ಗಿರಿಡಿಹ್(ಜಾರ್ಖಂಡ್): ಕಲ್ಕಾ ಹೌರಾ ಮೇಲ್ ಟ್ರೈನ್ನಲ್ಲಿ ಪರಾರಿಯಾಗುತ್ತಿದ್ದ ಕೊಲೆ ಮತ್ತು ಚಿನ್ನ ದರೋಡೆ ಅಪರಾಧಿಯನ್ನು ಗಿರಿಡಿಹ್ ಜಿಲ್ಲೆಯ ಹಜಾರಿಬಾಗ್ ರಸ್ತೆ ಆರ್‌ಪಿಎಫ್ ಬಂಧಿಸಿದೆ.
ಬಂಧಿತ ಅಪರಾಧಿಯಿಂದ 86 ಲಕ್ಷ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನು ಹಜಾರಿಬಾಗ್ ರಸ್ತೆ ಆರ್‌ಪಿಎಫ್ ಇನ್ಸ್‌ಪೆಕ್ಟರ್ ಖಚಿತಪಡಿಸಿದ್ದಾರೆ. ದೆಹಲಿಯ ಎಸಿಪಿ ರೋಹಿಣಿ ಅವರ ಮಾಹಿತಿಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಏನಿದು ಪ್ರಕರಣ
ಕಲ್ಕಾ ಹೌರಾ ಮೇಲ್ ಟ್ರೈನ್ನಲ್ಲಿ ದೆಹಲಿಯಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಬಂಗಾರ ದೋಚಿಕೊಂಡು ಪರಾರಿಯಾಗುತ್ತಿದ್ದ. ಈ ಬಗ್ಗೆ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಹಜಾರಿಬಾಗ್ ನಿಲ್ದಾಣದಲ್ಲಿ ರೈಲು ನಿಲ್ಲಿಸುವಂತೆ ಒತ್ತಾಯಿಸಿದರು. ನಂತರ, ಟಿಟಿಇ ಸಹಾಯದಿಂದ ಅಪರಾಧಿಯ ತನಿಖೆ ಬೋಗಿಯಲ್ಲಿ ಪ್ರಾರಂಭಿಸಲಾಯಿತು ಮತ್ತು ಅಪರಾಧಿಯನ್ನು ಸೆರೆ ಹಿಡಿಯಲಾಯಿತು.