ಕರ್ನಾಟಕ

karnataka

ETV Bharat / bharat

ಆಟದ ಮೈದಾನ ಒತ್ತುವರಿ ಮಾಡಿಕೊಂಡಿದ್ದ ಕಿರಾತಕ: ಮಕ್ಕಳ ಪರವಾಗಿ ಪ್ರಶ್ನಿಸಿದ್ದಕ್ಕೆ ಕೊಡಲಿ ಏಟು - ಆಟದ ಮೈದಾನ ಒತ್ತುವರಿ ಮಾಡಿಕೊಂಡಿದ್ದ ಕಿರಾತಕ

ಕ್ರಿಕೆಟ್ ಆಡುವ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ಮಹಿಳೆಯ ತಲೆಗೆ ಕೊಡಲಿಯಿಂದ ಹೊಡೆದಿದ್ದಾನೆ. ಘಟನೆ ಬಳಿಕ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಕ್ಕಳ ಪರವಾಗಿ  ಪ್ರಶ್ನಿಸಿದ್ದಕ್ಕೆ ಕೊಡಲಿ ಏಟು
ಮಕ್ಕಳ ಪರವಾಗಿ ಪ್ರಶ್ನಿಸಿದ್ದಕ್ಕೆ ಕೊಡಲಿ ಏಟು

By

Published : Feb 7, 2022, 1:55 PM IST

ರಾಂಪುರ: ಶಿಮ್ಲಾದ ರಾಂಪುರ ಬುಶಹರ್ ಗ್ರಾಮ ಪಂಚಾಯತ್​​ನ ದನ್ಸಾದ ನೋಗಿಧರ್ ಗ್ರಾಮದಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕ್ರಿಕೆಟ್ ಆಡುವ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ಮಹಿಳೆಯ ತಲೆಗೆ ಕೊಡಲಿಯಿಂದ ಹೊಡೆದಿದ್ದಾನೆ. ಘಟನೆ ಬಳಿಕ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಕ್ರಮ ಕೈಗೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಆರೋಪಿ ಮಕ್ಕಳನ್ನು ಕ್ರಿಕೆಟ್ ಆಡದಂತೆ ತಡೆಯುತ್ತಿದ್ದ:ಪೊಲೀಸರಿಂದ ಬಂದಿರುವ ಮಾಹಿತಿ ಪ್ರಕಾರ ನೋಗಿಧಾರ್‌ನ ತಮೈಸು ಧಂಕ್‌ನಲ್ಲಿರುವ ಕ್ರೀಡಾ ಮೈದಾನದಲ್ಲಿ ಪ್ರಕರಣ ನಡೆದಿದೆ. ಹಲವು ವರ್ಷಗಳಿಂದ ಏರಿಯಾದ ಮಕ್ಕಳು ಕ್ರಿಕೆಟ್ ಆಡುತ್ತಾರೆ.

ಈ ಜಮೀನನ್ನು ಧಾರ್ ಗ್ರಾಮದ ನಿವಾಸಿ ರಾಮ್ ಎಂಬುವವ ಒತ್ತುವರಿ ಮಾಡಿಕೊಂಡಿದ್ದು, ಸೇವಾಕ್ ರಾಮ್ ಈ ಭೂಮಿಯಲ್ಲಿ ಮಕ್ಕಳನ್ನು ಕ್ರಿಕೆಟ್ ಆಡದಂತೆ ತಡೆದಿದ್ದ. ಈ ಹಿಂದೆಯೂ 2-3 ಬಾರಿ ಇದೇ ರೀತಿ ಮಾಡಿದ್ದನಂತೆ.

ಕೊಡಲಿಯಿಂದ ತಲೆಗೆ ಹೊಡೆದು ಹಲ್ಲೆ:ಶನಿವಾರ ಮಕ್ಕಳನ್ನು ತಡೆಯುತ್ತಿದ ಹಿನ್ನೆಲೆ ಧಾರ್ ಗ್ರಾಮದ ಮಹಿಳಾ ಮಂಡಲ ಮುಖ್ಯಸ್ಥೆ ಹಾಗೂ ಕಾರ್ಯದರ್ಶಿ ಅಲ್ಲಿಗೆ ತಲುಪಿದ್ದಾರೆ. ಆಘ ಮಹಿಳೆ ಮತ್ತು ರಾಮ್​ನ ನಡುವೆ ವಾಗ್ವಾದ ಶುರುವಾಗಿದೆ. ಚರ್ಚೆ ತಾರಕಕ್ಕೇರಿದ್ದು, ಈ ನಡುವೆ ಮಹಿಳಾ ಮಂಡಳದ ಮುಖ್ಯಸ್ಥರು ಈ ಭೂಮಿ ನಿಮ್ಮದಲ್ಲ, ಮಕ್ಕಳು ಇಲ್ಲಿ ಆಟವಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಕ್ಕಳ ಪರವಾಗಿ ಪ್ರಶ್ನಿಸಿದ್ದಕ್ಕೆ ಕೊಡಲಿ ಏಟು

ಈ ವೇಳೆ, ಸೇವಾಕ್ ರಾಮ್ ಕೋಪಗೊಂಡು ಕೊಡಲಿಯಿಂದ ಮಹಿಳೆಯ ತಲೆಗೆ ಹೊಡೆದಿದ್ದಾನೆ. ಘಟನೆಯಲ್ಲಿ ಮಹಿಳಾ ಮಂಡಲದ ಮುಖ್ಯಸ್ಥ ರಾಮ್ ಪ್ಯಾರಿ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಈ ಬಗ್ಗೆ ಪಂಚಾಯಿತಿ ಮುಖ್ಯಾಧಿಕಾರಿ ದಿನೇಶ್, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಯನ್ನು ಬಂಧಿಸಿದ್ದು, ಗಾಯಗೊಂಡ ಮಹಿಳೆಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಶಿಮ್ಲಾಕ್ಕೆ ಕಳುಹಿಸಲಾಗಿದೆ.

For All Latest Updates

TAGGED:

ABOUT THE AUTHOR

...view details