ಕರ್ನಾಟಕ

karnataka

ETV Bharat / bharat

ದೀದಿ ನಾಡಲ್ಲಿ ಮುಂದುವರೆದ ಹಿಂಸಾಚಾರ: ಮತ್ತೊಬ್ಬ ಬಿಜೆಪಿ ಮುಖಂಡನ ಹತ್ಯೆ - ಪಶ್ಚಿಮ ಬಂಗಾಳ ಬಿಜೆಪಿ ಮುಖಂಡನ ಕೊಲೆ

ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ, ಕೊಲೆ ಪ್ರಕರಣಗಳು ನಿಲ್ಲುತ್ತಿಲ್ಲ. ಬೀರಭೂಮ್ ಜಿಲ್ಲೆಯ ಖೈರಶೋಲ್‌ನಲ್ಲಿ ಸ್ಥಳೀಯ ಬಿಜೆಪಿ ಮುಖಂಡನ ಹತ್ಯೆ ನಡೆದಿದೆ.

a-local-bjp-leader-killed-in-khayrashol-west-bengal
ದೀದಿ ನಾಡಲ್ಲಿ ಮುಂದುವರೆದ ಹಿಂಸಾಚಾರ: ಮತ್ತೊಬ್ಬ ಬಿಜೆಪಿ ಮುಖಂಡನ ಹತ್ಯೆ

By

Published : Jun 13, 2021, 3:00 AM IST

ಬೀರಭೂಮ್(ಪಶ್ಚಿಮ ಬಂಗಾಳ):ಪಶ್ಚಿಮ ಬಂಗಾಳದ ಬೀರಭೂಮ್ ಜಿಲ್ಲೆಯ ಖೈರಶೋಲ್‌ನಲ್ಲಿ ಸ್ಥಳೀಯ ಬಿಜೆಪಿ ಮುಖಂಡನನ್ನು ಹತ್ಯೆ ಮಾಡಲಾಗಿದೆ. ನಬ್ಶನ್ ಗ್ರಾಮದಲ್ಲಿ ಬಿಜೆಪಿಯ ಮಂಡಲ ಉಪಾಧ್ಯಕ್ಷರಾಗಿದ್ದ ಮಿಥುಮ್ ಬಾಗ್ಡಿ ಕೊಲೆಗೀಡಾದ ವ್ಯಕ್ತಿ.

ಕಳೆದ ಕೆಲವು ತಿಂಗಳುಗಳಿಂದ ಜೈಲಿನಲ್ಲಿದ್ದ ಮಿಥುನ್ 5 ದಿನಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ. 6 ತಿಂಗಳ ಹಿಂದೆ ಅಪಘಾತದಲ್ಲಿ ವ್ಯಕ್ತಿ ಮೃತಪಟ್ಟ ಪ್ರಕರಣದಲ್ಲಿ ಮಿಥುನ್ ಜೈಲು ಸೇರಿದ್ದ. ಬಿಡುಗಡೆಯಾದ ನಂತರ ತಂದೆಯ ಬಳಿ ತೆರಳಿ ಮನೆಗೆ ಮರಳುವಾಗ ದುಷ್ಕರ್ಮಿಗಳು ದಾಳಿ ನಡೆಸಿದ ಹತ್ಯೆ ಮಾಡಿದ್ದಾರೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇದೊಂದು ಪೂರ್ವಯೋಜಿತ ಕೊಲೆ ಎಂದು ಬಿಜೆಪಿ ಆರೋಪಿಸಿದ್ದು, ಆದರೆ ಟಿಎಂಸಿ ಈ ಆರೋಪ ತಳ್ಳಿಹಾಕಿದೆ.

ಇದನ್ನೂ ಓದಿ:ದೀದಿ ನಾಡಲ್ಲಿ ನಿಲ್ಲದ ಹಿಂಸಾಚಾರ... ಮತ್ತೊಬ್ಬ ಬಿಜೆಪಿ ನಾಯಕನಿಗೆ ಗುಂಡೇಟು!

ABOUT THE AUTHOR

...view details