ಕರ್ನಾಟಕ

karnataka

ETV Bharat / bharat

400 ರೂ.ಗಾಗಿ ಕೂಲಿ ಕಾರ್ಮಿಕರ ನಡುವೆ ಗಲಾಟೆ: ಲಾರಿಯ ಕೆಳಗೆ ತಳ್ಳಿ ಓರ್ವನ ಹತ್ಯೆ - ಪರಸ್ಪರ ಹಲ್ಲೆ

ಹೈದರಾಬಾದ್​ನಲ್ಲಿ 400 ರೂ.ಗಾಗಿ ವ್ಯಕ್ತಿಯ ಕೊಲೆ - ಹಣಕ್ಕಾಗಿ ಇಬ್ಬರು ಕೂಲಿ ಕಾರ್ಮಿಕರ ನಡುವೆ ಗಲಾಟೆ - ಲಾರಿಯ ಕೆಳಗೆ ತಳ್ಳಿ ಹತ್ಯೆ ಮಾಡಿದ ಆರೋಪಿ

Etv Bharat
Etv Bharat

By

Published : Dec 25, 2022, 11:06 PM IST

ಹೈದರಾಬಾದ್ (ತೆಲಂಗಾಣ): ಹೈದರಾಬಾದ್​ನ ಬಾಲನಗರದಲ್ಲಿ ದಾರುಣ ಘಟನೆಯೊಂದು ನಡೆದಿದೆ. ಕೇವಲ 400 ರೂ.ಗಾಗಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶ್ರೀನಿವಾಸ್ ಎಂಬಾತನೇ ಕೊಲೆಯಾದ ವ್ಯಕ್ತಿಯಾಗಿದ್ದು, ಕಾಸಿರಾಮ್ ಕೊಲೆ ಆರೋಪಿಯಾಗಿದ್ದಾನೆ. ಇಬ್ಬರು ಕೂಡ ದಿನಗೂಲಿ ಕಾರ್ಮಿಕರಾಗಿದ್ದಾರೆ. ಕೂಲಿ ಹಣದಲ್ಲಿ ಕಾಶಿರಾಮ್​ಗೆ ಶ್ರೀನಿವಾಸ್ 400 ರೂಪಾಯಿ ಕಡಿಮೆ ನೀಡಿದ್ದರು ಎಂದು ತಿಳಿದು ಬಂದಿದೆ. ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿದೆ.

ರಾತ್ರಿ ನರಸಾಪುರ ಅಡ್ಡರಸ್ತೆಯ ಫುಟ್​ಪಾತ್ ಮೇಲೆ ಶ್ರೀನಿವಾಸ್ ಮಲಗಿದ್ದಾಗ ಅಲ್ಲಿಗೆ ಬಂದ ಕಾಸಿರಾಮ್ 400 ರೂ.ಗಾಗಿ ಜಗಳವಾಡಿದ್ದಾನೆ. ಆಗ ಇಬ್ಬರೂ ಕೂಡ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ. ಈ ವೇಳೆ ಕಾಶಿರಾಮ್ ಶ್ರೀನಿವಾಸ್‌ಗೆ ದೊಣ್ಣೆಯಿಂದ ಹೊಡೆದು ಲಾರಿಯ ಕೆಳಗೆ ತಳ್ಳಿದ್ದಾನೆ. ಇದರ ಪರಿಣಾಮ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಶ್ರೀನಿವಾಸ್ ತಲೆಗೆ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಬಾಲಾನಗರ ಸರ್ಕಲ್ ಇನ್ಸ್‌ಪೆಕ್ಟರ್ ಭಾಸ್ಕರ್ ತಿಳಿಸಿದ್ದಾರೆ.

ಇದನ್ನೂ ಓದಿ:ನಂಜನಗೂಡು ವಸತಿ ಶಾಲೆಯಲ್ಲಿ ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವು

ABOUT THE AUTHOR

...view details