ಶಿವಗಂಗೈ(ತಮಿಳುನಾಡು):ಪೊಂಗಲ್ ಹಬ್ಬದ ಆಚರಣೆಯ ವೇಳೆ ತಮಿಳುನಾಡಿನ ಶಿವಗಂಗೈ ಜಿಲ್ಲೆಯ ಕಂಡುಪಟ್ಟಿಯಲ್ಲಿ ನಡೆದ ಮಂಜುವಿರಟ್ಟು ಸ್ಪರ್ಧೆಯಲ್ಲಿ ಹೋರಿ ತಿವಿತಕ್ಕೆ ವ್ಯಕ್ತಿಯೊಬ್ಬ ಬಲಿಯಾಗಿರುವ ಘಟನೆ ಮಂಗಳವಾರ ನಡೆದಿದೆ.
ಧಾರ್ಮಿಕ ಸೌಹಾರ್ದತೆ ಬೆಸೆಯಲು ಶಿವಗಂಗೈಯ ಸಂತ ಆ್ಯಂಟೋನಿ ಚರ್ಚ್ನಲ್ಲಿ ಪೊಂಗಲ್ ಆಚರಣೆ ಏರ್ಪಡಿಸಲಾಗಿತ್ತು. ಈ ವೇಳೆ ತಮಿಳುನಾಡಿನ ಸಾಂಸ್ಕೃತಿಕ ಆಟವಾದ ಮಂಜುವಿರಾಟ್ಟು ಸ್ಪರ್ಧೆಯನ್ನೂ ಏರ್ಪಡಿಸಲಾಗಿತ್ತು. ಸ್ಪರ್ಧೆ ನೋಡಲು ಸಾವಿರಾರು ಜನರು ಜಮಾಯಿಸಿದ್ದರು.