ಬಲರಾಮ್ಪುರ( ಉತ್ತರಪ್ರದೇಶ): ಗಂಡ ಹೆಂಡ್ತಿಯ ಜಗಳ ಉಂಡು ಮಲಗೋವರೆಗೆ ಅಂತಾರೆ. ಆದ್ರೆ ಇವರ ಜಗಳ ಲೈಟ್ ಕಂಬದವರೆಗೆ ಹೋಗಿದೆ.
ಹೆಂಡ್ತಿ ಮೇಲಿನ ಕೋಪಕ್ಕೆ ವಿದ್ಯುತ್ ಕಂಬವನ್ನೇರಿದ ಭೂಪ! - ಬಲರಾಮ್ಪುರದಲ್ಲಿ ವಿದ್ಯುತ್ ಕಂಬವನ್ನೇರಿದ ವ್ಯಕ್ತಿ,
ಗಂಡನೊಬ್ಬ ಹೆಂಡ್ತಿ ಮೇಲಿನ ಕೋಪಕ್ಕೆ ವಿದ್ಯುತ್ ಕಂಬವನ್ನೇರಿದ ಘಟನೆ ಉತ್ತರಪ್ರದೇಶದ ಬಲರಾಮ್ಪುರ ಜಿಲ್ಲೆಯಲ್ಲಿ ಕಂಡು ಬಂದಿದೆ.
ಹೆಂಡ್ತಿ ಮೇಲಿನ ಕೋಪಕ್ಕೆ ವಿದ್ಯುತ್ ಕಂಬವನ್ನೇರಿದ ಭೂಪ
ಹೌದು, ಇಂತಹದೊಂದು ವಿಚಿತ್ರ ಪ್ರಕರಣ ಕಂಡು ಬಂದಿದ್ದು ಜಿಲ್ಲೆಯ ಛತ್ತೀಸ್ಗಡ ಗ್ರಾಮದಲ್ಲಿ. ನಿನ್ನೆ ವ್ಯಕ್ತಿಯೊಬ್ಬ ತನ್ನ ಹಂಡ್ತಿಯೊಂದಿಗೆ ಜಗಳವಾಡಿದ್ದಾನೆ. ಬಳಿಕ ಆಕೆಯ ಮೇಲೆ ಕೋಪಗೊಂಡು ಮರೆಯಾಗಿದ್ದ. ಆಮೇಲೆ ಲೈಟ್ ಕಂಬದ ಮೇಲೇರಿ ಕುಳಿತಿದ್ದಾನೆ.
ಇದನ್ನು ನೋಡಿದ ಗ್ರಾಮಸ್ಥರ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ನೊಂದ ವ್ಯಕ್ತಿಯನ್ನು ಕೆಳಗಿಳಿಸಿದ್ದಾರೆ. ಈ ವೇಳೆ ಆತ ಕುಡಿದ ಮತ್ತಿನಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.