ಕರ್ನಾಟಕ

karnataka

ETV Bharat / bharat

ರಾಜ್ಯದ ಅತ್ಯಾಚಾರ ಪ್ರಕರಣಗಳ ಸಂಕ್ಷಿಪ್ತ ವರದಿ.. 2019ರಲ್ಲೇ ಅತಿ ಹೆಚ್ಚು ಕೇಸ್

ಕರ್ನಾಟಕದಲ್ಲಿ ಅತ್ಯಾಚಾರ ಪ್ರಕರಣಗಳು ಹೊಸತೇನಲ್ಲ. ಇಂತಹ ನೂರಾರು ಭಯಾನಕ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿವೆ. ಅದರಲ್ಲೂ 2019 ರಲ್ಲಿ ಅತಿಹೆಚ್ಚು ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.

A report on rape cases in karnataka
ಕರ್ನಾಟಕದ ಅತ್ಯಾಚಾರ ಪ್ರಕರಣಗಳ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ವರದಿ

By

Published : Aug 28, 2021, 9:12 AM IST

Updated : Aug 28, 2021, 9:33 AM IST

ಬೆಂಗಳೂರು: ಆಗಸ್ಟ್ 24ರಂದು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದ ದುರುಳರು ಆಕೆಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ್ದರು. ಈ ಘಟನೆ ನಡೆದ ಮೂರು ದಿನಗಳಲ್ಲೇ ಬೆಳಗಾವಿಯಲ್ಲಿ ಕೂಡ ಇಂತಹದ್ದೇ ಮತ್ತೊಂದು ಹೇಯ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಬೆಳಗಾವಿಯ ಗೋಕಾಕ ತಾಲೂಕಿನ ಗ್ರಾಮವೊಂದರಲ್ಲಿ 15 ವರ್ಷದ ಬಾಲಕಿ ಮೇಲೆ ನಾಲ್ವರು ಕಾಮುಕರು ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ.

ಇಂತಹ ಪ್ರಕರಣಗಳು ರಾಜ್ಯದಲ್ಲಿ ಹೊಸತೇನಲ್ಲ. ಅದರಲ್ಲಿಯೂ 2019ರಲ್ಲಿ ಅತಿ ಹೆಚ್ಚು ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. 2019ರ ಜನವರಿಯಲ್ಲಿ ಬೆಂಗಳೂರಿನ ಪಾಪರೆಡ್ಡಿಪಾಳ್ಯದಲ್ಲಿ ಮನೆಯಲ್ಲಿ ಏಕಾಂಗಿಯಾಗಿದ್ದ ಮಹಿಳೆಗೆ ಚಾಕು ತೋರಿಸಿ ಅತ್ಯಾಚಾರ ಮಾಡಿದ್ದ. ಅದೇ ವರ್ಷ ಏಪ್ರಿಲ್​ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪ್ರಾಪ್ತೆಯೊಬ್ಬಳು ತನ್ನ ಹೆತ್ತ ತಂದೆಯಿಂದಲೇ ಅತ್ಯಾಚಾರಕ್ಕೊಳಗಾಗಿದ್ದಳು. ಇಂತಹ ನೂರಾರು ಭಯಾನಕ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿವೆ.

ಪರಿಚಯಸ್ಥರಿಂದಲೇ ಕೃತ್ಯ..!

