ಕರ್ನಾಟಕ

karnataka

ETV Bharat / bharat

ಹಿರಿಯಣ್ಣನ ಮಕ್ಕಳು ಸೇರಿ ಐವರ ಕೊಲೆಗೈದು ಪಶ್ಚಾತ್ತಾಪದಿಂದ ಪೊಲೀಸರಿಗೆ ಶರಣಾದ! - ಒಡಿಶಾದಲ್ಲಿ ಆಸ್ತಿಗಾಗಿ ಐವರ ಕೊಲೆ

ಆಸ್ತಿ ವಿಚಾರಕ್ಕಾಗಿ ನಡೆದ ಗಲಾಟೆಯಲ್ಲಿ ತನ್ನನ್ನು ಥಳಿಸಿದರು ಎಂದು ಕೋಪಗೊಂಡ ವ್ಯಕ್ತಿಯೊಬ್ಬ ತನ್ನ ಹಿರಿಯಣ್ಣನ ಕುಟುಂಬದ ಇಬ್ಬರು ಮಕ್ಕಳು ಸೇರಿದಂತೆ ಐವರನ್ನು ನಿರ್ದಯವಾಗಿ ಕೊಲೆ ಮಾಡಿದ ಘಟನೆ ಒಡಿಶಾದಲ್ಲಿ ನಡೆದಿದೆ.

man-killed
ಕೊಚ್ಚಿ ಕೊಲೆ

By

Published : Apr 13, 2022, 3:51 PM IST

ಒಡಿಶಾ: ಆಸ್ತಿ ವಿಚಾರಕ್ಕಾಗಿ ನಡೆದ ಸಂಘರ್ಷದಲ್ಲಿ ವ್ಯಕ್ತಿಯೊಬ್ಬ ತನ್ನ ಹಿರಿಯ ಸಹೋದರನ ಕುಟುಂಬದ ಇಬ್ಬರು ಚಿಕ್ಕಮಕ್ಕಳೂ ಸೇರಿದಂತೆ ಐವರನ್ನು ದಾರುಣವಾಗಿ ಹತ್ಯೆ ಮಾಡಿದ್ದಾನೆ. ಅಲ್ಲದೇ, ಕೋಪದಲ್ಲಿ ಕೊಲೆ ಮಾಡಿದ ಬಳಿಕ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹಗಳನ್ನು ಕಂಡು ನೊಂದು, ಪಶ್ಚಾತ್ತಾಪಕ್ಕೊಳಗಾಗಿ ತಾನೇ ವಿಡಿಯೋ ಮಾಡಿ ತಪ್ಪೊಪ್ಪಿಕೊಂಡ. ಬಳಿಕ ಪೊಲೀಸ್​ ಠಾಣೆಗೆ ಹೋಗಿ ಶರಣಾದ.

ಒಡಿಶಾದ ಕಟಕ್ ಜಿಲ್ಲೆಯ ಕುಸುಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಿವ ಸಾಹೂ(50)ಕೊಲೆ ಆರೋಪಿ. ಅಲೇಖ್ ಸಾಹೂ (55), ಅವರ ಪತ್ನಿ ಸ್ಮೃತಿ ರೇಖಾ ಪ್ರಸ್ಟಿ (50), ಪುತ್ರಿ ಸಂಧ್ಯಾ (18), ಸೌರವ್ (12) ಮತ್ತು ಸಾಯಿ (8) ಚಿಕ್ಕಪ್ಪನ ಕೋಪಕ್ಕೆ ಪ್ರಾಣ ತೆತ್ತವರು. ಆಸ್ತಿಯ ವಿಚಾರಕ್ಕಾಗಿ ತನ್ನ ಹಿರಿಯ ಸಹೋದರನ ಜೊತೆ ಆರೋಪಿ ಶಿವ ಸಾಹೂ ಕಿತ್ತಾಟ ನಡೆಸುತ್ತಿದ್ದನಂತೆ. 3 ದಿನಗಳ ಹಿಂದೆಯೂ ಕೂಡ ಇಬ್ಬರ ಮಧ್ಯೆ ಜಗಳವಾಗಿದೆ.

ಈ ವೇಳೆ ಅಲೇಖ್​ ಸಾಹೂ ತನ್ನ ತಮ್ಮ ಶಿವ ಸಾಹೂವಿನ ಮೇಲೆ ಹಲ್ಲೆ ನಡೆಸಿದ್ದನಂತೆ. ಇದರಿಂದ ಕ್ರುದ್ಧನಾದ ಶಿವಸಾಹೂ ಅದೇ ದಿನ ರಾತ್ರಿ ತನ್ನ ಅಣ್ಣನ ಇಡೀ ಕುಟುಂಬವನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ಬಳಿಕ ರಕ್ತದ ಮಡುವಿನಲ್ಲಿ ಬಿದ್ದಿದ್ದ ತನ್ನದೇ ಕುಟುಂಬವನ್ನು ಕಂಡು ಮರುಕ ಉಂಟಾಗಿದೆ.

ತಾನು ಮಾಡಿದ ತಪ್ಪಿನ ಅರಿವಾಗಿ ಮೊಬೈಲ್​ನಲ್ಲಿ ವಿಡಿಯೋ ಮಾಡಿ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಜಗಳದ ವೇಳೆ ತನ್ನ ಹಿರಿಯಣ್ಣ ಸೇರಿದಂತೆ ಕುಟುಂಬದವರು ನನ್ನನ್ನು ಥಳಿಸಿದ್ದರಿಂದ ಕೋಪದಲ್ಲಿ ಎಲ್ಲರನ್ನೂ ಕೊಲೆ ಮಾಡಿದೆ ಎಂದು ಹೇಳಿಕೊಂಡಿದ್ದಾನೆ. ಇದಾದ ಬಳಿಕ ಪಶ್ಚಾತ್ತಾಪದಿಂದ ಪೊಲೀಸ್​ ಠಾಣೆಗೆ ಬಂದು ತಾನೇ ಶರಣಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:ಪ್ರಿಯಕರನೊಂದಿಗೆ ಇರಲು ಮೂರು ವರ್ಷದ ಮಗನ ಕೊಲೆಗೈದ ತಾಯಿ

ABOUT THE AUTHOR

...view details