ಕೃಷ್ಣ(ಆಂಧ್ರಪ್ರದೇಶ):ದೇಶದಲ್ಲಿ ಮಹಾಮಾರಿ ಕೊರೊನಾ ಅಬ್ಬರ ನಿಲ್ಲುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ನಿತ್ಯ ಲಕ್ಷಾಂತರ ಸೋಂಕಿತ ಪ್ರಕರಣ ದಾಖಲಾಗುತ್ತಿದ್ದು, ಸಾವಿರಾರು ಜನರು ಡೆಡ್ಲಿ ವೈರಸ್ಗೆ ಬಲಿಯಾಗುತ್ತಿದ್ದಾರೆ.
ಇದನ್ನೂ ಓದಿ: ಆಕ್ಸಿಜನ್ ಸಮಸ್ಯೆ: ಒಂದೇ ರಾತ್ರಿಯಲ್ಲಿ ದೆಹಲಿ ಆಸ್ಪತ್ರೆಯಲ್ಲಿ 25 ರೋಗಿಗಳ ಸಾವು!
ಇದರ ಮಧ್ಯೆ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯಲ್ಲಿನ ಯುವಕನೊಬ್ಬ ಕೊರೊನಾ ಮಹಾಮಾರಿ ತಗುಲಬಹುದು ಎಂಬ ಭಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕೋವಿಡ್ ಭಯದಿಂದ ಯುವಕ ಆತ್ಮಹತ್ಯೆ ಅತ್ಮಹತ್ಯೆ ಮಾಡಿಕೊಂಡ ಯುವಕನನ್ನ ಲಕ್ಷ್ಮಣ್(29) ಎಂದು ಗುರುತಿಸಲಾಗಿದೆ. ನೀರಿನ ಟ್ಯಾಂಕರ್ಗೆ ಹಾರಿ ಇತ ಸಾವನ್ನಪ್ಪಿದ್ದಾನೆ. ಕೃಷ್ಣ ಜಿಲ್ಲೆಯ ಉಂಗಟೂರು ಮಂಡಲದ ಪೆದ್ದ ಆವೋಟಪಲ್ಲಿ ಎಂಬಲ್ಲಿ ಈತ ವಾಸವಾಗಿದ್ದನು. ಈತನಿಗೆ ಮಹಾಮಾರಿ ಸೋಂಕು ತಗುಲಿದೆ ಎಂಬ ಭಯದಿಂದ ಮೃತದೇಹವನ್ನ ಯಾರು ಹೊರಗೆ ತೆಗೆದಿಲ್ಲ. ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.