ಕರ್ನಾಟಕ

karnataka

ETV Bharat / bharat

ಗ್ರಾಮಕ್ಕೆ ನುಗ್ಗಿದ  ಪ್ರವಾಹ ನೀರು.. 'ಬಾಹುಬಲಿ' ಸಿನಿಮಾದಂತೆ ಮಗು ರಕ್ಷಿಸಿದ ದೊಡ್ಡಪ್ಪ! - ಮಹೇಂದ್ರ ಬಾಹುಬಲಿ

'ಬಾಹುಬಲಿ' ಸಿನಿಮಾದಲ್ಲಿ ಶಿವಗಾಮಿ ಪಾತ್ರದಾರಿ ನಟಿ ರಮ್ಯ ಕೃಷ್ಣ, 'ಮಹೇಂದ್ರ ಬಾಹುಬಲಿ'ಯನ್ನು ನದಿಯಿಂದ ಅಂಗೈಯಲ್ಲೇ ಮೇಲೆತ್ತಿ ರಕ್ಷಿಸುವ ಸನ್ನಿವೇಶವನ್ನು ಎಲ್ಲರೂ ನೋಡಿರುತ್ತೀರಿ. ಇಡೀ ಸಿನಿಮಾದಲ್ಲಿ ಇದೊಂದು ಹೃದಯಸ್ಪರ್ಶಿ ದೃಶ್ಯ. ಇಂತಹದ್ದೇ ಸನ್ನಿವೇಶ ತೆಲಂಗಾಣದಲ್ಲಿ ನಡೆದಿದೆ. ಪ್ರವಾಹ ನೀರಿನಲ್ಲಿ ವ್ಯಕ್ತಿಯೊಬ್ಬರು ಪುಟ್ಟ ಮಗುವನ್ನು ಪಾತ್ರೆಯಲ್ಲಿಟ್ಟುಕೊಂಡು ತಲೆ ಮೇಲೆ ಹೊತ್ತುಕೊಂಡು ಬಂದಿದ್ಧಾರೆ.

a-man-saved-2-month-old-baby-in-bahubali-style-in-marriwada-floods-in-telangana
ಗ್ರಾಮಕ್ಕೆ ನುಗ್ಗಿದ ಭುಜದ ಎತ್ತರಕ್ಕೆ ಪ್ರವಾಹ ನೀರು... 'ಬಾಹುಬಲಿ' ಸಿನಿಮಾದಂತೆ ಮಗುವನ್ನು ರಕ್ಷಿಸಿದ ದೊಡ್ಡಪ್ಪ!

By

Published : Jul 14, 2022, 5:44 PM IST

ಪೆದ್ದಪಲ್ಲಿ(ತೆಲಂಗಾಣ): ಪಕ್ಕದ ತೆಲಂಗಾಣದಲ್ಲೂ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಅನೇಕ ಜಿಲ್ಲೆಗಳಲ್ಲಿ ಹಲವು ಗ್ರಾಮಗಳಲ್ಲಿ ಜಲಾವೃತಗೊಂಡಿವೆ. ಸುರಕ್ಷಿತ ಪ್ರದೇಶಗಳಲ್ಲಿ ನಿವಾಸಿಗಳು ಸ್ಥಳಾಂತರವಾಗುತ್ತಿದ್ದಾರೆ. ಇದರ ನಡುವೆ ಪೆದ್ದಪಲ್ಲಿ ಜಿಲ್ಲೆಯಲ್ಲಿ ಕುತ್ತಿಗೆ ಎತ್ತರದ ಪ್ರವಾಹ ನೀರಿನಲ್ಲಿ ಎರಡು ತಿಂಗಳ ಮಗುವೊಂದರನ್ನು ದೊಡ್ಡಪ್ಪ ಪಾತ್ರೆಯಲ್ಲಿ ಇಟ್ಟುಕೊಂಡು ರಕ್ಷಣೆ ಮಾಡಿದ್ದಾರೆ.

