ಕರ್ನಾಟಕ

karnataka

ETV Bharat / bharat

ತನ್ನದೇ ಕೇಸ್​ ವಾದಿಸಲು 68 ರ ಪ್ರಾಯದಲ್ಲಿ ಕಾನೂನು ಓದಿ ವಕೀಲನಾದ ವ್ಯಕ್ತಿ!

ತಮ್ಮದೇ ಕೇಸ್​ನಲ್ಲಿ ವಾದಿಸಲು ಅಡಚಣೆ ಉಂಟಾಯಿತು ಎಂಬ ಕಾರಣಕ್ಕಾಗಿ 68 ರ ಪ್ರಾಯದಲ್ಲಿ ಕಾನೂನು ಅಧ್ಯಯನ ಮಾಡಿ ಪದವಿ ಪಡೆದು ವಕೀಲರಾಗಿ ಪಂಜಾಬ್​ನ ವ್ಯಕ್ತಿಯೊಬ್ಬರು ವೃತ್ತಿ ಆರಂಭಿಸಿದ್ದಾರೆ. ಕಲಿಕೆಗೆ ವಯಸ್ಸಿನ ಹಂಗಿಲ್ಲ ಎಂಬುದಿಲ್ಲಿ ಮತ್ತೆ ಸಾಬೀತಾಗಿದೆ.

By

Published : Oct 25, 2022, 10:34 PM IST

a-man-studied-law-argue-his-case-at-the-age-of-68
ತನ್ನದೇ ಕೇಸ್​ ವಾದಿಸಲು 68 ರ ಪ್ರಾಯದಲ್ಲಿ ಕಾನೂನು ಓದಿ ವಕೀಲನಾದ ವ್ಯಕ್ತಿ!

ಬಟಿಂಡಾ(ಪಂಜಾಬ್)​:ಸರ್ಕಾರಿ ಉದ್ಯೋಗದಿಂದ ನಿವೃತ್ತಿ ಹೊಂದಿದ ವ್ಯಕ್ತಿಯೊಬ್ಬರು ತಮ್ಮದೇ ಪ್ರಕರಣದಲ್ಲಿ ವಾದಿಸಲು ಅನುಭವಿಸಿದ ತೊಂದರೆಯಿಂದಾಗಿ 68 ನೇ ವಯಸ್ಸಿನಲ್ಲಿ ಕಾನೂನು ಅಧ್ಯಯನ ಮಾಡಿ ವಕೀಲರಾಗಿ ಸೇವೆ ಆರಂಭಿಸಿದ್ದಾರೆ.

ಇಳಿವಯಸ್ಸಿನಲ್ಲಿ ಕಾನೂನು ಪದವಿ ಪಡೆದು ವಕೀಲಿ ವೃತ್ತಿ ಆರಂಭಿವಿಸಿದ ವ್ಯಕ್ತಿ ಹೆಸರು ಪ್ರಶೋತ್ತಮ್​ ಬನ್ಸಾಲ್​. ಇವರು ಪಂಜಾಬ್​ನ ಬಟಿಂಡಾ ನಿವಾಸಿ. ಕಲಿಕೆಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ತೋರಿಸಿಕೊಟ್ಟಿರುವ ಬನ್ಸಾಲ್​ 68 ರ ಪ್ರಾಯದಲ್ಲಿ ಕಾನೂನು ನಿಯಮಗಳನ್ನು ಕರಗತ ಮಾಡಿಕೊಂಡಿದ್ದಾರೆ.

ತಮ್ಮದೇ ಕೇಸ್​ಗಾಗಿ ಲಾ ಓದಿದರು:2016 ರಲ್ಲಿ ಸರ್ಕಾರಿ ಕೆಲಸದಿಂದ ನಿವೃತ್ತರಾದ ಬನ್ಸಾಲ್​ ತಮ್ಮದೇ ಯಾವುದೋ ಪ್ರಕರಣದಲ್ಲಿ ವಾದಿಸುವಲ್ಲಿ ಕಾನೂನು ತೊಡಕು ಅನುಭವಿಸಿದರು. ಇದನ್ನು ನೀಗಿಸಿಕೊಳ್ಳಲು ಮನಸ್ಸು ಮಾಡಿದ ಅವರು, 2019 ರಲ್ಲಿ ಪಟಿಯಾಲಾ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದರು. ಬಳಿಕ ವಕೀಲರ ಸಂಘದಿಂದ ವಾದಿಸಲು ಪರವಾನಗಿಯನ್ನೂ ಪಡೆದರು. ಈಗ ಪೂರ್ಣ ವಕೀಲರಾಗಿ ಕೋರ್ಟ್​ನಲ್ಲಿ ವಾದಿಸಲು ಶುರು ಮಾಡಿದ್ದಾರೆ. ನಕಲಿ ಟ್ರಾವೆಲ್​ ಏಜೆನ್ಸಿಗಳ ವಿರುದ್ಧ ಗ್ರಾಹಕ ನ್ಯಾಯಾಲಯದಲ್ಲಿ ಕೇಸ್​ ದಾಖಲಿಸಿ, ಕಾನೂನು ಹೋರಾಟ ಆರಂಭಿಸಿದ್ದಾರೆ.

"ಪ್ರತಿಯೊಬ್ಬ ವ್ಯಕ್ತಿಯೂ ಕಾನೂನಿನ ಬಗ್ಗೆ ಮಾಹಿತಿ ಹೊಂದಿರಬೇಕು. ಇದು ಜೀವನಕ್ಕೆ ಅಗತ್ಯ. ನಾನು ಈ ವಯಸ್ಸಿನಲ್ಲಿ ಕಾನೂನು ಅಧ್ಯಯನಕ್ಕೆ ಪ್ರವೇಶ ಪಡೆದಾಗ ಯುವ ವಿದ್ಯಾರ್ಥಿಗಳು ಸಹಕರಿಸಲಿಲ್ಲ. ಕ್ರಮೇಣ ಅವರು ನನ್ನೊಂದಿಗೆ ಹೊಂದಿಕೊಂಡರು. ನ್ಯಾಯ ಪಡೆಯುವುದು ಪ್ರತಿಯೊಬ್ಬ ವ್ಯಕ್ತಿಯ ಹಕ್ಕಾಗಿದ್ದು, ಅವರ ಸಾಕಾರ ಮಾಡಿಕೊಳ್ಳಲು ಕಾನೂನು ತಿಳಿದಿರಬೇಕು" ಎಂಬುದು ಬನ್ಸಾಲ್​ ಅವರ ಮಾತು.

ಇದನ್ನೂ ಓದಿ:17 ವರ್ಷದ ಬಳಿಕ ಪಾಕ್‌ ಜೈಲಿಂದ ಮರಳಿ ತಾಯ್ನಾಡಿಗೆ..; ಮನೆಯಲ್ಲಿ 'ದೀಪಾವಳಿ', ಆನಂದಭಾಷ್ಪ!

ABOUT THE AUTHOR

...view details