ಕರ್ನಾಟಕ

karnataka

ETV Bharat / bharat

ಚಹಾಗೆ ಟೀ ಪುಡಿ ಹೆಚ್ಚಾಯ್ತೆಂದು ಅತ್ತೆ ತರಾಟೆ... ಮನನೊಂದ ಸೊಸೆ ಆತ್ಮಹತ್ಯೆ! - ಹೈದರಾಬಾದ್​ ಅಪರಾಧ ಸುದ್ದಿ

ಚಹಾಗೆ ಇಷ್ಟೊಂದು ಟೀ ಪುಡಿ ಹಾಕೋದಾ ಅಂತಾ ಸೊಸೆಗೆ ಅತ್ತೆ ತರಾಟೆ ತೆಗೆದುಕೊಂಡಿದ್ದು, ಮನನೊಂದ ಸೊಸೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ.

married woman committed suicide, married woman committed suicide in Hyderabad, Hyderabad crime news, ವಿವಾಹಿತ ಮಹಿಳೆ ಆತ್ಮಹತ್ಯೆಗೆ ಶರಣು, ಹೈದರಾಬಾದ್​ನಲ್ಲಿ ವಿವಾಹಿತ ಮಹಿಳೆ ಆತ್ಮಹತ್ಯೆಗೆ ಶರಣು, ಹೈದರಾಬಾದ್​ ಅಪರಾಧ ಸುದ್ದಿ,
ಸಂಗ್ರಹ ಚಿತ್ರ

By

Published : May 4, 2021, 9:38 AM IST

ಹೈದರಾಬಾದ್​:ಒಂದು ಸಣ್ಣ ವಿಷಯಕ್ಕೆ ಮನಸ್ತಾಪಗೊಂಡ ಸೊಸೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಗೋಲ್ಕೊಂಡಾದಲ್ಲಿ ನಡೆದಿದೆ.

ಮೇ 1ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ರೇಷಮ್​​ಬಾಗ್​ ನಿವಾಸಿ ಸಯ್ಯದ್​ ಹಬೀಬ್​ ವ್ಯಾಪಾರಸ್ಥರು. ಇವರ ತಾಯಿ ಸಫಿಯಾಬೇಗಂ ಚಹಾ ನೀಡುವಂತೆ ಸೊಸೆ ಬೀಬಿಗೆ (24) ಕೇಳಿದ್ದಾರೆ. ಸೊಸೆ ಬೀಬಿ ಚಹಾ ರೆಡಿ ಮಾಡಿ ಅತ್ತೆಗೆ ನೀಡಿದ್ದಾರೆ. ಚಹಾ ಕುಡಿದ ಅತ್ತೆ ಸಫಿಯಾಬೇಗಂ ಟೀ ಪುಡಿ ಇಷ್ಟೊಂದು ಹಾಕೋದಾ ಅಂತಾ ಸೊಸೆಗೆ ತರಾಟೆ ತೆಗೆದುಕೊಂಡಿದ್ದಾರೆ.

ಇದರಿಂದ ಮನನೊಂದ ಸೊಸೆ ಬೀಬಿ ರೂಂ ಹೋಗಿ ಬಾಗಿಲು ಹಾಕೊಂಡಿದ್ದಾರೆ. ಎಷ್ಟು ಹೊತ್ತಾದರೂ ಬೀಬಿ ರೂಂನಿಂದ ಹೊರ ಬರುತ್ತಿಲ್ಲವೆಂದು ಬಾಗಿಲು ತಟ್ಟಿದ್ದಾರೆ. ಬಾಗಿಲು ತೆಗೆಯದ ಹಿನ್ನೆಲೆ ಮುರಿದು ಒಳ ನುಗ್ಗಿದಾಗ ಬೀಬಿ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು.

ಈ ಘಟನೆ ಕುರಿತು ಗೋಲ್ಕೊಂಡ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details