ರಾಯದುರ್ಗ(ಆಂಧ್ರಪ್ರದೇಶ): ದಿನದಿಂದ ದಿನಕ್ಕೆ ತೈಲ ದರ ಗಗನಕ್ಕೇರುತ್ತಿದೆ. ಆಳುವ ಸರ್ಕಾರಗಳ ವಿರುದ್ಧ ಜನತೆ ವಿಭಿನ್ನವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಜಿಲ್ಲೆಯ ವ್ಯಕ್ತಿಯೊಬ್ಬರು ಎಲ್ಲರಿಗಿಂತ ಡಿಫ್ರೆಂಟಾಗಿ ಯೋಚಿಸಿದ್ದಾರೆ. ಅನಂತಪುರ ಜಿಲ್ಲೆಯ ರಾಯದುರ್ಗ ಪಟ್ಟಣದ ನಿವಾಸಿ ಸುರೇಶ್ ಕೋಟಾ ಕತ್ತೆಯೊಂದಿಗೆ ಬಂಡಿ ಅಳವಡಿಸಿ ವಾಹನ ಮಾಡಿಕೊಂಡಿದ್ದಾರೆ.
ಕತ್ತೆ ಕುದುರೆಯಾಗಿ, ಇಂಧನವಿರದಿದ್ರೂ ಓಡುವ ದ್ವಿಚಕ್ರದ ಗಾಡಿ.. ಅಗಸನ ಬುದ್ಧಿ ಬಲು ಚುರುಕು.. - ಆಂಧ್ರಪ್ರದೇಶದ ರಾಯದುರ್ಗ
ನಿತ್ಯ 4 ಕಿಲೋಮೀಟರ್ ಪ್ರಯಾಣಿಸಬೇಕಿತ್ತು. ಪೆಟ್ರೋಲ್ ದರ ಗಗನಕ್ಕೇರಿದ್ದರಿಂದ ಪ್ರಯಾಣಿಸಲು ತೊಂದರೆಯಾಗಿತ್ತು. ಏನು ಮಾಡಬೇಕೆಂದು ಯೋಚಿಸುತ್ತಿದ್ದಾಗ, ತನ್ನ ಬಳಿಯೇ ಇದ್ದ ಕತ್ತೆ ಬಳಸಿ, ಅದಕ್ಕೆ ಎರಡು ಚಕ್ರವಿರುವ ಬಂಡಿ ಅಳವಡಿಸಿದರು. ಇದಕ್ಕೆ ಅಂದಾಜು 10 ಸಾವಿರ ರೂಪಾಯಿ ವೆಚ್ಚ ತಗುಲಿದೆಯಷ್ಟೇ..
ಕತ್ತೆಯನ್ನೇ ವಾಹನವನ್ನಾಗಿ ಮಾಡಿಕೊಂಡ ವ್ಯಕ್ತಿ..
ಇವರು ವೃತ್ತಿಯಿಂದ ಅಗಸನಾಗಿದ್ದಾರೆ. ನಿತ್ಯ 4 ಕಿಲೋಮೀಟರ್ ಪ್ರಯಾಣಿಸಬೇಕಿತ್ತು. ಪೆಟ್ರೋಲ್ ದರ ಗಗನಕ್ಕೇರಿದ್ದರಿಂದ ಪ್ರಯಾಣಿಸಲು ತೊಂದರೆಯಾಗಿತ್ತು. ಏನು ಮಾಡಬೇಕೆಂದು ಯೋಚಿಸುತ್ತಿದ್ದಾಗ, ತನ್ನ ಬಳಿಯೇ ಇದ್ದ ಕತ್ತೆ ಬಳಸಿ, ಅದಕ್ಕೆ ಎರಡು ಚಕ್ರವಿರುವ ಬಂಡಿ ಅಳವಡಿಸಿದರು. ಇದಕ್ಕೆ ಅಂದಾಜು 10 ಸಾವಿರ ರೂಪಾಯಿ ವೆಚ್ಚ ತಗುಲಿದೆಯಷ್ಟೇ.. ಯಾವುದೇ ತೈಲ ಬಳಕೆ ಅವಶ್ಯಕತೆಯಿಲ್ಲ ಎಂದು ಸುರೇಶ್ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ:1ರೂ.ಗೆ ಲೀಟರ್ ಪೆಟ್ರೋಲ್.. ಆದಿತ್ಯ ಠಾಕ್ರೆ ಬರ್ತಡೇ ಗಿಫ್ಟ್!