ಕರ್ನಾಟಕ

karnataka

ETV Bharat / bharat

ಅಂಬಾಲಾದಲ್ಲಿ ಇವರ ಮನೆಯಲ್ಲಿಯೇ ಇದೆ ನೈಸರ್ಗಿಕ ಆಮ್ಲಜನಕ ಸ್ಥಾವರ - a person in Ambala has installed an oxygen plant at his own house

1982 ರಲ್ಲಿ ವೇದಪ್ರಕಾಶ್​​ಗೆ ಅವರ ಗುರುಗಳು ಒಂದು ಹೂವಿನ ಗಿಡವನ್ನು ನೀಡಿದ್ದರಂತೆ. ಅಂದಿನಿಂದ, ಅವರು ಮರಗಳನ್ನು ನೆಡುವ ಹವ್ಯಾಸವನ್ನು ಬೆಳೆಸಿಕೊಂಡರು. ಇದೀಗ ಅಂಬಾಲಾದ ನಿವಾಸಿ 78 ವರ್ಷದ ಪ್ರೊಫೆಸರ್ ವೇದ ಪ್ರಕಾಶ್ ವಿಜ್ ಅವರ ಇಡೀ ಮನೆ ಮರಗಳು ಮತ್ತು ಸಸ್ಯಗಳಿಂದ ತುಂಬಿದೆ.

oxygen plant at his own house
ಅಂಬಾಲಾದಲ್ಲಿ ಇವರ ಮನೆಯಲ್ಲಿಯೇ ಇದೆ ನೈಸರ್ಗಿಕ ಆಮ್ಲಜನಕ ಸ್ಥಾವರ

By

Published : Jun 8, 2021, 6:05 AM IST

ಅಂಬಾಲಾ (ಹರಿಯಾಣ):ಕೊರೊನಾ ಮಹಾಮಾರಿಯ ಆತಂಕದಲ್ಲಿರುವ ಇಡೀ ಭಾರತವು ಆಮ್ಲಜನಕದ ಕೊರತೆಯಿಂದ ಬಳಲುತ್ತಿದೆ. ಅದೇ ಸಮಯದಲ್ಲಿ, ಅಂಬಾಲಾದಲ್ಲಿ ಓರ್ವ ವ್ಯಕ್ತಿ ತಮ್ಮ ಮನೆಯಲ್ಲಿಯೇ ನೈಸರ್ಗಿಕ ಆಮ್ಲಜನಕ ಸ್ಥಾವರವನ್ನು ಸ್ಥಾಪಿಸಿದ್ದಾರೆ ಎಂದರೆ ಅಚ್ಚರಿಯಾಗದೆ ಇರದು. ಅಂಬಾಲಾದ ನಿವಾಸಿ 78 ವರ್ಷದ ಪ್ರೊಫೆಸರ್ ವೇದ ಪ್ರಕಾಶ್ ವಿಜ್ ಅವರ ಮನೆಯಲ್ಲಿ ನೋಡಲಾಗುತ್ತಿದೆ. ಅವನ ಇಡೀ ಮನೆ ಮರಗಳು ಮತ್ತು ಸಸ್ಯಗಳಿಂದ ತುಂಬಿದೆ.

ಅಂಬಾಲಾದಲ್ಲಿ ಇವರ ಮನೆಯಲ್ಲಿಯೇ ಇದೆ ನೈಸರ್ಗಿಕ ಆಮ್ಲಜನಕ ಸ್ಥಾವರ

ಪ್ರೊಫೆಸರ್ ವೇದ ಪ್ರಕಾಶ್ ತಮ್ಮ ಮನೆಯಲ್ಲಿ 1000 ಕ್ಕೂ ಹೆಚ್ಚು ಮಡಕೆಗಳಲ್ಲಿ ನೂರಾರು ಬಗೆಯ ಸಸ್ಯಗಳನ್ನು ನೆಟ್ಟಿದ್ದಾರೆ. ಈ ಕಾರಣದಿಂದಾಗಿ ಅವರ 3 ಅಂತಸ್ತಿನ ಮನೆಯಲ್ಲಿ ಒಂದು ಮಿನಿ ಉದ್ಯಾನವನ ನಿರ್ಮಾಣವಾಗಿದೆ.

