ಕರ್ನಾಟಕ

karnataka

ETV Bharat / bharat

ಗಿರ್​ ಅರಣ್ಯದಲ್ಲಿ ವನ್ಯಜೀವಿ ಕಾಯ್ದೆ ಉಲ್ಲಂಘಿಸಿರುವ ಫೋಟೋ ವೈರಲ್​: ಪ್ರವಾಸಿಗರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ - ಗಿರ್

ಗುಜರಾತ್​ ಗಿರ್​ ಅರಣ್ಯದಲ್ಲಿ(Gujarat Gir Forest)ರಸ್ತೆ ಮೇಲೆ ಕುಳಿತಿದ್ದ ಹೆಣ್ಣು ಸಿಂಹವನ್ನು ಪ್ರವಾಸಿಗರು ವಾಹನಗಳಲ್ಲಿ ಸುತ್ತುವರೆದು ಫೋಟೋ ತೆಗೆಯುವ ಮೂಲಕ ವನ್ಯಜೀವಿ ಕಾಯ್ದೆಯನ್ನ ಉಲ್ಲಂಘಿಸಿದ್ದಾರೆ(violating of the Wildlife Act). ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

A Photo violating of the Wildlife Act in Gir Forest goes viral
ಪ್ರವಾಸಿಗರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

By

Published : Nov 18, 2021, 7:03 PM IST

ಜುನಾಗಢ/ಗುಜರಾತ್​:ಗಿರ್ ಅರಣ್ಯ ಪ್ರದೇಶದಲ್ಲಿ(Gir Forest) ವನ್ಯಜೀವಿ ಕಾಯ್ದೆಯ ಉಲ್ಲಂಘನೆಯಾಗಿರುವ(violating of the Wildlife Act) ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಸ್ತೆಯ ಮೇಲೆ ಸಿಂಹಿಣಿ( lioness)ಕುಳಿತಿದೆ. ಅದರ ಸುತ್ತ ವಾಹನಗಳಲ್ಲಿ ಸುತ್ತುವರಿದಿರುವ ಪ್ರವಾಸಿಗರು ಫೋಟೋ ತೆಗೆದುಕೊಳ್ಳುತ್ತಿರುವುದು ಈ ವೈರಲ್​​ ಫೋಟೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ.

ಈ ಫೋಟೋವನ್ನು ದೆಹಲಿ ಮೂಲದ ಎನ್‌ಜಿಒ ಆದ ಗ್ರೀನ್ ಸರ್ಕಲ್ ಟ್ವೀಟ್ ಮಾಡಿದೆ ಮತ್ತು ವನ್ಯಜೀವಿ ಪ್ರೇಮಿ ಮತ್ತು ಜುನಾಗಢ್‌ನ ಮಾಜಿ ನ್ಯಾಯಾಧೀಶರಾದ ಜಯದೇವ್ ಧಧಲ್(former Judge Jaydev Dhadhal) ಅವರು ರೀಟ್ವೀಟ್ ಮಾಡಿದ್ದಾರೆ.

ವನ್ಯಜೀವಿ ಕಾಯ್ದೆಯನ್ನು ಉಲ್ಲಂಘಿಸಿರುವ ಅಭಯಾರಣ್ಯದ ವ್ಯಾಪ್ತಿಗೆ ಬರುವ ಎಲ್ಲ ಅರಣ್ಯ ಇಲಾಖೆ ಅಧಿಕಾರಿಗಳು, ಫೋಟೋದಲ್ಲಿರುವ ಪ್ರವಾಸಿಗರು, ಅರಣ್ಯ ವಾಹನಗಳ ಚಾಲಕರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮಾಜಿ ನ್ಯಾಯಾಧೀಶರು ಒತ್ತಾಯಿಸಿದ್ದಾರೆ.

ಈ ಘಟನೆಯ ಬಗ್ಗೆ ಮಾಹಿತಿ ಪಡೆಯಲು 'ಈಟಿವಿ ಭಾರತ' ಗಿರ್‌ನ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ರಾಮ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ.

ABOUT THE AUTHOR

...view details