ಆಳ್ವಾರ( ರಾಜಸ್ಥಾನ):ಆನ್‌ಲೈನ್ ಗೇಮಿಂಗ್ ಗೀಳಿನಿಂದ ತೀವ್ರ ನಡುಕದ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಾಲಕನೊಬ್ಬ ಬಳಲುತ್ತಿರುವ ಘಟನೆ ರಾಜಸ್ಥಾನ ರಾಜ್ಯದ ಆಳ್ವಾರ್‌ನಲ್ಲಿ ನಡೆದಿದೆ. ಬಾಲಕ ಪಬ್ಜಿ ಮತ್ತು ಫ್ರೀ ಫೈರ್‌ನಂತಹ ಆಟಗಳನ್ನು ಆಡುತ್ತಿದ್ದನು. ಆನ್‌ಲೈನ್ ಗೇಮಿಂಗ್ ಚಟದಿಂದ ಬಾಲಕ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾನೆ. ಬಾಲಕನಿಗೆ ಗೇಮಿಂಗ್ ಚಟ ಬಿಡಿಸಲು ಆತನನ್ನು ಸದ್ಯ ವಿಶೇಷ ಶಾಲೆಗೆ ಸೇರಿಸಲಾಗಿದೆ.
ವಿಶೇಷ ಶಿಕ್ಷಕರಾದ ಭವಾನಿ ಶರ್ಮಾ ಹೇಳಿದ್ದೇನು?:ವಿಶೇಷ ಶಿಕ್ಷಕರಾದ ಭವಾನಿ ಶರ್ಮಾ ಮಾತನಾಡಿ, "ನಮ್ಮ ವಿಶೇಷ ಶಾಲೆಗೆ ಬಾಲಕ ಬಂದಿದ್ದಾನೆ. ನಮ್ಮ ಮೌಲ್ಯಮಾಪಕರು ಮತ್ತು ಸಂಬಂಧಿಕರ ಹೇಳಿಕೆಯಂತೆ, ಬಾಲಕ ಪಬ್ಜಿ ಹಾಗೂ ಫ್ರೀ ಫೈರ್‌ನಂತಹ ಗೇಮಿಂಗ್ ಚಟಕ್ಕೆ ಅಂಟಿಕೊಂಡಿದ್ದಾರೆ. ಈ ಬಾಲಕ ಆಟದಲ್ಲಿ ಸೋತಿದ್ದಾನೆ. ಆನ್‌ಲೈನ್ ಗೇಮಿಂಗ್ನಲ್ಲಿ ಆಟಗಾರ ಸೋಲುತ್ತಾನೆ. ಅದನ್ನು ಅವರಿಂದ ಸಹಿಸಲು ಸಾಧ್ಯವಾಗಿಲ್ಲ. ಇದರಿಂದ ಅವರು ಆತ್ಮಹತ್ಯೆಯಂತಹ ಕೃತ್ಯಗಳಿಗೆ ಮುಂದಾಗುತ್ತಾರೆ ಅಥವಾ ಅವರು ಮಾನಸಿಕ ಸಮತೋಲನವನ್ನು ಕಳೆದುಕೊಳ್ಳುತ್ತಾರೆ.
ಇದೇ ಪರಿಸ್ಥಿತಿಯನ್ನು ನಮ್ಮ ಶಾಲೆಗೆ ಬಂದಿರುವ ಬಾಲಕ ಎದುರಿಸುತ್ತಿದ್ದಾನೆ. ತನ್ನ ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾನೆ. ನಾವು ಈ ಬಾಲಕನಿಗೆ ಕ್ರೀಡಾ ಚಟುವಟಿಕೆಗಳ ಸ್ವರೂಪವನ್ನು ಸಿದ್ಧಪಡಿಸಿದ್ದೇವೆ. ಇದರ ಅನ್ವಯ ಮಗುವು ಎಲ್ಲವನ್ನೂ ಗೆಲ್ಲಲು ಸಹಾಯ ಮಾಡಲು ಸಾಧ್ಯವಾಗುತ್ತದೆ. ಇದರಿಂದ ಬಾಲಕನ ಸೋಲಿನ ಭಯ ನಿವಾರಣೆಯಾಗುತ್ತದೆ. ಬಾಲಕ ತನ್ನ ಗೆಲುವನ್ನು ನೆನಪಿಸಿಕೊಳ್ಳುತ್ತಾನೆ ಎಂದು ಅವರು ತಿಳಿಸಿದರು.