ಕರ್ನಾಟಕ

karnataka

ETV Bharat / bharat

Heart stroke: ಬೈಕ್​ನಲ್ಲಿ ತೆರಳುತ್ತಿದ್ದ ಯುವಕನಿಗೆ ಹೃದಯಾಘಾತ.. ಆಸ್ಪತ್ರೆ ತಲುಪುವಷ್ಟರಲ್ಲೇ ಸಾವು - ಅಸ್ವಸ್ಥ ವ್ಯಕ್ತಿಗೆ ಹೃದಯಾಘಾತ

ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ ಏಕಾಏಕಿ ಹೃದಯಾಘಾತವಾಗಿ(heart stroke) ಯುವಕ ರಸ್ತೆಯಲ್ಲೆಯೇ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದಲ್ಲಿ ಸಂಭವಿಸಿದೆ.

A person get heart stroke on bike
ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ ವ್ಯಕ್ತಿಗೆ ಹೃದಯಾಘಾತ

By

Published : Nov 20, 2021, 6:15 PM IST

ಮೆಹಬೂಬ್​ನಗರ(ತೆಲಂಗಾಣ): ಬೈಕ್​ನಲ್ಲಿ ಚಿಕಿತ್ಸೆಗೆಂದು ತೆರಳುತ್ತಿದ್ದ ಅಸ್ವಸ್ಥ ಯುವಕ ಹೃದಯಾಘಾತ(heart stroke)ದಿಂದ ನಡುರಸ್ತೆಯಲ್ಲೇ ಮೃತಪಟ್ಟಿರುವ ಮನಕಲಕುವ ಘಟನೆ ಮೆಹಬೂಬ್‌ನಗರ ಜಿಲ್ಲಾ ಪಂಚಾಯತ್​ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ರಾಜ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಬೆಳಗ್ಗೆಯಿಂದ ಅಸ್ವಸ್ಥಗೊಂಡಿದ್ದ ಈತನನ್ನು ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆಗ ಇಸಿಜಿ ಮಾಡಿ ಪರೀಕ್ಷಿಸಿದ ವೈದ್ಯರು, ಯುವಕನಿಗೆ ಹೃದಯಾಘಾತವಾಗಿರುವ ಬಗ್ಗೆ ಮಾಹಿತಿ ನೀಡಿದ್ದರು.

ಬಳಿಕ ಯುವಕ ಮನೆಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದನು. ಆದರೂ ಆರೋಗ್ಯದಲ್ಲಿ ಚೇತರಿಕೆ ಕಂಡಿರಲಿಲ್ಲ. ಹೀಗಾಗಿ ತಕ್ಷಣ ವ್ಯಕ್ತಿಯ ಸ್ನೇಹಿತ ಬೈಕ್​ನಲ್ಲಿ ಕೂರಿಸಿಕೊಂಡು ಬೇರೊಂದು ಆಸ್ಪತ್ರೆಗೆ ತೆರಳುತ್ತಿದ್ದನು. ಈ ವೇಳೆ ಏಕಾಏಕಿ ರಾಜುವಿಗೆ ಹೃದಯಾಘಾತ (heart stroke)ಉಂಟಾಗಿ ರಸ್ತೆಯಲ್ಲೇ ಬೈಕ್​ನಿಂದ ಕೆಳಗೆ ಬಿದ್ದಿದ್ದಾನೆ.

ಕೂಡಲೇ ಆತನ ಸ್ನೇಹಿತ ಪಕ್ಕಕ್ಕೆ ಕರೆದೊಯ್ದು ಆಟೋದಲ್ಲಿ ಹತ್ತಿರದ ಆಸ್ಪತ್ರೆಗೆ ತೆರಳಿದ್ದನು. ಆದರೆ ಆಸ್ಪತ್ರೆ ತಲುಪುವಷ್ಟರಲ್ಲಿ ಯುವಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

ABOUT THE AUTHOR

...view details