ಚಂಡೀಗಢ(ಪಂಜಾಬ್): ವಾಹನಗಳಿಗೆ ವಿಐಪಿ ನಂಬರ್ಪ್ಲೇಟ್ ಅಥವಾ ಫ್ಯಾನ್ಸಿ ನಂಬರ್ಗಾಗಿ ಕೆಲವು ಜನರು ಎಷ್ಟು ಬೇಕಾದರೂ ಖರ್ಚು ಮಾಡಲು ಸಿದ್ಧರಿರುತ್ತಾರೆ. ಚಂಡೀಗಢದಲ್ಲೋರ್ವ ವ್ಯಕ್ತಿ 15 ಲಕ್ಷ ರೂ ಕೊಟ್ಟು ಫ್ಯಾನ್ಸಿ ನಂಬರ್ ಪಡೆದಿದ್ದಾರೆ. 42 ವರ್ಷದ ಬ್ರಿಜ್ ಮೋಹನ್ ತಮ್ಮ 71 ಸಾವಿರ ರೂಪಾಯಿಯ ಸ್ಕೂಟಿಗೆ ಇಷ್ಟೊಂದು ಹಣ ಕೊಟ್ಟು ಫ್ಯಾನ್ಸಿ ನಂಬರ್ ಪಡೆದು ಎಲ್ಲರ ಹುಬ್ಬೇರಿಸಿದ್ದಾರೆ.
ಬ್ರಿಜ್ ಮೋಹನ್ ಜಾಹೀರಾತು ವ್ಯವಹಾರ ಹೊಂದಿದ್ದು ಚಂಡೀಗಢದ ಸೆಕ್ಟರ್-23ರಲ್ಲಿ ವಾಸಿಸುತ್ತಿದ್ದಾರೆ. ಇತ್ತೀಚೆಗೆ ಚಂಡೀಗಢ ನೋಂದಣಿ ಮತ್ತು ಪರವಾನಗಿ ಪ್ರಾಧಿಕಾರ ಆಯೋಜಿಸಿದ್ದ ಹರಾಜಿನಲ್ಲಿ ಇವರು ಫ್ಯಾನ್ಸಿ ನಂಬರ್ ಖರೀದಿಸಿದ್ದಾರೆ. ಅಂದಹಾಗೆ, CH01-CJ-0001 ಸಂಖ್ಯೆ ಪಡೆಯಲು ಇವರು ಇಷ್ಟೊಂದು ಹಣ ವ್ಯಯಿಸಿದ್ದಾರೆ.