ಕರ್ನಾಟಕ

karnataka

ETV Bharat / bharat

ಬಾಲಕಿಯನ್ನು ಕೂಡಿ ಹಾಕಿ ಅತ್ಯಾಚಾರ ಎಸಗಿದ ನಾಲ್ವರು - ಹೈದರಾಬಾದ್​ ಅಪರಾಧ ಸುದ್ದಿ

ನಾಲ್ವರು ಯುವಕರು ಬೈಕ್​ ಮೇಲೆ ಬಾಲಕಿಯೊಬ್ಬಳನ್ನು ಕರೆದೊಯ್ದು ಒಂದು ದಿನ ಕೂಡಿ ಹಾಕಿ ಅತ್ಯಾಚಾರ ಎಸಗಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

minor girl was raped by four youths in Telangana  Hyderabad crime news  Telangana rape news  ತೆಲಂಗಾಣದಲ್ಲಿ ಬಾಲಕಿಯನ್ನು ಕೂಡಿ ಹಾಕಿ ಅತ್ಯಾಚಾರ ಎಸಗಿದ ನಾಲ್ವರು  ಹೈದರಾಬಾದ್​ ಅಪರಾಧ ಸುದ್ದಿ  ತೆಲಂಗಾಣ ಅತ್ಯಾಚಾರ ಸುದ್ದಿ
ಬಾಲಕಿಯನ್ನು ಕೂಡಿ ಹಾಕಿ ಅತ್ಯಾಚಾರ ಎಸಗಿದ ನಾಲ್ವರು

By

Published : Jun 21, 2022, 12:33 PM IST

ಹೈದರಾಬಾದ್​: ನಗರದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಜ್ಜಿ ಮನೆಗೆ ತೆರಳುತ್ತಿದ್ದ ಬಾಲಕಿಯೊಬ್ಬಳನ್ನು ನಾಲ್ವರು ಯುವಕರು ಬೈಕ್​ ಕರೆದೊಯ್ದು ಅತ್ಯಾಚಾರ ಎಸಗಿರುವ ಘಟನೆ ಮುನ್ನೆಲೆಗೆ ಬಂದಿದೆ.

ನಗರದ 14 ವರ್ಷದ ಬಾಲಕಿ ಇದೇ 18ರಂದು ಚಂದ್ರಾಯನಗುಟ್ಟದ ಗಾಜಿಮಿಲ್ಲತ್‌ ಕಾಲೋನಿಯಲ್ಲಿರುವ ಅಜ್ಜಿ ಮನೆಗೆ ತೆರಳುತ್ತಿದ್ದೇನೆ ಎಂದು ಪೋಷಕರಿಗೆ ಹೇಳಿ ಹೋಗಿದ್ದಾಳೆ. ಅಜ್ಜಿ ಮನೆಗೆ ಬಾಲಕಿ ಹೋಗಿಲ್ಲವೆಂಬುದು ತಿಳಿದು ಬಂದಿದೆ. ಕೂಡಲೇ ಕುಟುಂಬಸ್ಥರು ಚಂದ್ರಾಯನಗುಟ್ಟ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.

ಓದಿ:ಟೆರೇಸ್​ ಮೇಲೆ ಮಲಗಿದ್ದ ಅಪ್ರಾಪ್ತ ವಿವಾಹಿತೆ ಮೇಲೆ ಐವರಿಂದ ಸಾಮೂಹಿಕ ಅತ್ಯಾಚಾರ

19ರಂದು ಭಾನುವಾರ ರಾತ್ರಿ ಮನೆಗೆ ಬಂದ ಬಾಲಕಿ ತನ್ನ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾಳೆ. ಕೂಡಲೇ ಪೋಷಕರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಹಫೀಜ್ ಬಾಬಾನಗರ ಮತ್ತು ಗಾಜಿಮಿಲ್ಲತ್‌ ಕಾಲೋನಿಯ ನಾಲ್ವರು ಯುವಕರು ಇದೇ ತಿಂಗಳ 18ರಂದು ಬಾಲಕಿಯನ್ನು ಬೈಕ್‌ನಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಹುಡುಗಿ ಇಡೀ ದಿನ ಕೂಡಿ ಹಾಕಿರುವುದು ಬೆಳಕಿಗೆ ಬಂದಿದೆ. ಬಾಲಕಿ ನೀಡಿದ ಮಾಹಿತಿ ಮೇರೆಗೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ನಾಲ್ವರು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಲಾಗಿದೆ. ಆದರೆ ತನಿಖೆ ನಡೆಯುತ್ತಿದೆಯೇ ಎಂದು ಹೇಳಲು ನಿರಾಕರಿಸಿದ್ದಾರೆ ಎನ್ನಲಾಗಿದೆ.


ABOUT THE AUTHOR

...view details