ತೆನಾಲಿ (ಆಂಧ್ರಪ್ರದೇಶ):ಬಾಲ್ ಪಾಯಿಂಟ್ ಪೆನ್ನುಗಳು ಬಂದ ಮೇಲೆ ಆ ಕಾಲದಲ್ಲಿ ದುಬಾರಿಯಾಗಿದ್ದ ಫೌಂಟೇನ್ ಪೆನ್ನುಗಳು ಮರೆಯಾದವು. ಈ ಹಿಂದೆ ಫೌಂಟೇನ್ ಪೆನ್ನುಗಳನ್ನು ಇಟ್ಟುಕೊಳ್ಳುವುದೇ ವಿಶೇಷವಾಗಿತ್ತು. ಶ್ರೀಮಂತ ವರ್ಗದವರು ಮಾತ್ರ ಇದನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದರು. ಅವುಗಳ ಮೇಲಿನ ಪ್ರೀತಿ ಮತ್ತು ನೆನಪಿಗಾಗಿ ಆಂಧ್ರಪ್ರದೇಶದ ತೆನಾಲಿ ಜಿಲ್ಲೆಯ ವ್ಯಾಪಾರಿಯೊಬ್ಬರು ಫೌಂಟೇನ್ ಪೆನ್ನುಗಳನ್ನು ಸಂಗ್ರಹಣೆ ಮಾಡಿದ್ದಾರೆ.
ಗುಂಟೂರಿನ ರಾಯ್ನಾರ್ ಪೆನ್ ಸ್ಟೋರ್ಸ್ ಮಾಲೀಕ ವೆಂಕಟ ನಾರಾಯಣಮೂರ್ತಿ ಫೌಂಟೇನ್ ಪೆನ್ನುಗಳನ್ನು ಸಂಗ್ರಹಣೆ ಮಾಡುತ್ತಿರುವವರು. ಇವರ ಅಂಗಡಿಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಬಳಸಿದ ಪೆನ್ನಿಂದ ಹಿಡಿದು ಇತ್ತೀಚಿನವರೆಗಿನ ಮಾದರಿಯ ಫೌಂಟೇನ್ ಪೆನ್ನುಗಳಿವೆಯಂತೆ. ಅಲ್ಲದೇ, ಎಲ್ಲ ವಿಧದ ಫೌಂಟೇನ್ ಪೆನ್ನುಗಳನ್ನು ಅವರ ಅಂಗಡಿಯಲ್ಲಿ ಕಾಣಬಹುದು.
ಅಪರೂಪದ, ಅಮೂಲ್ಯವಾದ ಮತ್ತು ಅತ್ಯಾಧುನಿಕ ಪೆನ್ನುಗಳಷ್ಟೇ ಅಲ್ಲದೇ ಹಳೆಯ ಕಾಲದ ಟ್ರೆಂಡಿ ಪೆನ್ನುಗಳನ್ನೂ ನಾರಾಯಣಮೂರ್ತಿ ಅವರು ಸಂಗ್ರಹಣೆ ಮಾಡಿದ್ದಾರೆ. ಗ್ರಾಹಕರ ಹಾನಿಗೊಳಗಾದ ಪೆನ್ನುಗಳನ್ನು ಉಚಿತವಾಗಿ ದುರಸ್ತಿ ಮಾಡಿಕೊಡುತ್ತಾರೆ. ನಾರಾಯಣಮೂರ್ತಿ ಅವರ ಅಂಗಡಿಯಲ್ಲಿ ವಿವಿಧ ಫೌಂಟೇನ್ ಪೆನ್ನುಗಳ ಜೊತೆಗೆ ವಿದೇಶದ ಕೆಲವು ದುಬಾರಿ ಪೆನ್ನುಗಳೂ ಇವೆಯಂತೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಚಿನ್ನ, ಬೆಳ್ಳಿ ಮತ್ತು ಹಿತ್ತಾಳೆ ಲೇಪಿತ ಪೌಂಟೇನ್ ಪೆನ್ನುಗಳು ಇಲ್ಲಿ ದೊರೆಯುತ್ತವೆ. ಜೊತೆಗೆ 30 ವಿವಿಧ ಬಣ್ಣಗಳ ಶಾಯಿಯನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ.
ಆಂಧ್ರಪ್ರದೇಶದ ವ್ಯಾಪಾರಿಯಿಂದ ಅಪರೂಪದ ಫೌಂಟೇನ್ ಪೆನ್ನುಗಳ ಸಂಗ್ರಹ ಫೌಂಟೇನ್ ಪೆನ್ನುಗಳೆಂದರೆ ನನಗೆ ಇಷ್ಟ. ಅವುಗಳ ಮೇಲಿನ ಪ್ರೀತಿಯಿಂದಾಗಿ ಇಷ್ಟು ಪ್ರಮಾಣದ ಪೆನ್ನುಗಳನ್ನು ಅಂಗಡಿಯಲ್ಲಿ ಸಂಗ್ರಹಣೆ ಮಾಡಿದ್ದೇನೆ. ಮಾರಾಟಕ್ಕೂ ಲಭ್ಯ ಇವೆ. ಗ್ರಾಹಕರಲ್ಲಿರುವ ಫೌಂಟೇನ್ ಪೆನ್ನುಗಳು ಹಾಳಾಗಿದ್ದರೆ, ಅವುಗಳನ್ನು ಉಚಿತವಾಗಿ ರಿಪೇರಿ ಮಾಡಿಕೊಡುತ್ತೇನೆ ಎನ್ನುತ್ತಾರೆ ನಾರಾಯಣಮೂರ್ತಿ.
ಓದಿ:ಚಿನ್ನದ ದರದಲ್ಲಿ ಇಳಿಕೆ.. ಬೆಳ್ಳಿ ದರದಲ್ಲಿ ಏರಿಕೆ