ಕರ್ನಾಟಕ

karnataka

ETV Bharat / bharat

ಮಾಟಗಾರನ ಮಾತು ನಂಬಿ ಮಗುವನ್ನೇ ಕೊಂದ ತಾಯಿ! - black magic

ನಕಲಿ ಬಾಬನೊಬ್ಬ ಹೇಳಿದ್ದ ಸುಳ್ಳು ಕಥೆ ನಂಬಿಕೊಂಡು ತನ್ನ 6 ತಿಂಗಳ ಮಗುವನ್ನು ತಾಯಿಯೊಬ್ಬಳು ಕೊಂದು ಹಾಕಿರುವ ಘಟನೆ ನಡೆದಿದೆ.

a mother stabbed her child
a mother stabbed her child

By

Published : Apr 16, 2021, 10:47 AM IST

ತೆಲಂಗಾಣ: ಮಾಟಗಾರನ ಮಾತುಗಳನ್ನು ನಂಬಿ ತಾಯಿಯೊಬ್ಬಳು ತನ್ನ ಮಗುವಿಗೆ ಚಾಕು ಇರಿದು ಕೊಲೆ ಮಾಡಿರುವ ಆಘಾತಕಾರಿ ಘಟನೆ ತೆಲಂಗಾಣದ ಸೂರ್ಯಪೇಟೆಯಲ್ಲಿ ನಡೆದಿದೆ.

ಸೂರ್ಯಪೇಟೆ ಜಿಲ್ಲೆಯ ಮೋಥೆ ಮಂಡಲ ಮೇಕಲಪತಿತನಂದ ನಿವಾಸಿ ಬನೊತು ಭಾರತಿ ಮಾಟಮಂತ್ರ ನಂಬಿ ತನ್ನ ಆರು ತಿಂಗಳ ಮಗುವನ್ನೇ ಕೊಂದವಳು. ಇವಳು ನಕಲಿ ಬಾಬನೊಬ್ಬ ಹೇಳಿದ್ದ ಸುಳ್ಳನ್ನು ನಂಬಿ, ತನ್ನ ಪತಿ ಮನೆಯಲ್ಲಿ ಇಲ್ಲದ ವೇಳೆ ಈ ಕೃತ್ಯ ಎಸಗಿದ್ದಾಳೆ.

ಈ ಕುರಿತು ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ, ಭಾರತಿ ಕಳೆದ ಕೆಲವು ದಿನಗಳಿಂದ ಮಾನಸಿಕ ಅಸ್ವಸ್ಥಳಂತೆ ವರ್ತಿಸುತ್ತಿದ್ದಾಳೆ. ಆರು ತಿಂಗಳಿಂದ ನಕಲಿ ಬಾಬ ಹೇಳಿದ ಹಾಗೆಯೇ ಪೂಜೆ ಮಾಡುತ್ತಿದ್ದಳು ಎಂದು ತಿಳಿಸಿದರು.

ಈ ಕುರಿತು ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ABOUT THE AUTHOR

...view details