ಕರ್ನಾಟಕ

karnataka

ETV Bharat / bharat

ಗ್ರಾಮೀಣ ಜನರ ಸೇವೆ ಮಾಡುವ ಬಯಕೆ... ಪಂಚಾಯ್ತಿ ಚುನಾವಣಾ ಕಣಕ್ಕಿಳಿದ ಮಾಡೆಲ್​ - ಗ್ರಾಮ ಪಂಚಾಯ್ತಿ ಚುನಾವಣೆಗಿಳಿದ ಈಶ್ರಾ

ಗ್ರಾಮೀಣ ಜನರ ಸೇವೆ ಮಾಡುವ ಉದ್ದೇಶದಿಂದ ಮಾಡೆಲ್​​​​ ಹಾಗೂ ನಟಿವೋರ್ವರು ಇದೀಗ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣಾ ಕಣಕ್ಕಿಳಿದಿದ್ದಾರೆ.

Model Aeshra Patel
Model Aeshra Patel

By

Published : Dec 16, 2021, 1:42 AM IST

ಛೋಟಾ ಉದೇಪುರ(ಗುಜರಾತ್​):ಗ್ರಾಮ ಪಂಚಾಯ್ತಿ ಅಧ್ಯಕ್ಷೆಯಾಗುವ ಮೂಲಕ ಗ್ರಾಮೀಣ ಜನರ ಸೇವೆ ಮಾಡಲು ನಿರ್ಧರಿಸಿರುವ ರೂಪದರ್ಶಿ ಹಾಗೂ ನಟಿ ಇದೀಗ ಅದೃಷ್ಟ ಪರೀಕ್ಷೆಗಾಗಿ ಚುನಾವಣಾ ಕಣಕ್ಕಿಳಿದಿದ್ದಾರೆ. ಛೋಟಾ ಉದೇಪುರದ ಸಂಖೇಡಾದ ಪಂಚಾಯ್ತಿ ಸರಪಂಚ್​ ಸ್ಥಾನದ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ.

ಚುನಾವಣಾ ಕಣಕ್ಕಿಳಿದ ಮಾಡೆಲ್​ ಆಶ್ರಾ

34 ವರ್ಷದ ಆಶ್ರಾ ಪಟೇಲ್​​​​ ಕೋವಿಡ್​​-19 ಲಾಕ್​ಡೌನ್​ ಸಂದರ್ಭದಲ್ಲಿ ತಮ್ಮ ಹಳ್ಳಿಯ ಮನೆಯಲ್ಲಿ ದಿನ ಕಳೆದಿದ್ದು, ಈ ವೇಳೆ ಗ್ರಾಮದ ಜನರು ಯಾವೆಲ್ಲ ತೊಂದರೆ ಅನುಭವಿಸುತ್ತಿದ್ದಾರೆಂಬುದರ ಬಗ್ಗೆ ಅರಿತುಕೊಂಡಿದ್ದಾರೆ. ಹೀಗಾಗಿ, ಗ್ರಾಮಸ್ಥರ ಸೇವೆ ಹಾಗೂ ಅವರ ಹಕ್ಕುಗಳಿಗಾಗಿ ದುಡಿಯಲು ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ.

ಚುನಾವಣೆಯಲ್ಲಿ ಗೆಲ್ಲುವ ಅನೇಕರು ತಮ್ಮ ಜೇಬು ತುಂಬಿಸಿಕೊಳ್ಳುವ ಕೆಲಸದಲ್ಲಿ ಬ್ಯುಸಿಯಾಗುತ್ತಾರೆ. ಸರ್ಕಾರದ ಯಾವುದೇ ಯೋಜನೆ ಜನರಿಗೆ ತಲುಪಿಸುವುದಿಲ್ಲ. ಹಳ್ಳಿಯಲ್ಲಿ ಶಾಲೆ, ಸಾರಿಗೆ, ಆರೋಗ್ಯ ಸೇವೆಯ ಕೊರತೆಯಿಂದೆ. ಕೋವಿಡ್​​ ಸಾಂಕ್ರಾಮಿಕ ಸಂಧರ್ಭದಲ್ಲಿ ಜನರ ಸಹಾಯಕ್ಕೆ ಯಾರು ಬಂದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ಪಂಚಾಯ್ತಿ ಚುನಾವಣಾ ಕಣಕ್ಕಿಳಿದ ಮಾಡೆಲ್​

ಇದನ್ನೂ ಓದಿರಿ:ಪವರ್ ಸ್ಟಾರ್ ನೆನೆದು ಭಾವುಕರಾದ ಶಿವರಾಜ್ ಕುಮಾರ್, ಕ್ರೇಜಿಸ್ಟಾರ್ ರವಿಚಂದ್ರನ್​​!

2010ರಲ್ಲಿ ಮಿಸ್​ ಇಂಡಿಯಾ ಫೈನಲಿಸ್ಟ್​​​ ಆಗಿದ್ದ ಆಶ್ರಾ, ರೈತ ಕುಟುಂಬದಲ್ಲಿ ಬೆಳೆದವರು. ಇವರ ತಂದೆ ನರಹರಿ 1989ರಿಂದ 1994 ಮತ್ತು 2012 ರಿಂದ 2017ರವರೆಗೆ ಗ್ರಾಮದಲ್ಲಿ ಸರಪಂಚ್​ ಆಗಿ ಸೇವೆ ಸಲ್ಲಿಸಿದ್ದಾರೆ. ಆಶ್ರಾ ಮಾತ್ರ ತಮ್ಮ 17ನೇ ವಯಸ್ಸಿನಿಂದಲೂ ಮುಂಬೈನಲ್ಲೇ ವಾಸವಾಗಿದ್ದು, ಮಾಡೆಲಿಂಗ್​ ಕ್ಷೇತ್ರದಲ್ಲಿ ಮಿಂಚಿದ್ದಾರೆ. ಆದರೆ, ಕೋವಿಡ್​ನಿಂದಾಗಿ ಮನೆಯಲ್ಲಿ ಉಳಿದುಕೊಂಡಿದ್ದ ಅವರು, ಗ್ರಾಮಸ್ಥರ ಸಮಸ್ಯೆಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಇದೀಗ ಗ್ರಾಮಸ್ಥರ ಕೋರಿಕೆ ಮೇರೆಗೆ ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನಿರ್ಧರಿಸಿದ್ದಾರೆ.

ಈ ವಿಚಾರವಾಗಿ ಮಾತನಾಡಿರುವ ಮಾಡೆಲ್​​, ಗ್ರಾಮೀಣ ಜನರ ಜೀವನದ ಬಗ್ಗೆ ನನಗೆ ಆಸಕ್ತಿ ಇದೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಕೇಳಿಕೊಂಡಿದ್ದರಿಂದ ನಾನು ಈ ನಿರ್ಧಾರ ಕೈಗೊಂಡಿದ್ದೇನೆ. ಜನರ ಹಕ್ಕು ಅವರಿಗೆ ತಲುಪಿಸುವ ಉದ್ದೇಶದಿಂದ ದುಡಿಯಲಿದ್ದೇನೆ ಎಂದಿದ್ದಾರೆ.

ABOUT THE AUTHOR

...view details