ವಿಜಯನಗರ (ಆಂಧ್ರಪ್ರದೇಶ): ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿರುವ ಕಾಲದಲ್ಲಿ ಆಸ್ಪತ್ರೆಗಳು ರೋಗಿಗಳಿಂದ ಭರ್ತಿಯಾಗುತ್ತಿವೆ.
ಈ ನಡುವೆ ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ನರ್ಸ್ ಸೇರಿ ವೈದ್ಯಕೀಯ ಸಿಬ್ಬಂದಿಗೂ ಕೊರೊನಾ ತಗುಲಿ ಸಾವನ್ನಪ್ಪುತ್ತಿದ್ದಾರೆ.
ಆದರೆ, ಆಂಧ್ರದ ವಿಜಯನಗರದ ಜಿಯಮ್ಮವಲಸ ಮಂಡಲ್ ವ್ಯಾಪ್ತಿ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿ ನರ್ಸ್ವೊಬ್ಬರು ಪ್ರತಿನಿತ್ಯ ಕೋವಿಡ್ ರೋಗಿಗಳ ಆರೈಕೆ ಮಾಡುತ್ತಿದ್ದಾರೆ.
ಗರ್ಭಿಣಿಯಾಗಿದ್ದರೂ ನಿತ್ಯ ಕೊರೊನಾ ಸೋಂಕಿತರ ಚಿಕಿತ್ಸೆ.. ಅನ್ನಪೂರ್ಣ ಎಂಬ ಮಹಿಳೆ ಕೋವಿಡ್ ವಾರಿಯರ್ ಆಗಿ ನಿತ್ಯ ಕೋವಿಡ್ ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿದ್ದು, ಇತರರಿಗೂ ಸ್ಪೂರ್ತಿಯಾಗಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿ ಸೇವೆ ಅಗತ್ಯವಾಗಿರುವುದರಿಂದ ಗರ್ಭಿಯನ್ನುವುದನ್ನೂ ಲೆಕ್ಕಿಸದೆ ಕಾರ್ಯದಲ್ಲಿ ಬದ್ಧತೆ ತೋರುತ್ತಿದ್ದಾರೆ.
ಆಸ್ಪತ್ರೆಯಲ್ಲಿ ನೂರಾರು ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಅನ್ನಪೂರ್ಣ ಸೋಂಕಿನ ಭಯ ಲೆಕ್ಕಿಸದೆ ಚುಚ್ಚುಮದ್ದು ನೀಡುವುದು, ಇನಾಕ್ಯುಲೇಷನ್ ಡ್ರೈವ್‌ನಲ್ಲಿಯೂ ಈಕೆ ಭಾಗಿಯಾಗುತ್ತಾರೆ.
ಸದ್ಯ ಇವರ ಪರಿಶ್ರಮಕ್ಕೆ ಸಾರ್ವಜನಿಕರು ಹಾಗೂ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಪ್ರಶಂಸೆ ವ್ಯಕ್ತಪಡಿಸಿದ್ದು, ಉಳಿದೆಲ್ಲಾ ವೈದ್ಯಕೀಯ ಸಿಬ್ಬಂದಿಗೆ ಮಾದರಿಯಾಗಿದ್ದಾರೆ.