ಇಟಾವಾ (ಉತ್ತರಪ್ರದೇಶ): ಪಚ್ಚೈಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯ ಬರೌಲಿ ಗ್ರಾಮದಲ್ಲಿ ಹೊಲ ಉಳುಮೆ ಮಾಡುವಾಗ ಬೆಳ್ಳಿ ನಾಣ್ಯ ತುಂಬಿದ ಮಡಕೆ ಕಂಡುಬಂದಿದೆ. ಈ ವೇಳೆ ಟ್ರ್ಯಾಕ್ಟರ್ ಚಾಲಕ ಹಾಗೂ ಕಾರ್ಮಿಕರು ಮಡಿಕೆ ಸಮೇತ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸರಿಗೆ ಮಹಿಳೆ ದೂರು ನೀಡಿದ್ದಾರೆ. ಪೊಲೀಸರು ಈವರೆಗೆ 33 ನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ, ಮಡಕೆಯಲ್ಲಿ ಸುಮಾರು 200 ಬೆಳ್ಳಿ ನಾಣ್ಯಗಳಿದ್ದವು ಎಂದು ಮಹಿಳೆ ಹೇಳಿದ್ದಾರೆ.
ಉಳುಮೆ ಮಾಡುವಾಗ ನಿಧಿ ಪತ್ತೆ: ಕದ್ದು ಪರಾರಿಯಾದ ಟ್ರ್ಯಾಕ್ಟರ್ ಕಾರ್ಮಿಕರು - ಬೆಳ್ಳಿ ನಾಣ್ಯ ಇದ್ದ ಮಡಕೆ ಕದ್ದು ಪರಾರಿಯಾದ ಕಾರ್ಮಿಕರು
ಜಮೀನಿನಲ್ಲಿ ಟ್ರ್ಯಾಕ್ಟರ್ ನೇಗಿಲಿಗೆ ಮಡಕೆ ಸಿಲುಕಿ ಹೊರಬಂದಿದೆ. ಮಡಕೆಯಲ್ಲಿ ಬೆಳ್ಳಿಯ ನಾಣ್ಯಗಳೇ ತುಂಬಿದ್ದವಂತೆ. ಇವೆಲ್ಲವನ್ನೂ ಚಾಲಕ ಹಾಗೂ ಕಾರ್ಮಿಕರು ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ.

ಬರೌಲಿ ಗ್ರಾಮದ ನಿವಾಸಿ ರೇಣು ಅವರು ಹೊಲ ಉಳುಮೆ ಮಾಡಿಸುತ್ತಿದ್ದರಂತೆ. ಉಳುಮೆ ಕಾರ್ಯ ನಡೆಯುವಾಗ ಯಾವುದೋ ಕೆಲಸಕ್ಕೆ ಮನೆಗೆ ಮರಳಿದ್ದಾರೆ. ಇದೇ ವೇಳೆ ಜಮೀನಿನಲ್ಲಿ ಟ್ರ್ಯಾಕ್ಟರ್ ನೇಗಿಲಿಗೆ ಮಡಕೆ ಸಿಲುಕಿದೆ. ಮಡಕೆಯಲ್ಲಿ ಬೆಳ್ಳಿಯ ನಾಣ್ಯಗಳೇ ತುಂಬಿದ್ದವಂತೆ. ನಾಣ್ಯಗಳನ್ನು ಲೂಟಿ ಮಾಡಿದ ನಂತರ ಚಾಲಕರು ಮತ್ತು ಕಾರ್ಮಿಕರು ಅಲ್ಲಿಂದ ಓಡಿಹೋಗಿದ್ದಾರೆ ಎಂದು ತಿಳಿದುಬಂದಿದೆ. ಈ ವಿಷಯ ತಿಳಿದ ರೇಣು ಶನಿವಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೂರಿನ ಮೇರೆಗೆ ಪೊಲೀಸರು 33 ನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ನಾಣ್ಯಗಳು 1850 ರ ಹಿಂದಿನವಾಗಿದ್ದು, ನಾಣ್ಯಗಳ ಮೇಲೆ ಬ್ರಿಟಿಷರ ವಿಕ್ಟೋರಿಯಾ ರಾಣಿಯ ಆಕೃತಿ ಇದೆ.
ಇದನ್ನೂ ಓದಿ:ದೇವೇಗೌಡರನ್ನು ಭೇಟಿಯಾದ ದ್ರೌಪದಿ ಮುರ್ಮು.. ಎನ್ಡಿಎ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ
TAGGED:
etawah latest news