ಕರ್ನಾಟಕ

karnataka

ETV Bharat / bharat

Video: ಹೈದರಾಬಾದ್​​ನಲ್ಲಿ ಧಾರಾಕಾರ ಮಳೆ... ಕೊಚ್ಚಿಹೋದ ಸಾಫ್ಟವೇರ್ ಇಂಜಿನೀಯರ್

ಮಳೆ ನೀರು ತುಂಬಿಕೊಂಡಿದ್ದ ಹಿನ್ನೆಲೆ ಚರಂಡಿ ಕಾಣಿಸದೆ ಹೊಂಡದಲ್ಲಿ ಕಾಲಿರಿಸಿದ್ದಾನೆ. ತಕ್ಷಣ ಆತ ಕೊಚ್ಚಿಹೋಗಿದ್ದ, ನಿನ್ನೆಯಿಂದಲೂ ಆತನ ಪತ್ತೆಗೆ ಡಿಆರ್​​ಎಫ್​ ಕಾರ್ಯಚರಣೆಯಲ್ಲಿ ನಿರತವಾಗಿದೆ. ಇನ್ನೂ ಪತ್ತೆಯಾಗಿಲ್ಲ.

By

Published : Sep 26, 2021, 6:49 PM IST

Updated : Sep 26, 2021, 10:41 PM IST

a-man-washed-away-while-going-home-in-hyderabad
ಚರಂಡಿಗೆ ಬಿದ್ದು ಕೊಚ್ಚಿಹೋದ ವ್ಯಕ್ತಿ

ಹೈದರಾಬಾದ್: ನಗರದಲ್ಲಿ ಶನಿವಾರ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿತ್ತು. ನಗರದ ಹಲವು ರಸ್ತೆಗಳು ನದಿಯಂತಾಗಿದ್ದವು. ಈ ನಡುವೆ ವ್ಯಕ್ತಿಯೋರ್ವ ರಸ್ತೆ ದಾಟುತ್ತಿದ್ದಾಗ ಚರಂಡಿಯೊಳಗೆ ಬಿದ್ದು ಕೊಚ್ಚಿ ಹೋಗಿರುವ ಘಟನೆ ನಡೆದಿದ್ದು, ಶೋಧಕಾರ್ಯ ಮುಂದುವರಿದಿದೆ.

ನಾಪತ್ತೆಯಾಗಿರುವ ವ್ಯಕ್ತಿಯನ್ನು ಸಾದ್​​ನಗರದ ನಿವಾಸಿ ರಜನಿಕಾಂತ್ ಎಂದು ಗುರುತಿಸಲಾಗಿದೆ. ಈತ ಸಾಫ್ಟವೇರ್ ಉದ್ಯೋಗಿಯಾಗಿದ್ದು, ಶನಿವಾರ ರಾತ್ರಿ ಸುಮಾರು 9 ಗಂಟೆ ವೇಳೆ ರಸ್ತೆ ದಾಟುವಾಗ ಚರಂಡಿಯಲ್ಲಿ ಬಿದ್ದು ಕೊಚ್ಚಿಹೋಗಿದ್ದಾರೆ.

ಘಟನೆ ನಡೆದ ಜಾಗದಿಂದ ಆತನ ಮನೆ 50 ಮೀಟರ್ ದೂರದಲ್ಲಿತ್ತು. ಆದರೆ ಮಳೆ ಬರುವ ಮುನ್ನ ಆತ ಮನೆ ಬಿಟ್ಟಿದ್ದು, ಧಾರಾಕಾರ ಮಳೆ ಸುರಿದ ಬಳಿಕ ಮನೆಗೆ ತೆರಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಚರಂಡಿಗೆ ಬಿದ್ದು ಕೊಚ್ಚಿಹೋದ ವ್ಯಕ್ತಿ

ಮಳೆ ನೀರು ತುಂಬಿಕೊಂಡಿದ್ದ ಹಿನ್ನೆಲೆ ಚರಂಡಿ ಕಾಣಿಸದೆ ಹೊಂಡದಲ್ಲಿ ಕಾಲಿರಿಸಿದ್ದಾನೆ. ತಕ್ಷಣ ಆತ ಕೊಚ್ಚಿಹೋಗಿದ್ದು, ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನಿನ್ನೆಯಿಂದಲೂ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (GHMC)ನ ವಿಪತ್ತು ನಿರ್ವಹಣಾ ಪಡೆ (DRF) ತಂಡವು ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಆದ್ರೆ ಈವರೆಗೆ ಕೊಚ್ರಚಿ ಹೋಗಿರುವ ಟೆಕ್ಕಿ ರಜನಿಕಾಂತ್​ ಪತ್ತೆಯಾಗಿಲ್ಲ.

ಇದನ್ನೂ ಓದಿ:ಬಂಗಾಳ ಕೊಲ್ಲಿಯಲ್ಲಿ ಗುಲಾಬ್ ಸೈಕ್ಲೋನ್: ರಾಜ್ಯದಲ್ಲಿ ಮುಂದಿನ 3 ದಿನ ಮಳೆ ಮುನ್ಸೂಚನೆ

Last Updated : Sep 26, 2021, 10:41 PM IST

ABOUT THE AUTHOR

...view details