ಕರ್ನಾಟಕ

karnataka

ETV Bharat / bharat

ಏಕಕಾಲಕ್ಕೆ ಸೂರ್ಯಾಸ್ತ-ಚಂದ್ರೋದಯ ದರ್ಶನ: ಕನ್ಯಾಕುಮಾರಿಯಲ್ಲಿ ನಾಳೆ ವಿಸ್ಮಯ! - ಕನ್ಯಾಕುಮಾರಿಯು ವಿಶಿಷ್ಟವಾದ ಭೌಗೋಳಿಕ ಪ್ರದೇಶ

ಕನ್ಯಾಕುಮಾರಿಯಲ್ಲಿ ಶನಿವಾರ ಒಂದೇ ಸ್ಥಳದಲ್ಲಿ ನಿಂತು ಏಕಕಾಲಕ್ಕೆ ಸೂರ್ಯಾಸ್ತ ಮತ್ತು ಚಂದ್ರೋದಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಈ ವಿಸ್ಮಯವನ್ನು ವೀಕ್ಷಿಸಲು ಈಗಾಗಲೇ ಅನೇಕ ಪ್ರವಾಸಿಗರು ಕನ್ಯಾಕುಮಾರಿಯತ್ತ ಮುಖ ಮಾಡಿದ್ದಾರೆ.

ಕನ್ಯಾಕುಮಾರಿಯಲ್ಲಿ ವಿಸ್ಮಯ
ಕನ್ಯಾಕುಮಾರಿಯಲ್ಲಿ ವಿಸ್ಮಯ

By

Published : Apr 15, 2022, 4:45 PM IST

Updated : Apr 15, 2022, 5:00 PM IST

ಚೆನ್ನೈ(ತಮಿಳುನಾಡು): ನೆರೆಯ ತಮಿಳುನಾಡಿನ ಪ್ರಸಿದ್ಧ ಪ್ರವಾಸಿತಾಣ ಕನ್ಯಾಕುಮಾರಿಯಲ್ಲಿ ಇದೇ ಏಪ್ರಿಲ್​ 16ರಂದು ಅಂದರೆ(ನಾಳೆ) ಶನಿವಾರ ವಿಸ್ಮಯ ನಡೆಯಲಿದೆ. ಒಂದೇ ಸ್ಥಳದಲ್ಲಿ ನಿಂತು ಏಕಕಾಲಕ್ಕೆ ಸೂರ್ಯಾಸ್ತ ಮತ್ತು ಚಂದ್ರೋದಯವನ್ನು ಕಣ್ತುಂಬಿಕೊಳ್ಳಬಹುದು. ಒಂದೇ ಸಮಯಕ್ಕೆ ಈ ವಿದ್ಯಮಾನ ನಡೆಯುವುದು ಅತಿ ವಿರಳ. ಪ್ರತಿ ತಿಂಗಳು ಹುಣ್ಣಿಮೆ ಬಂದರೂ ಒಂದೇ ವೇಳೆಯಲ್ಲಿ ಸೂರ್ಯ ಅಸ್ತಮಿಸುವುದಿಲ್ಲ ಮತ್ತು ಅದೇ ಸಮಯಕ್ಕೆ ಚಂದ್ರನೂ ಉದಯಿಸಲಾರ. ಆದರೆ, ಈ ವಿಸ್ಮಯವು ತಮಿಳಿನ ಚಿತಿರೈ ತಿಂಗಳಲ್ಲಿ ಮಾತ್ರ ಸಂಭವಿಸುತ್ತದೆ.

ಕನ್ಯಾಕುಮಾರಿಯು ವಿಶಿಷ್ಟವಾದ ಭೌಗೋಳಿಕ ಪ್ರದೇಶವನ್ನು ಹೊಂದಿದೆ. ಭಾರತದ ಬೇರಾವುದೇ ಭಾಗದಲ್ಲೂ ಇಂತಹ ತಾಣವಿಲ್ಲ. ಇಲ್ಲಿ ಅರೇಬಿಯನ್ ಸಮುದ್ರ, ಬಂಗಾಳ ಕೊಲ್ಲಿ ಮತ್ತು ಹಿಂದೂ ಮಹಾಸಾಗರವು ಸಂಗಮಿಸುತ್ತದೆ. ಇಲ್ಲಿ ಸಮುದ್ರದ ತೀರದಿಂದ ಸೂರ್ಯಾಸ್ತ ಮತ್ತು ಚಂದ್ರೋದಯವನ್ನು ಒಂದೇ ಸಮಯದಲ್ಲಿ ಒಂದೇ ಸ್ಥಳದಿಂದ ನೋಡಬಹುದು. ಕನ್ಯಾಕುಮಾರಿ ಜಿಲ್ಲಾ ಪೊಲೀಸರು ಸಹ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.

ಇದನ್ನೂ ಓದಿ:ನೋಡಿ: ಗರಿಬಿಚ್ಚಿ ಸಂಭ್ರಮಿಸಿದ ನವಿಲು; ನಯನ ಮನೋಹರ ದೃಶ್ಯ

Last Updated : Apr 15, 2022, 5:00 PM IST

ABOUT THE AUTHOR

...view details