ಕರ್ನಾಟಕ

karnataka

By

Published : May 8, 2021, 4:11 PM IST

ETV Bharat / bharat

ಮರಾಠ ಮೀಸಲಾತಿ ಕಾಯ್ದೆ ರದ್ದು: ಸುಪ್ರೀಂ ಆದೇಶದ ವಿರುದ್ಧ ಪರಿಶೀಲನಾ ಅರ್ಜಿ ಸಲ್ಲಿಸಿದ ಮಹಾರಾಷ್ಟ್ರ

ಮಹಾರಾಷ್ಟ್ರದಲ್ಲಿ ಶಿಕ್ಷಣದಲ್ಲಿ ಪ್ರವೇಶಾತಿ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡುವ ಕಾನೂನನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದ್ದು, ಇದನ್ನ ಪ್ರಶ್ನೆ ಮಾಡಿರುವ ಅಲ್ಲಿನ ಸರ್ಕಾರ ಇದೀಗ ಮರು ಪರಿಶೀಲನಾ ಅರ್ಜಿ ಸಲ್ಲಿಕೆ ಮಾಡಿದೆ.

Maharashtra Minister Ashok Chavan
Maharashtra Minister Ashok Chavan

ನವದೆಹಲಿ: ಮಹಾರಾಷ್ಟ್ರ ಸರ್ಕಾರ ಶಿಕ್ಷಣ/ಉದ್ಯೋಗಗಳಲ್ಲಿ ಮರಾಠ ಸಮುದಾಯಕ್ಕೆ ಶೇ 50ರಷ್ಟು ನೀಡಿದ್ದ ಮೀಸಲಾತಿಯನ್ನ ಸುಪ್ರೀಂಕೋರ್ಟ್​ ರದ್ದುಪಡಿಸಿದ್ದು, ಈ ಆದೇಶ ಪ್ರಶ್ನೆ ಮಾಡಿರುವ ಅಲ್ಲಿನ ಸರ್ಕಾರ ಇದೀಗ ಪರಿಶೀಲನಾ ಅರ್ಜಿ ಸಲ್ಲಿಕೆ ಮಾಡಿದೆ.

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮಹಾರಾಷ್ಟ್ರ ಸಚಿವ ಅಶೋಕ್​ ಚವಾಣ್​​ ಇದೀಗ ಪರಿಶೀಲನಾ ಅರ್ಜಿ ಸಲ್ಲಿಕೆ ಮಾಡಿದ್ದಾಗಿ ಮಾಹಿತಿ ನೀಡಿದ್ದಾರೆ. ಮಹಾರಾಷ್ಟ್ರ ಸರ್ಕಾರ ಶಿಕ್ಷಣದಲ್ಲಿ ಪ್ರವೇಶಾತಿ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡುವ ಕಾನೂನು ಇದಾಗಿತ್ತು. ಅದನ್ನ ಸುಪ್ರೀಂಕೋರ್ಟ್​​ ರದ್ದು ಪಡಿಸಿ ಮಹತ್ವದ ಆದೇಶ ನೀಡಿತ್ತು. ಮರಾಠಾ ಸಮುದಾಯದ ಜನರನ್ನು ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಸಮುದಾಯವೆಂದು ಘೋಷಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿತು.

ಕೆಲವು ಶಿಕ್ಷಣ ತಜ್ಞರು ಮತ್ತು ಸಾಮಾಜಿಕ ಕಾರ್ಯಕರ್ತರ ಆಕ್ಷೇಪಣೆಗಳ ಹಿನ್ನೆಲೆ ಕಳೆದ ಎರಡು ವರ್ಷಗಳಿಂದ ನ್ಯಾಯಾಲಯದಲ್ಲಿ ಕಾನೂನು ಸಮರ ನಡೆಯುತ್ತಿತ್ತು. ಕಳೆದ ಎರಡು ದಿನಗಳ ಹಿಂದೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಲ್ ನಾಗೇಶ್ವರ ರಾವ್, ಎಸ್ ಅಬ್ದುಲ್ ನಜೀರ್, ಹೇಮಂತ್ ಗುಪ್ತಾ ಮತ್ತು ಎಸ್ ರವೀಂದ್ರ ಭಟ್ ಅವರನ್ನು ಒಳಗೊಂಡ ಪೀಠವು ಈ ಮಹತ್ವದ ಆದೇಶ ನೀಡಿತು.

ಇದನ್ನೂ ಓದಿ: ಮೀಸಲಾತಿಗೆ ಲಕ್ಷ್ಮಣ ರೇಖೆ : ಮರಾಠ ಮೀಸಲಾತಿ ಕೋಟಾ ಅಸಾಂವಿಧಾನಿಕ ಎಂದ ಸುಪ್ರೀಂಕೋರ್ಟ್​

2018ರಲ್ಲಿ ಮರಾಠರು ಹಿಂದುಳಿದ ವರ್ಗಕ್ಕೆ ಸೇರಿದವರು ಎಂದು ಎಂಜಿ ಗಾಯಕವಾಡ್ ಆಯೋಗ ನೀಡಿದ್ದ ವರದಿ ಆಧಾರದ ಮೇಲೆ ಅಲ್ಲಿ ನಸರ್ಕಾರ ಈ ಮೀಸಲಾಗಿ ಜಾರಿಗೆ ತಂದಿತ್ತು. ಮಾರ್ಚ್ 26 ರಂದು, ಹಲವು ಮೇಲ್ಮನವಿ ಅರ್ಜಿಗಳ ಸಲ್ಲಿಕೆ ಆಧಾರದ ಮೇಲೆ ಸುಪ್ರೀಂಕೋರ್ಟ್ ಅಂತಿಮ ತೀರ್ಪನ್ನು ಕಾಯ್ದಿರಿಸಿತ್ತು.

ABOUT THE AUTHOR

...view details