ಕರ್ನಾಟಕ

karnataka

ETV Bharat / bharat

ಎಸಿಬಿ ದಾಳಿ: ಸ್ಟವ್​​​​​​​ ಮೇಲಿಟ್ಟು ಐದು ಲಕ್ಷ ನಗದು ಸುಟ್ಟುಹಾಕಿದ ಭೂಪ... ಎಲ್ಲಿ ಅಂತೀರಾ? - ಸ್ಟೋವ್​​ ಮೇಲೆ ಐದು ಲಕ್ಷ ಸುಟ್ಟುಹಾಕಿದ ಭೂಪ

ಎಸಿಬಿ ದಾಳಿ ನಡೆಸಿರುವ ಮಾಹಿತಿ ಗೊತ್ತಾಗಿ ಅಧಿಕಾರಿಯೊಬ್ಬ ಲಂಚವಾಗಿ ಪಡೆದುಕೊಂಡಿದ್ದ 5 ಲಕ್ಷ ರೂ. ನಗದು ಸುಟ್ಟು ಹಾಕಿರುವ ಘಟನೆ ನಡೆದಿದೆ.

man burnt Rs.five lakhs
man burnt Rs.five lakhs

By

Published : Apr 6, 2021, 9:34 PM IST

Updated : Apr 6, 2021, 9:59 PM IST

ರಂಗಾರೆಡ್ಡಿ:ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಮತ್ತೊಂದು ಭ್ರಷ್ಟಾಚಾರದ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ. ಅಚ್ಚರಿಯ ಹಾಗೂ ಶಾಕಿಂಗ್​ ನ್ಯೂಸ್​ ಏನೆಂದರೆ, ಎಸ್​ಸಿಬಿ ದಾಳಿಗೆ ಹೆದರಿ ಅಧಿಕಾರಿಯ ಸಹಚರನೊಬ್ಬ 5 ಲಕ್ಷ ರೂ. ನಗದು ಸುಟ್ಟು ಹಾಕುವ ಯತ್ನ ನಡೆಸಿದ್ದಾನೆ.

ಜಿಲ್ಲೆಯ ತಲಕೊಂಡಪಲ್ಲಿ ಮಂಡಲದ ಕೊರೆಂಟಕುಂಟ್​ ತಾಂಡಾದ ಸರ್​ಪಂಚ್​ ರಾಮುಲು ಬೊಲಾಂಪಲ್ಲಿ ಎಂಬಲ್ಲಿ ಗಣಿಗಾರಿಕೆ ನಡೆಸಲು ಅರ್ಜಿ ಸಲ್ಲಿಸಿದ್ದರು. ಈ ಸಂಬಂದ ವೆಲ್ಡಂಡ ತಹಶೀಲ್ದಾರ್​​​​​​​​​​ ಅವರಿಗೆ ಪರವಾನಗಿ ನೀಡುವಂತೆ ಮತ್ತು ಸರ್ವೆ ಮಾಡುವಂತೆ ಮನವಿ ಮಾಡಿದ್ದರು.

ಸ್ಟವ್​​​​ ಮೇಲೆ ಐದು ಲಕ್ಷ ರೂಪಾಯಿ ನೋಟು ಸುಟ್ಟುಹಾಕಿದ ಭೂಪ

ಆದರೆ ಈ ಸಂಬಂಧ ತಹಶೀಲ್ದಾರ್​​​, ವೆಂಕಟಯ್ಯ ಗೌಡ್​ ಅವರ ನಿವಾಸದಲ್ಲಿ ಮೀಟಿಂಗ್​ ಮಾಡುವಂತೆ ಸಲಹೆ ನೀಡಿದ್ದರು. ಈ ವೇಳೆ ವೆಂಕಟಯ್ಯ ಗೌಡ್ ಆರು ಲಕ್ಷ ರೂ. ಲಂಚದ ಬೇಡಿಕೆಯಿಟ್ಟಿದ್ದರು. ಅಂತಿಮವಾಗಿ ಇಬ್ಬರ ನಡುವೆ ಐದು ಲಕ್ಷ ರೂ.ಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಬಗ್ಗೆ ಸರ್​​ಪಂಚ್​ ರಾಮುಲು ಎಸಿಬಿ ಅಧಿಕಾರಿಗಳನ್ನು ಭೇಟಿ ಮಾಡಿ ವಿಷಯ ಮುಟ್ಟಿಸಿದ್ದರು. ಇನ್ನೊಂದೆಡೆ ರಾಮುಲು ವೆಂಕಟಯ್ಯ ಅವರ ಮನೆಗೆ ತೆರಳಿ ಹಣ ನೀಡಿದ್ದರು. ಈ ವೇಳೆ ವೆಂಕಟಯ್ಯ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ವಿಷಯ ಗೊತ್ತಾಗುತ್ತಿದ್ದಂತೆ ವೆಂಕಟಯ್ಯ, ರಾಮುಲು ನೀಡಿದ್ದ ಐದು ಲಕ್ಷ ರೂ ನಗದನ್ನು ಗ್ಯಾಸ್​ ಸ್ಟೌವ್​ ಮೇಲಿರಿಸಿ ಸುಟ್ಟು ಹಾಕುವ ಯತ್ನ ಮಾಡಿದ್ದಾರೆ.

ಇದನ್ನೂ ಓದಿ: ಪಂಚರಾಜ್ಯ ಫೈಟ್​​: ಅಸ್ಸೋಂನಲ್ಲಿ ಶೇ. 82, ಬಂಗಾಳದಲ್ಲಿ ಶೇ.78ರಷ್ಟು ಸೇರಿ ಯಾವ ರಾಜ್ಯದಲ್ಲಿ ಎಷ್ಟು!?

ಎಸಿಬಿ ಅಧಿಕಾರಿಗಳು ಬಲವಂತವಾಗಿ ಬಾಗಿಲು ತೆಗೆಸಿದಾಗ ನೋಟುಗಳು ಶೇ 70 ರಷ್ಟು ಸುಟ್ಟು ಕರಕಲಾಗಿದ್ದವು. ಎಸಿಬಿ ಅಧಿಕಾರಿಗಳು ಆ ಸುಟ್ಟ ನೋಟುಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇನ್ನೊಂದೆಡೆ ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ತಹಶೀಲ್ದಾರ್​​ ಸೈದುಲು ಅವರ ಎಲ್​ಬಿ ನಗರ ನಿವಾಸದ ಮೇಲೂ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

Last Updated : Apr 6, 2021, 9:59 PM IST

ABOUT THE AUTHOR

...view details