ಬಸ್ತಾರ್(ಛತ್ತೀಸ್ಗಢ):ಯುವಕನೋರ್ವ ಮದುವೆ ಮಂಟಪದಲ್ಲಿ ಇಬ್ಬರು ಹುಡುಗಿಯರೊಂದಿಗೆ ಸಪ್ತಪದಿ ತುಳಿದಿರುವ ವಿಚಿತ್ರ ಘಟನೆ ಛತ್ತೀಸ್ಗಢದ ಬಸ್ತಾರ್ ಎಂಬಲ್ಲಿ ನಡೆದಿದೆ. ಇದರ ವಿಡಿಯೋ ಇದೀಗ ಎಲ್ಲಡೆ ವೈರಲ್ ಆಗ್ತಿದೆ.
ಇದು ಸಿನಿಮಾ ಸೀನ್ ಅಲ್ಲ, ನಿಜವಾದ ಮದುವೆ... ವಿಡಿಯೋ ನೋಡಿ! - ಒಂದೇ ಮಂಟಪದಲ್ಲಿ ಇಬ್ಬರೊಂದಿಗೆ ಮದುವೆ
ಯುವಕನೋರ್ವ ಇಬ್ಬರು ಯುವತಿಯರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಘಟನೆ ಛತ್ತೀಸ್ಗಢದಲ್ಲಿ ನಡೆದಿದ್ದು, ಇದರ ವಿಡಿಯೋ ಇದೀಗ ವೈರಲ್ ಆಗಿದೆ.
ಇಡೀ ಗ್ರಾಮಸ್ಥರ ಒಪ್ಪಿಗೆ ಹಾಗೂ ಅವರ ಸಮ್ಮುಖದಲ್ಲೇ ಇಂತಹದೊಂದು ಮದುವೆ ಕಾರ್ಯಕ್ರಮ ನಡೆದಿದ್ದು, ಇಬ್ಬರು ಯುವತಿಯರ ಜೊತೆ ಯುವಕ ಸಪ್ತಪದಿ ತುಳಿದಿದ್ದಾನೆ. ಹಿಂದೂ ಪದ್ಧತಿಯಂತೆ ಒಬ್ಬ ವ್ಯಕ್ತಿ ಇಬ್ಬರ ಜೊತೆ ಒಂದೇ ಮಂಟಪದಲ್ಲಿ ಮದುವೆಯಾಗುವುದಕ್ಕೆ ಅವಕಾಶವಿಲ್ಲ. ಆದರೂ ಬುಡಕಟ್ಟು ಆಚರಣೆಗಳೊಂದಿಗೆ ಈ ವಿವಾಹ ನಡೆದಿದೆ. ಚಂದು ಮೌರ್ಯ ಎಂಬಾತ ಈ ಮದುವೆಯಾಗಿದ್ದಾನೆ.
ಜನವರಿ 3ರಂದು ವಿವಾಹ ನಡೆದಿದ್ದು, ಇದೀಗ ಇದರ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಇಬ್ಬರು ಯುವತಿಯರು ಇದೇ ಯುವಕನನ್ನು ಏಕೆ ಮದುವೆಯಾದರು ಎಂಬುದು ಇಲ್ಲಿಯವರೆಗೆ ಯಾರಿಗೂ ತಿಳಿದಿಲ್ಲ. ಅವರು ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.