ಗಂಭೀರವಾದ ವಿಷಯವೇನೆಂದರೆ 2019ರಲ್ಲಿ ರಾಜ್ಯದಲ್ಲಿ ವರದಿಯಾದ ಅತ್ಯಾಚಾರ ಪ್ರಕರಣಗಳ ಪೈಕಿ ಶೇ.71 ರಷ್ಟು ಕೇಸ್​ಗಳಲ್ಲಿ ಅತ್ಯಾಚಾರ ಎಸಗಿದ ಆರೋಪಿಗಳು ಸಂತ್ರಸ್ತೆಗೆ ತಿಳಿಯದವರಾಗಿದ್ದಾರೆ. ಆದರೆ ಉಳಿದ ಶೇ.29ರಷ್ಟು ಕೇಸ್​ಗಳಲ್ಲಿ ಸಂಬಂಧಿಕರು, ಪೋಷಕರು, ಸ್ನೇಹಿತರು, ನೆರೆಹೊರೆಯವರು ಸೇರಿದಂತೆ ಸಂತ್ರಸ್ತೆಯನ್ನು ಬಲ್ಲವರೇ ಕೃತ್ಯ ಎಸಗಿದ್ದಾರೆ. 2019 ರಲ್ಲಿ ಒಟ್ಟು 494 ರೇಪ್​ ಕೇಸ್​ಗಳು ದಾಖಲಾಗಿದ್ದು, ಇದರಲ್ಲಿ 30 ಮಂದಿ ಸಂತ್ರಸ್ತೆಯ ಸಂಬಂಧಿಕರೇ ಆಗಿದ್ದಾರೆ. 39 ಮಂದಿ ನೆರೆಹೊರೆಯವರು ಹಾಗೂ ಇಬ್ಬರು ಪೋಷಕರಾಗಿದ್ದಾರೆ. ಹೀಗಾಗಿ ಅಪರಿಚಿತರಿಂದ ಅತ್ಯಾಚಾರ ನಡೆಯುವುದಕ್ಕಿಂತಲೂ ಪರಿಚಿತರೇ ಕೃತ್ಯ ಎಸಗುವುದು ಗಂಭೀರ ಸಮಸ್ಯೆಯಾಗಿದೆ.

ಇದನ್ನೂ ಓದಿ: ಮೈಸೂರು ಬಳಿಕ ಬೆಳಗಾವಿಯಲ್ಲೂ ಹೇಯ ಕೃತ್ಯ: ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್..! ಕಾಮುಕರು ಅರೆಸ್ಟ್​

SC/ST ಮಹಿಳೆಯರ ಮೇಲೆ ಅತ್ಯಾಚಾರ ಹೆಚ್ಚಳ

2018 ರಲ್ಲಿ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ 130 ಮಹಿಳೆಯರು ಅತ್ಯಾಚಾರಕ್ಕೊಳಗಾಗಿದ್ದರು. ಆದರೆ 2019ರಲ್ಲಿ ಈ ಪ್ರಮಾಣ ಶೇ.61.5ರಷ್ಟು ಹೆಚ್ಚಳವಾಗಿದೆ. 210 ಎಸ್‌ಸಿ/ಎಸ್‌ಟಿ ಮಹಿಳೆಯರ ಮೇಲೆ ಕಾಮುಕರು ಎರಗಿದ್ದಾರೆ. 2018ರ ಜನವರಿಯಿಂದ 2020ರ ಆಗಸ್ಟ್ 31 ರವರೆಗೆ 428 ಎಸ್‌ಸಿ/ಎಸ್‌ಟಿ ಮಹಿಳೆಯರ ಮೇಲೆ ಅತ್ಯಾಚಾರಗಳಾಗಿವೆ. 263 ಮಹಿಳೆಯರನ್ನು ಕೊಲೆ ಮಾಡಲಾಗಿದೆ. ಆರೋಪಿಗಳು ಹೆಚ್ಚಾಗಿ ಬೇರೆ ಜಾತಿಯವರೇ ಆಗಿದ್ದಾರೆ ಎನ್ನುವುದನ್ನು ನಾವಿಲ್ಲಿ ಗಮನಿಸಬೇಕಿದೆ. ಕೋವಿಡ್​ ಸಾಂಕ್ರಾಮಿಕ, ಲಾಕ್​ಡೌನ್​ ವೇಳೆಯೂ 88 ಕೇಸ್​ಗಳು ದಾಖಲಾಗಿವೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಮಾಹಿತಿಯ ಪ್ರಕಾರ, ಕಳೆದ 3 ವರ್ಷಗಳಲ್ಲಿ ದೌರ್ಜನ್ಯ ತಡೆ ಕಾಯ್ದೆ-1989ರ ಅಡಿಯಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯದ ಮಹಿಳೆಯರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಕೊಲೆ ಸೇರಿದಂತೆ ಒಟ್ಟು 4,162 ಅಪರಾಧ ಪ್ರಕರಣಗಳು ದಾಖಲಾಗಿವೆ.

