ಗ್ಯಾಂಗ್ಟಾಕ್:ಸಿಕ್ಕಿಂನ ಶೆರ್ತಾಂಗ್ ಬಳಿ ನಿನ್ನೆ ರಾತ್ರಿ ಹಿಮದಲ್ಲಿ ಸಿಲುಕಿದ್ದ 17 ಪ್ರವಾಸಿಗರನ್ನು ಐಟಿಬಿಪಿ ಜವಾನರು ರಕ್ಷಿಸಿದ್ದಾರೆ.
13,500 ಅಡಿಗಳ ಎತ್ತರ ಹಿಮ ಬೆಟ್ಟದಲ್ಲಿ ಸಿಲುಕಿದ್ದ 17 ಪ್ರವಾಸಿಗರನ್ನು ರಕ್ಷಿಸಿದ ಯೋಧರು! - ಸಿಕ್ಕಿಂನಲ್ಲಿ 17 ಪ್ರವಾಸಿಗರನ್ನು ರಕ್ಷಿಸಿದ ಯೋಧರು ಸುದ್ದಿ
ಸುಮಾರು 13,500 ಅಡಿಗಳ ಎತ್ತರ ಹಿಮ ಬೆಟ್ಟದಲ್ಲಿ ಸಿಲುಕಿದ್ದ 17 ಪ್ರವಾಸಿಗರನ್ನು ಯೋಧರು ರಕ್ಷಿಸಿರುವ ಘಟನೆ ಸಿಕ್ಕಿಂನ ಶೆರ್ತಾಂಗ್ನಲ್ಲಿ ನಡೆದಿದೆ.
![13,500 ಅಡಿಗಳ ಎತ್ತರ ಹಿಮ ಬೆಟ್ಟದಲ್ಲಿ ಸಿಲುಕಿದ್ದ 17 ಪ್ರವಾಸಿಗರನ್ನು ರಕ್ಷಿಸಿದ ಯೋಧರು! rescue mission was carried out, rescue mission was carried out by personnel rescue mission was carried out by personnel in sikkim Sikkim news 17 ಪ್ರವಾಸಿಗರನ್ನು ರಕ್ಷಿಸಿದ ಯೋಧರು ಸಿಕ್ಕಿಂನಲ್ಲಿ 17 ಪ್ರವಾಸಿಗರನ್ನು ರಕ್ಷಿಸಿದ ಯೋಧರು ಸಿಕ್ಕಿಂನಲ್ಲಿ 17 ಪ್ರವಾಸಿಗರನ್ನು ರಕ್ಷಿಸಿದ ಯೋಧರು ಸುದ್ದಿ ಸಿಕ್ಕಿಂ ಸುದ್ದಿ](https://etvbharatimages.akamaized.net/etvbharat/prod-images/768-512-11137371-135-11137371-1616573593251.jpg)
13500 ಅಡಿಗಳ ಎತ್ತರ ಹಿಮ ಬೆಟ್ಟದಲ್ಲಿ ಸಿಲುಕಿದ್ದ 17 ಪ್ರವಾಸಿಗರನ್ನು ರಕ್ಷಿಸಿದ ಯೋಧರು
13500 ಅಡಿಗಳ ಎತ್ತರ ಹಿಮ ಬೆಟ್ಟದಲ್ಲಿ ಸಿಲುಕಿದ್ದ 17 ಪ್ರವಾಸಿಗರನ್ನು ರಕ್ಷಿಸಿದ ಯೋಧರು
ಮಾಹಿತಿಯ ಪ್ರಕಾರ, ಸಿಕ್ಕಿಂನ ಸೌಂದರ್ಯ ಸವಿಯಲು ಮೂರು ಕಾರಿನ ಮೂಲಕ 17 ಪ್ರವಾಸಿಗರು ಬಂದಿದ್ದರು. ಪ್ರವಾಸ ನಿಮಿತ್ತ ಶರ್ತಾಂಗ್ ಬಳಿಯ 13,500 ಅಡಿಗಳ ಎತ್ತರದ ಬೆಟ್ಟದ ಮೇಲೆ ಹತ್ತಿದ್ದಾರೆ. ಆದ್ರೆ ಈ ವೇಳೆ ಭಾರಿ ಹಿಮ ಮಳೆಯಾಗಿದ್ದು, 17 ಪ್ರವಾಸಿಗರು ಅಲ್ಲೇ ಸಿಲುಕಿಕೊಂಡಿದ್ದಾರೆ.
ಇನ್ನು ಈ ಸುದ್ದಿ ಇಂಡೋ-ಟಿಬೆಟಿಯನ್ ಯೋಧರಿಗೆ ತಿಳಿದಿದೆ. ಕೂಡಲೇ ಹಿಮದಿಂದ ಆವೃತವಾದ ಬೆಟ್ಟವನ್ನು ತಲುಪಿ 17 ಪ್ರವಾಸಿಗರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.