ವಡೋದರಾ (ಗುಜರಾತ್):ವಡೋದರಾ ನಗರದಲ್ಲಿ ರಾಮ ನವಮಿಯ ದಿನದಂದು ಫತೇಹಪುರ ಪ್ರದೇಶದಲ್ಲಿ ರಾಮನವಮಿ ಮೆರವಣಿಗೆ ನಡೆಯುತ್ತಿದ್ದ ವೇಳೆ, ಕಲ್ಲು ತೂರಾಟ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಹೀಗಾಗಿ ಭದ್ರತೆಯ ದೃಷ್ಟಿಯಿಂದ ಇಡೀ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ವಡೋದರಾ ನಗರದ ಹಿರಿಯ ಅಧಿಕಾರಿಗಳು ಭದ್ರತೆಯ ದೃಷ್ಟಿಯಿಂದ ಫತೇಹಪುರ ಪ್ರದೇಶ ಬೀಡುಬಿಟ್ಟಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಲಾಗುತ್ತಿದೆ.
ಪೊಲೀಸ್ ಪಡೆ ನಿಯೋಜನೆ:ವಡೋದರಾ ಸೇರಿದಂತೆ ಇಡೀ ರಾಜ್ಯದಲ್ಲಿ ರಾಮನವಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ಬೆಳಗ್ಗೆಯಿಂದಲೇ ರಾಮ ದೇವರ ದೇವಸ್ಥಾನಗಳಲ್ಲಿ ಭಕ್ತರ ದಂಡು ಕಂಡು ಬರುತ್ತಿದೆ. ವಡೋದರಾ ನಗರದ ಹಲವು ಪ್ರದೇಶಗಳಿಂದ ರಾಮನವಮಿ ಮೆರವಣಿಗೆಗಳು ನಡೆದಿವೆ. ಆದರೆ, ಫತೇಹಪುರಾ ಪ್ರದೇಶದಲ್ಲಿ ರಾಮನವಮಿ ಮೆರವಣಿಗೆ ವೇಳೆ ಹಠಾತ್ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಪರಿಸ್ಥಿತಿ ಹದಗೆಡದಂತೆ ಇಡೀ ಪ್ರದೇಶದಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ:ಗೋವಾದಿಂದ ದಾಖಲೆ ಇಲ್ಲದ 5.25 ಲಕ್ಷ ರೂ ಸಾಗಣೆ: ಕಾರು, ನಗದು ವಶಕ್ಕೆ
ನಿರಂತರವಾಗಿ ಗಸ್ತು ತಿರುಗುತ್ತಿರುವ ಪೊಲೀಸರು:ವಡೋದರದ ಅತ್ಯಂತ ಸೂಕ್ಷ್ಮವಾದ ಫತೇಹಪುರ್ ಪ್ರದೇಶವನ್ನು ಈಗ ಪೊಲೀಸ್ ಕಂಟೋನ್ಮೆಂಟ್ ಆಗಿ ಪರಿವರ್ತಿಸಲಾಗಿದೆ. ನಗರದಲ್ಲಿ ಮತ್ತೊಂದು ರಾಮನವಮಿ ಮೆರವಣಿಗೆಗೆ ಸಂಬಂಧಿಸಿದಂತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ವಡೋದರಾ ನಗರ ಪೊಲೀಸರು ನಿರಂತರವಾಗಿ ಗಸ್ತು ತಿರುಗುತ್ತಿದ್ದಾರೆ.