ಕರ್ನಾಟಕದ ಪ್ರಮುಖ ಅತ್ಯಾಚಾರ ಪ್ರಕರಣಗಳು

  • ಅಸ್ಸೋಂನ 19 ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯನ್ನು ಬೆಂಗಳೂರಿನಲ್ಲಿ ಅತ್ಯಾಚಾರ ಬಳಿಕ ಕೊಲೆ ಮಾಡಲಾಗಿತ್ತು.
  • ಮಂಗಳೂರಿನಲ್ಲಿ 17 ವರ್ಷದ ದಲಿತ ಬಾಲಕಿಯ ಮೇಲೆ ಐವರು ಸಾಮೂಹಿಕ ಅತ್ಯಾಚಾರವೆಸಗಿ ಯಾರಿಗಾದರೂ ಹೇಳಿದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದರು. ಬಳಿಕ ಆಕೆ ಗರ್ಭಿಣಿಯೂ ಆಗಿದ್ದಳು.
  • ಚಿಕ್ಕಮಗಳೂರಿನಲ್ಲಿ 15 ವರ್ಷದ ಬಾಲಕಿಯ ಮೇಲೆ ಗ್ಯಾಂಗ್​ ರೇಪ್​ ಹಾಗೂ ಲೈಂಗಿಕ ದೌರ್ಜನ್ಯ ನಡೆಸಿದ್ದ ಆರೋಪದಡಿ ಆಕೆಯ ಚಿಕ್ಕಮ್ಮ ಸೇರಿ 8 ಮಂದಿಯನ್ನು ಪೊಲೀಸರು ಬಂಧಿಸಿದ್ದರು.
  • ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಐವರು ಬಾಂಗ್ಲಾದೇಶ ಪ್ರಜೆಗಳು ಆಕೆ ಮೇಲೆ ಹಲ್ಲೆ ನಡೆಸಿದ್ದರು.

ಇದನ್ನೂ ಓದಿ: ಮೈಸೂರು ಅತ್ಯಾಚಾರ ಸಂತ್ರಸ್ತೆಯ ಸ್ನೇಹಿತನ ಹೇಳಿಕೆ ಪಡೆದ ಪೊಲೀಸರು: ಆತ ಹೇಳಿದ್ದಿಷ್ಟು...

ಭಾರತದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಶಿಕ್ಷೆ

ನಮ್ಮ ದೇಶದಲ್ಲಿ ಅತ್ಯಾಚಾರವು ಗ್ರಹಿಸಬಹುದಾದ ಅಪರಾಧವಾಗಿದೆ. ಅಧಿಕಾರದಲ್ಲಿರುವ ವ್ಯಕ್ತಿ ಅಥವಾ ಹತ್ತಿರದ ಸಂಬಂಧಿಗಳು ಬಾಲಕಿ/ಯುವತಿ/ಮಹಿಳೆಗೆ ಲೈಂಗಿಕ ದೌರ್ಜನ್ಯ ನೀಡಿದರೆ ಅಂತವರಿಗೆ ದಂಡದೊಂದಿಗೆ ಕನಿಷ್ಠ 10 ವರ್ಷ ಜೈಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ ನೀಡಲಾಗುತ್ತದೆ. ಉಳಿದ ಪ್ರಕರಣಗಳಲ್ಲಿ ಅಪರಾಧಿಗಳಿಗೆ 1 ರಿಂದ 7 ಅಥವಾ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯ

2012 ರಲ್ಲಿ ಕರ್ನಾಟಕ ಸರ್ಕಾರವು ಐಪಿಸಿ ಸೆಕ್ಷನ್ 376 ರ ಅಡಿಯಲ್ಲಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ದೇಶದಲ್ಲಿ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. 2012ರಲ್ಲಿ ಕರ್ನಾಟಕ ಸರ್ಕಾರವು 10 ಫಾಸ್ಟ್ ಟ್ರ್ಯಾಕ್ ಕೋರ್ಟ್​ಗಳನ್ನು ಸ್ಥಾಪಿಸಿದೆ.

Last Updated : Aug 28, 2021, 9:33 AM IST

ABOUT THE AUTHOR

...view details