ಕರ್ನಾಟಕ

karnataka

ETV Bharat / bharat

ಪ್ರೀತಿಸಿ ಮದುವೆಯಾದ ಹೆಂಡ್ತಿಯನ್ನ ಬರ್ಬರವಾಗಿ ಕೊಲೆಗೈದ ಗಂಡ! - ಹೆಂಡತಿ ಕೊಲೆ ಮಾಡಿದ ಗಂಡ

ಕಳೆದ ಕೆಲ ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಯುವತಿಯೋರ್ವಳನ್ನ ಗಂಡ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ..

WIFE KILLED BY HUSBAND
WIFE KILLED BY HUSBAND

By

Published : Apr 12, 2022, 3:32 PM IST

ಪೆದ್ದಪಲ್ಲಿ (ತೆಲಂಗಾಣ) :ಜೀವನ ಪರ್ಯಂತ ಜೊತೆಯಾಗಿರುತ್ತೇನೆಂದು ಪ್ರೀತಿಸಿದವಳ ಕೈಹಿಡಿದಿದ್ದ ವ್ಯಕ್ತಿಯೋರ್ವ ಚಿನ್ನಾಭರಣದ ವಿಷಯಕ್ಕಾಗಿ ಹೆಂಡ್ತಿಯನ್ನ ಬರ್ಬರವಾಗಿ ಕೊಲೆ ಮಾಡಿದ್ದಾನೆ. ತೆಲಂಗಾಣದ ಪೆದ್ದಪಲ್ಲಿಯಲ್ಲಿ ಈ ಘಟನೆ ನಡೆದಿದ್ದು, ಕೊಲೆ ಬೆನ್ನಲ್ಲೇ ಆರೋಪಿ ಪೊಲೀಸರ ಮುಂದೆ ಶರಣಾಗಿದ್ದಾನೆ.

ಇದನ್ನೂ ಓದಿ:100 ಉದ್ಯೋಗಿಗಳಿಗೆ ಕಾರು ಗಿಫ್ಟ್‌ ನೀಡಿದ ಚೆನ್ನೈ ಮೂಲದ ಐಟಿ ಕಂಪನಿ

ಇಲ್ಲಿನ ಸಂಜಯ್​ ಗಾಂಧಿ ನಗರದ ಸುಂದರಗಿರಿ ರಾಜೇಶ್ ಮೊಬೈಲ್ ಫೋನ್​ ಅಂಗಡಿ ಇಟ್ಟುಕೊಂಡಿದ್ದನು. ಗಂಡ-ಹೆಂಡತಿ ನಡುವೆ ಕಳೆದ ಕೆಲ ದಿನಗಳಿಂದ ಚಿನ್ನಾಭರಣ ಒತ್ತೆ ಇಟ್ಟಿರುವ ವಿಚಾರವಾಗಿ ಜಗಳ ನಡೆದಿದೆ. ತನಗೆ ಗೊತ್ತಿಲ್ಲದೆ ಚಿನ್ನಾಭರಣ ಮಾರಾಟ ಮಾಡಿದ್ದಕ್ಕಾಗಿ ರಾಜೇಶ್ ಮೇಲೆ ಹೆಂಡತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವೇಳೆ ತಾಳ್ಮೆ ಕಳೆದುಕೊಂಡಿರುವ ಪತಿ ಆಕೆಯ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾನೆ. ಇದರ ಬೆನ್ನಲ್ಲೇ ರಾಮಗುಂಡಂ ಎನ್‌ಟಿಪಿಸಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಮೃತ ಮಹಿಳೆಯ ಶವವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಆರೋಪಿ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಿದ್ದಾರೆ.

ABOUT THE AUTHOR

...view details