕೃಷ್ಣನ್ ಸೇರಿದಂತೆ ಇತರ ಎಲ್ಲ ಕುಟುಂಬ ಸದಸ್ಯರನ್ನು ಹೆದರಿಸುತ್ತಾನೆ.