ಕರ್ನಾಟಕ

karnataka

ETV Bharat / bharat

14 ವರ್ಷದ ಬಾಲಕಿ ಮೇಲೆ 33 ಜನರಿಂದ ಅತ್ಯಾಚಾರ, 23 ಜನರ ಬಂಧನ - 14 ವರ್ಷದ ಬಾಲಕಿ ಮೇಲೆ 30 ಜನರಿಂದ ಅತ್ಯಾಚಾರ

ವಿವಿಧ ಸಂದರ್ಭಗಳಲ್ಲಿ ಅಪ್ರಾಪ್ತೆಯ ಮೇಲೆ ಸುಮಾರು ಮೂವತ್ತು ಮಂದಿ ಕಾಮುಕರು ಅತ್ಯಾಚಾರವೆಸಗಿರುವ ಅಮಾನವೀಯ ಪ್ರಕರಣ ಥಾಣೆಯಲ್ಲಿ ನಡೆದಿದೆ.

minor girl rape
minor girl rape

By

Published : Sep 23, 2021, 2:58 PM IST

Updated : Sep 23, 2021, 3:43 PM IST

ಥಾಣೆ(ಮಹಾರಾಷ್ಟ್ರ):ಅಪ್ರಾಪ್ತೆಯ ಮೇಲೆ 33 ಜನರು ಅತ್ಯಾಚಾರವೆಸಗಿರುವ ದುಷ್ಕೃತ್ಯ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಪ್ರಕರಣದಲ್ಲಿ ಈಗಾಗಲೇ 23 ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ 10 ಜನರಿಗಾಗಿ ಶೋಧ ಮುಂದುವರೆದಿದೆ.

ಥಾಣೆಯ ಡೊಂಬಿವಿಲಿ ಪ್ರದೇಶದಲ್ಲಿ ಘಟನೆ ನಡೆದಿದೆ. ಆರೋಪಿಗಳು ಡೊಂಬಿವಿಲಿ, ಬದ್ಲಾಪುರ, ರಬಾಲೆ ಮತ್ತು ಮುರ್ಬಾದ್​​ನವರು ಎನ್ನಲಾಗಿದೆ. ಇವರು ಬೇರೆ ಬೇರೆ ರಾಜಕೀಯ ಪಕ್ಷಗಳ ಹಿನ್ನೆಲೆ ಉಳ್ಳವರು ಎಂದು ಗೊತ್ತಾಗಿದೆ. ಕಳೆದ 9 ತಿಂಗಳಿಂದ ನಿರಂತರವಾಗಿ ಈ ದುಷ್ಕೃತ್ಯದಲ್ಲಿ ಭಾಗಿಯಾಗಿದ್ದಾರೆಂದು ವರದಿಯಾಗಿದೆ. ನಿನ್ನೆಯಷ್ಟೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಇದನ್ನೂ ಓದಿ:ಪೆಗಾಸಸ್​ ಗೂಢಚರ್ಯೆ ಪ್ರಕರಣ: ತನಿಖೆಗೆ ಸಮಿತಿ ರಚಿಸಲು ಸುಪ್ರೀಂಕೋರ್ಟ್ ಅಸ್ತು

ಲಭ್ಯವಾಗಿರುವ ಮಾಹಿತಿ ಪ್ರಕಾರ, ಅಪ್ರಾಪ್ತೆಗೆ ಬೇರೆ ವ್ಯಕ್ತಿಯ ಜೊತೆ ಅಕ್ರಮ ಸಂಬಂಧವಿತ್ತಂತೆ. ಆಕೆಯ ಅಶ್ಲೀಲ ವಿಡಿಯೋವನ್ನು ಆತ ಸೆರೆ ಹಿಡಿದಿದ್ದ. ಈ ವಿಡಿಯೋ ಇಟ್ಟುಕೊಂಡು ಬಾಲಕಿಗೆ ಬ್ಲ್ಯಾಕ್‌ಮೇಲ್‌ ಮಾಡಿ, 33 ಜನರು ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

Last Updated : Sep 23, 2021, 3:43 PM IST

ABOUT THE AUTHOR

...view details