ಕರ್ನಾಟಕ

karnataka

ETV Bharat / bharat

ಫೇಸ್​ಬುಕ್​​ ಫ್ರೆಂಡ್​​ನೊಂದಿಗೆ ಲವ್​ನಲ್ಲಿ ಬಿದ್ದ ವಿವಾಹಿತೆ... ಮದುವೆ ಮಾಡಿಕೊಳ್ಳಲು ಮನೆಯಿಂದ ಪರಾರಿ! - ವಿವಾಹಿತ ಮಹಿಳೆ ಮನೆಯಿಂದ ಪರಾರಿ

ಎರಡು ಮಕ್ಕಳ ತಾಯಿಯಾಗಿರುವ ಮಹಿಳೆಯೋರ್ವಳು ಫೇಸ್​ಬುಕ್​ ಫ್ರೆಂಡ್​ನೊಂದಿಗೆ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಮನೆ ಬಿಟ್ಟು ಹೋಗಿದ್ದ ಘಟನೆ ನಡೆದಿದೆ.

Women
Women

By

Published : Jul 15, 2021, 4:19 AM IST

ಸತ್ನಾ(ಮಧ್ಯಪ್ರದೇಶ):ಮದುವೆ ಮಾಡಿಕೊಂಡಿದ್ದ ವಿವಾಹಿತೆಯೋರ್ವಳು ಫೇಸ್​ಬುಕ್​ ಫ್ರೆಂಡ್​ನೊಂದಿಗೆ ಲವ್​ನಲ್ಲಿ ಬಿದ್ದು, ಆತನ ಭೇಟಿ ಹಾಗೂ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಮಧ್ಯಪ್ರದೇಶದಿಂದ ಉತ್ತರಾಖಂಡದ ಹರಿದ್ವಾರಕ್ಕೆ ಹೋಗಿರುವ ಘಟನೆ ನಡೆದಿದೆ.

ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ನಡೆದಿರುವ ಘಟನೆ ಇದಾಗಿದ್ದು, ವೈವಾಹಿಕ ಜೀವನಕ್ಕೆ ಕಾಲಿಟ್ಟು, ಎರಡು ಮಕ್ಕಳಾಗಿರುವ ಮಹಿಳೆ ಈ ರೀತಿಯಾಗಿ ನಡೆದುಕೊಂಡಿದ್ದಾಳೆ. ಫೇಸ್​ಬುಕ್​ ಫ್ರೆಂಡ್​ನೊಂದಿಗೆ ಲವ್​ನಲ್ಲಿ ಬಿದ್ದು, ಆತನೊಂದಿಗೆ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಕಳೆದ ಜೂನ್​ 28ರಂದು ಮನೆಬಿಟ್ಟು ಪರಾರಿಯಾಗಿದ್ದಳು. ಇದಕ್ಕೆ ಸಂಬಂಧಿಸಿದಂತೆ ಗಂಡನ ಮನೆಯವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಸೈಬರ್​ ಕ್ರೈಂ ಮೂಲಕ ಆಕೆಯನ್ನ ಉತ್ತರಾಖಂಡದ ಹರಿದ್ವಾರದಿಂದ ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿರಿ: ದೇಶೀಯ ಕ್ರಿಕೆಟ್​​ ದೈತ್ಯನಿಗೆ ಮಣೆ... ಒಡಿಶಾ ಕ್ರಿಕೆಟ್ ತಂಡದ ಕೋಚ್​ ಆಗಿ ವಾಸೀಂ ಜಾಫರ್​

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ವಿವಾಹಿತೆ ಫೇಸ್​ಬುಕ್​​ ಮೂಲಕ ಯುವಕನೋರ್ವನನ್ನ ಪ್ರೀತಿಸಿದ್ದಾಳೆ. ಆತನೊಂದಿಗೆ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಮನೆಬಿಟ್ಟು ತೆರಳಿದ್ದಳು ಎಂದಿದ್ದಾರೆ. ಆದರೆ ಆಕೆಯನ್ನ ರಕ್ಷಣೆ ಮಾಡಿ ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ ಎಂದಿದ್ದಾರೆ. ಮಗಳು ಕಾಣೆಯಾಗುತ್ತಿದ್ದಂತೆ ಆಕೆಯ ತಂದೆ ಹುಡುಕಿಕೊಟ್ಟವರಿಗೆ 50 ಸಾವಿರ ರೂ. ನಗದು ಹಣ ಘೋಷಣೆ ಮಾಡಿದ್ದರು.

ABOUT THE AUTHOR

...view details