ಬಾಹುಬಲಿ' ಸಿನಿಮಾದಂತೆ ಮಗು ರಕ್ಷಿಸಿದ ದೊಡ್ಡಪ್ಪ

ಪೆದ್ದಪಲ್ಲಿ ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಸುರಯಪಲ್ಲಿ, ಪೋತಾರಂ, ಸಿರಿಪುರಂ, ಬೆಸ್ತಪಲ್ಲಿ, ವಿಲೋಚವರಂ, ಮರಿವಾಡ ಗ್ರಾಮಗಳು ನಲುಗಿ ಹೋಗಿವೆ. ಅದರಲ್ಲೂ, ಮರಿವಾಡ ಗ್ರಾಮದಲ್ಲಿ ಭುಜದ ಎತ್ತರಕ್ಕೆ ಪ್ರವಾಹದ ನೀರು ನುಗ್ಗಿವೆ. ಇದರಿಂದ ಸುರಕ್ಷಿತ ಸ್ಥಳಗಳಿಗೆ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ. ಇದೇ ಗ್ರಾಮದ ಮನೆಯೊಂದರಲ್ಲಿ ಪುಪ್ಪಾಳ ಸುಮಲತಾ ಎಂಬ ಮಹಿಳೆಯು ಎರಡು ತಿಂಗಳ ಮಗು ಹೊಂದಿದ್ದು, ತಾಯಿ ಮತ್ತು ಮಗುವನ್ನು ರಕ್ಷಿಸಲು ಸಂಬಂಧಿಕರು ನಿರ್ಧರಿಸಿದ್ದರು.

ತಾಯಿ ಸುಮಲತಾ ಅದೇ ನೀರಿನಲ್ಲಿ ಹೇಗೋ ತೆರಳಿ ದಡ ಸೇರಲು ಮುಂದಾಗಿದ್ದರು. ಆದರೆ, ಎಲ್ಲಿ ನೋಡಿದರೂ ಕುತ್ತಿಗೆ ಎತ್ತರದ ಪ್ರವಾಹ ನೀರು ಇರುವುದರಿಂದ ಎರಡು ತಿಂಗಳ ಮಗುವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಲು ಸಾಧ್ಯವಾಗುತ್ತಿರಲಿಲ್ಲ.

ಹೀಗಾಗಿ ಮಗುವಿನ ದೊಡ್ಡಪ್ಪ ರಾಮಮೂರ್ತಿ, ಉಪಾಯ ಮಾಡಿ ಹಾಸಿಗೆಯಲ್ಲಿ ಮಗುವನ್ನು ಸುತ್ತಿದ್ಧಾರೆ. ನಂತರ ಮಗುವನ್ನು ಪಾತ್ರೆಯಲ್ಲಿ ಇಟ್ಟುಕೊಂಡು ತಲೆ ಮೇಲೆ ಹೊತ್ತುಕೊಂಡು ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ಧಾರೆ. ಇದೀಗ ವಿಡಿಯೋ ವೈರಲ್​ ಆಗಿದ್ದು, ಈ ದೃಶ್ಯ 'ಬಾಹುಬಲಿ' ಸಿನಿಮಾದ ಸನ್ನಿವೇಶವನ್ನು ನೆನಪಿಸುವಂತಿದೆ ಎಂದು ನೆಟ್ಟಿಗರು ಹೊಗಳಿದ್ದಾರೆ.

ಇದನ್ನೂ ಓದಿ:ನದಿಯಲ್ಲಿ ಸಿಲುಕಿದ ಟ್ರ್ಯಾಕ್ಟರ್​​.. ನೋಡ - ನೋಡುತ್ತಿದ್ದಂತೆ ಹರಿದು ಬಂದ ಪ್ರವಾಹದ ನೀರು.. ವಿಡಿಯೋ

ABOUT THE AUTHOR

...view details