1982 ರಲ್ಲಿ ವೇದಪ್ರಕಾಶ್​ಗೆ ಅವರ ಗುರುಗಳು ಒಂದು ಹೂವಿನ ಗಿಡವನ್ನು ನೀಡಿದ್ದರಂತೆ. ಅಂದಿನಿಂದ, ಅವರು ಮರಗಳನ್ನು ನೆಡುವ ಹವ್ಯಾಸವನ್ನು ಬೆಳೆಸಿಕೊಂಡರು. 40 ವರ್ಷಗಳ ಕಾಲ ಶಿಕ್ಷಕರಾಗಿ ಕೆಲಸ ಮಾಡಿದ ನಂತರ 2004 ರಲ್ಲಿ ನಿವೃತ್ತರಾದರು. ಬಳಿಕ ತಮ್ಮ ಮನೆಯಲ್ಲಿ ವಿವಿಧ ಬಗೆಯ ಗಿಡ-ಬಳ್ಳಿಗಳಿಂದ ಬೆಳೆಸಿದ್ದಾರೆ.

ವೇದ ಪ್ರಕಾಶ್​ ಅವರ ಮನೆಯಲ್ಲಿ 80 ಬಗೆಯ ಸಸ್ಯಗಳಿವೆ. ಇದರಲ್ಲಿ ಪ್ರತಿ ಋತುವಿನಲ್ಲಿ ಹೂವುಗಳು ಬೆಳೆಯುತ್ತವೆ. ಅವರು ಇಂಗ್ಲೆಂಡ್‌ನ ಲಿಫ್ಟನ್ ನರ್ಸರಿಯಿಂದ ಫ್ರೀಸಿಯಾ ತಳಿಯ ಸಸ್ಯವನ್ನು ತೆಂದು ತಮ್ಮ ಮನೆಯಲ್ಲಿ ನೆಟ್ಟಿದ್ದಾರೆ. ಆದರೂ ಪ್ರೊಫೆಸರ್ ವೇದ ಪ್ರಕಾಶ್ ಅವರು ಭಾರತೀಯ ತಳಿಯ ಹೂವುಗಳನ್ನು ಹೆಚ್ಚು ಇಷ್ಟಪಡುತ್ತಾರಂತೆ.

ಪ್ರೊಫೆಸರ್ ವೇದ ಪ್ರಕಾಶ್ ಅವರ ಪತ್ನಿ ಸುರೇಂದರ್ ವಿಜ್ ಡಬಲ್ ಡಿಗ್ರಿ ಪಡೆದಿದ್ದು, ಗೃಹಿಣಿಯಾಗಿದ್ದಾರೆ. ಇವರ ಮನೆಯಲ್ಲಿರುವ ಈ ಸಸ್ಯಗಳ ಸೌಂದರ್ಯಕ್ಕೆ ವೇದ ಪ್ರಕಾಶ್​ ಅವರ ಮಡದಿಯ ಕೊಡುಗೆ ಅಪಾರವಾಗಿದೆ. ಅವರು ಸಹ ಪತಿಯ ಜತೆ ಸಸ್ಯಗಳನ್ನು ನೋಡಿಕೊಳ್ಳುತ್ತಾರೆ ಮತ್ತು ಕಾಲಕಾಲಕ್ಕೆ ನೀರನ್ನು ಸಹ ಹಾಕುತ್ತಾರೆ.

ಪ್ರೊಫೆಸರ್ ವೇದ ಪ್ರಕಾಶ್ ಅವರು ಆಮ್ಲಜನಕವನ್ನು ನೀಡುವ ಪೀಪಲ್ ಎರಿಕಾ ಪಾಮ್ ಮತ್ತು ಇತರ ಸಸ್ಯಗಳನ್ನು ನರ್ಸರಿಯಲ್ಲಿ ನೆಟ್ಟಿದ್ದಾರೆ. ಪ್ರತಿದಿನ ತಂಪಾದ ಗಾಳಿ, ಸುಂದರ ಹಸಿರ ವಾತಾವರಣದೊಂದಿಗೆ ಇವರ ಮನೆ ಕಂಗೊಳಿಸುತ್ತಿದೆ. ಈ ಮೂಲಕ ಇತರರಿಗೆ ಸ್ಫೂರ್ತಿಯಾಗಿದ್ದಾರೆ.

ABOUT THE AUTHOR

...view details