ಕರ್ನಾಟಕ

karnataka

ETV Bharat / bharat

ಒಡಿಶಾದ ಹೊಟೇಲ್‌ನಲ್ಲಿ ರಷ್ಯಾ ವ್ಯಕ್ತಿ ಆತ್ಮಹತ್ಯೆ; ಅನುಮಾನಕ್ಕೆ ಕಾರಣವಾದ ಪ್ರಕರಣ - suicide

ಒಡಿಶಾದ ರಾಯಗಡದ ಹೊಟೆಲೊಂದರಲ್ಲಿ​ ರಷ್ಯಾ ಮೂಲಕ ಪ್ರಜೆಯೊಬ್ಬ ಸಾವಿಗೆ ಶರಣಾಗಿದ್ದಾನೆ. ಪ್ರಕರಣ ಅನುಮಾನಾಸ್ಪದವಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

odisha-a-man-of-russian-origin-committed-suicide-in-a-hotel
ಓಡಿಶಾ: ರಷ್ಯಾ ಮೂಲದ ವ್ಯಕ್ತಿ ಹೊಟೆಲ್​ನಲ್ಲಿ ಆತ್ಮಹತ್ಯೆ

By

Published : Dec 25, 2022, 7:18 AM IST

ರಾಯಗಡ (ಒಡಿಶಾ): ರಷ್ಯಾದ ಪ್ರವಾಸಿಯೊಬ್ಬರು ಶನಿವಾರ ರಾಯಗಡ ಜಿಲ್ಲೆಯ ಹೋಟೆಲ್‌ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡಿಸೆಂಬರ್ 22 ರಂದು ಇದೇ ಹೋಟೆಲ್‌ನಲ್ಲಿ ಮತ್ತೊಬ್ಬ ಪ್ರವಾಸಿಗ ಸಾವನ್ನಪ್ಪಿದ್ದ. ಮೃತರನ್ನು ವ್ಲಾಡಿಮಿರ್ ಬೈಡಾನೋವ್ (61) ಎಂದು ಗುರುತಿಸಲಾಗಿದೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಹೊರತೆಗೆದು ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ. ರಾಯಗಡ ಪಟ್ಟಣದಲ್ಲಿ ಶುಕ್ರವಾರ ಬೆಳಗ್ಗೆ ಮತ್ತೊಬ್ಬ ರಷ್ಯಾದ ಪ್ರವಾಸಿ ಹೋಟೆಲ್ ಕೊಠಡಿಯಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿಯೇ ಶವವಾಗಿ ಪತ್ತೆಯಾಗಿದ್ದನು.

ಸಾವಿಗೆ ಮಿತಿಮೀರಿದ ಮದ್ಯ ಸೇವನೆಯೇ ಸಾವಿಗೆ ಕಾರಣ ಎಂದು ಶಂಕಿಸಲಾಗಿದೆ. ಆದರೆ ಸತ್ಯಾಂಶ ತಿಳಿದುಬರಬೇಕಿದೆ. ವರದಿಯ ಪ್ರಕಾರ, ರಷ್ಯಾದ ನಾಲ್ವರು ಪ್ರವಾಸಿಗರು ಡಿಸೆಂಬರ್ 21 ರಂದು ದರಿಂಗ್‌ಬಾಡಿಯಿಂದ ರಾಯಗಡಕ್ಕೆ ಆಗಮಿಸಿ ಸಾಯಿ ಇಂಟರ್‌ನ್ಯಾಶನಲ್ ಹೋಟೆಲ್‌ನಲ್ಲಿ ತಂಗಿದ್ದರು.

ರಾತ್ರಿ ಎಲ್ಲಾ ಪ್ರವಾಸಿಗರು ಮತ್ತು ಮಾರ್ಗದರ್ಶಕ ಜಿತೇಂದ್ರ ಸಿಂಗ್ ತಮ್ಮ ತಮ್ಮ ಕೋಣೆಗಳಿಗೆ ಮಲಗಲು ಹೋಗಿದ್ದರು. ಬೆಳಿಗ್ಗೆ ವ್ಲಾಡಿಮಿರ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಹೋಟೆಲ್‌ಗೆ ಆಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಈ ಬಗ್ಗೆ ರಷ್ಯಾ ರಾಯಭಾರಿ ಕಚೇರಿಗೂ ಮಾಹಿತಿ ನೀಡಲಾಗಿದೆ. ವ್ಲಾಡಿಮಿರ್ ಕಳೆದ ರಾತ್ರಿ ಅಧಿಕ ಮದ್ಯ ಸೇವಿಸಿದ್ದರು. ಕೆಲವು ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

ಇದನ್ನೂ ಓದಿ:ಸಿಖ್ಖರಿಗೆ ಗಡ್ಡ, ಪೇಟ ಧರಿಸಿ ದೇಶ ಸೇವೆ ಸಲ್ಲಿಸಲು ಅನುಮತಿ ನೀಡಿದ ಅಮೆರಿಕ ನ್ಯಾಯಾಲಯ

ABOUT THE AUTHOR

...view details