ಅನಂತಪುರ (ಆಂಧ್ರಪ್ರದೇಶ): ಸಿನಿಮಾದಲ್ಲಿ ಚೀನಾದವರು ಹಾವು, ಹುಳ - ಉಪ್ಪಟ ತಿನ್ನುವುದನ್ನು ನೋಡಿ ಮುಖ ಕಿವುಚಿಕೊಳ್ಳುತ್ತೇವೆ. ಆದರೆ, ನಮ್ಮ ನಡುವೆಯೇ ಆತರದ ವ್ಯಕ್ತಿ ಕಂಡು ಬಂದರೆ ಹೇಗೆ ಎಂಬುದನ್ನು ಒಮ್ಮೆ ಊಹಿಸಿಕೊಳ್ಳಿ.
ಹೌದು, ಆಂಧ್ರಪ್ರದೇಶದಲ್ಲಿ ತಿಂಡಿ ತಿನ್ನುವ ಹಾಗೆ ಹಾವುಗಳನ್ನೇ ತಿನ್ನುವ ವ್ಯಕ್ತಿ ಕಂಡುಬಂದಿದ್ದಾನೆ. ಅನಂತಪುರಂ ಜಿಲ್ಲೆಯ ಪುತ್ತೂರು ವಲಯ ಶಾನಗಳಗೂಡೂರು ಗ್ರಾಮದಲ್ಲಿನ ಹುಳಿಯಾರುನಲ್ಲಿನ 60 ವರ್ಷದ ಪುಳ್ಳಣ್ಣ ಎಂಬ ವ್ಯಕ್ತಿ ಕಂಡುಬಂದಿದ್ದಾನೆ. ಈತ ಸತ್ತ ಹಾವುಗಳು ಎಲ್ಲೇ ಕಂಡರು ಅವುಗಳನ್ನು ಎತ್ತಿಕೊಂಡು ತಿಂದು ಬಿಡುತ್ತಾನೆ.
ಕಳೆದ ಎರಡು ದಿನಗಳ ಹಿಂದೆ ಈತ ಹಾವನ್ನು ತಿನ್ನುತ್ತಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ. ಹಾವುಗಳನ್ನು ಅಗಿದು ತಿನ್ನುವ ಈತ, ತನಗೆ ಪ್ರಾಣಿಗಳೆಂದರೆ ತುಂಬಾ ಇಷ್ಟ ಅದರಲ್ಲೂ ಹಾವುಗಳೆಂದರೆ ಇಷ್ಟ ಎಂದು ಹೇಳುತ್ತಿದ್ದನಂತೆ. ಆದರೆ, ಈ ಕಾರಣಕ್ಕೆ ಅಂತಾ ಸ್ಥಳೀಯರಿಗೆ ತಿಳಿದಿರಲಿಲ್ಲವಂತೆ.
ಇದನ್ನೂ ಓದಿ: ಮಕ್ಕಳಿಲ್ಲದ ದಂಪತಿಗೆ ಒಂದು ವರ್ಷದ ಮಗು ಮಾರಾಟ: ತಾಯಿ ಸೇರಿ ಒಂಬತ್ತು ಜನರ ಬಂಧನ
ಈತನ ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಕಾಮೆಂಟ್‌ಗಳು ಬರುತ್ತಿವೆ. ಆದರೆ, ಈತನ ವಿಚಿತ್ರವರ್ತನೆ ಇನ್ನೂ ನಿಗೂಢವಾಗಿದೆ. ಯಾಕಾಗಿ ಹಾಗೂ ಹೇಗೆ ಈ ರೀತಿ ಸತ್ತ ಹಾವುಗಳನ್ನು ತಿನ್ನುತ್ತಾನೆ ಎಂಬುದು ತಿಳಿದುಬಂದಿಲ್ಲ.