ಇಂಟರ್ನೆಟ್, ಸಾಮಾಜಿಕ ಜಾಲತಾಣಗಳೇ ಹಾಗೆ, ಅಲ್ಲಿ ಏನೆಲ್ಲ ವಿಷಯಗಳು ಹರಿದಾಡುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲಿಯೂ ಸಿಗದ ಅಪರೂಪದ ಮಾಹಿತಿಗಳು ಇಂಟರ್ನೆಟ್ನಲ್ಲಿ ನಮಗೆ ದೊರೆಯುತ್ತವೆ.
ಸಾಮಾಜಿಕ ಜಾಲತಾಣಗಳಲ್ಲಿ ಒಂದೊಂದು ಸಲ ಒಂದೊಂದು ವಿಷಯಗಳು ವೈರಲ್ ಆಗುವುದು ಕಾಮನ್. ಇದೀಗ ಕಾಳಿಂಗ ಸರ್ಪವೊಂದು (King Cobra) ನಾಗರ ಹಾವನ್ನು ನುಂಗುವ ಫೋಟೊ ಸಖತ್ ಹವಾ ಎಬ್ಬಿಸಿದೆ. (Viral Photo)
ಅಪರೂಪದ ಫೋಟೊ ಇದಾಗಿದ್ದರಿಂದ ಅಷ್ಟೊಂದು ವೈರಲ್ ಆಗಿದೆ. ಜುಲೈ 19 ರಂದು ಐಎಫ್ಎಸ್ ಅಧಿಕಾರಿ ಪ್ರವೀಣ್ ಕಸ್ವಾನ್ (Praveen Kaswan) ಈ ವಿಶೇಷ ಫೋಟೊವನ್ನು ತಮ್ಮ ಟ್ವಿಟರ್ ಹ್ಯಾಂಡಲ್ನಲ್ಲಿ (Twitter Handle) ಹಂಚಿಕೊಂಡಿದ್ದಾರೆ. ವೈರಲ್ ಆಗಿರುವ ಫೋಟೊದಲ್ಲಿ ಕಾಳಿಂಗ ಸರ್ಪ, ನಾಗರ ಹಾವನ್ನು ನುಂಗುತ್ತಿದೆ.
ಹಾವಿನ ಬೇಟೆಯ ಫೋಟೊ ನೋಡಲು ಭಯಾನಕವಾಗಿದ್ದರೂ, ಸಖತ್ ವೈರಲ್ ಆಗಿದೆ. ಫೋಟೊದೊಂದಿಗೆ ಕಸ್ವಾನ್ ಅದರ ಬಗ್ಗೆ ಸ್ವಲ್ಪ ಮಾಹಿತಿ ಹಂಚಿಕೊಂಡಿದ್ದಾರೆ. ಒಫಿಯೋಫಾಗಸ್ ಹನ್ನಾ (Ophiophagus hannah). ಕೋಬ್ರಾವನ್ನು ತಿನ್ನುತ್ತಿರುವ ಕಿಂಗ್ ಕೋಬ್ರಾ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.