ಕರ್ನಾಟಕ

karnataka

ಮನೆಯ ಹಳೆ ಗೋಡೆ ಉರುಳಿಸುವಾಗ ಭೀಕರ ಅಪಘಾತ: ಮಹಿಳೆ ಸೇರಿ ಇಬ್ಬರು ಮಕ್ಕಳಿಗೆ ಗಾಯ

By ETV Bharat Karnataka Team

Published : Dec 7, 2023, 2:15 PM IST

ಮನೆಯ ಹಳೆ ಗೋಡೆ ಉರುಳಿಸುವಾಗ ದುರಂತ ಸಂಭವಿಸಿದ್ದು, ಮಹಿಳೆ ಸೇರಿ ಇಬ್ಬರು ಮಕ್ಕಳು ಗಾಯಗೊಂಡಿರುವ ಘಟನೆ ಚಂಡೀಗಢದ ಮಣಿ ಮಜ್ರಾದಲ್ಲಿ ನಡೆದಿದೆ.

building
ಮನೆಯ ಹಳೆ ಗೋಡೆ ಉರುಳಿಸುವಾಗ ಭೀಕರ ಅಪಘಾತ

ಮನೆಯ ಹಳೆ ಗೋಡೆ ಉರುಳಿಸುವಾಗ ಭೀಕರ ಅಪಘಾತ

ಚಂಡೀಗಢ​ : ಚಂಡೀಗಢದ ಮಣಿ ಮಜ್ರಾದಲ್ಲಿ ನಿರ್ಮಾಣ ಹಂತದ ಕಟ್ಟಡದ ಹಳೆಯ ಗೋಡೆ ಉರುಳಿಸುವಾಗ ಭೀಕರ ಅಪಘಾತ ಸಂಭವಿಸಿದೆ. ಹಳೇ ಕಟ್ಟಡವನ್ನು ಕೆಡವಿ ಹೊಸ ಮನೆ ನಿರ್ಮಿಸಲು ಸಿದ್ಧತೆ ನಡೆಸಲಾಗುತ್ತಿತ್ತು. ಈ ವೇಳೆ, ಮನೆಯ ಹಳೆಯ ಗೋಡೆ ಒಡೆಯುವಾಗ ದುರಂತ ಸಂಭವಿಸಿದೆ. ಅಪಘಾತದಲ್ಲಿ ಮಹಿಳೆ ಹಾಗೂ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಗಾಯಗೊಂಡ ಮಹಿಳೆಯ ಸ್ಥಿತಿ ಗಂಭೀರವಾದ್ದು, ಪಿಜಿಐಗೆ ದಾಖಲಿಸಲಾಗಿದೆ. ಅಲ್ಲದೇ, ಗಾಯಗೊಂಡ ಇಬ್ಬರು ಮಕ್ಕಳು ಸೆಕ್ಟರ್-32 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮನೆ ಮಾಲೀಕರಾದ ಕುಸುಮ ಲತಾ, ಗುತ್ತಿಗೆದಾರ ಚಂದ್ರು ಸೇರಿದಂತೆ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ :ಟಾಟಾ ಏಸ್ ​- ಲಾರಿ ನಡುವೆ ಭೀಕರ ಅಪಘಾತ: ನಾಲ್ವರು ಸಾವು, ಒಬ್ಬನಿಗೆ ಗಾಯ

ಟಾಟಾ ಏಸ್ ​- ಲಾರಿ ನಡುವೆ ಭೀಕರ ಅಪಘಾತ: ಇನ್ನೊಂದೆಡೆ, ಟಾಟಾ ಏಸ್​ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ನಾಲ್ವರು ಮೃತಪಟ್ಟಿದ್ದು, ಒಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಪಗಡದಿನ್ನಿ ಕ್ಯಾಂಪ್ ಬಳಿ ನಡೆದಿದೆ.

ಇಸ್ಮಾಯಿಲ್ ರಷೀದ್ (25), ರವಿ ರಾಜಪ್ಪ (20), ರಮೇಶ ನಿಂಗಪ್ಪ ಕಣೇಕಲ್ಲೂರು (28), ಅಂಬರೀಶ್​ ಸೂಗಪ್ಪ ಕಣೇಕಲ್ಲೂರು (28) ಮೃತರು. ಸದ್ಯಕ್ಕೆ ಮೃತ ದೇಹಗಳನ್ನು ಸಿಂಧನೂರು ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ರಾಯಚೂರು ನಗರದ ಸಾಯಿಸಂಗಮ ಸಪ್ಲಯರ್ಸ್​ನಲ್ಲಿ ಕೆಲಸ ಮಾಡುತ್ತಿದ್ದ ಮೃತರು ಟಾಟಾ ಏಸ್​ನಲ್ಲಿ ಮುದ್ದಾಪುರಗೆ ತೆರಳುತ್ತಿದ್ದರು. ಈ ವೇಳೆ, ಮಸ್ಕಿಯಿಂದ ಸಿಂಧನೂರಿಗೆ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಟಾಟಾ ಏಸ್​ನಲ್ಲಿದ್ದ ಐದು ಜನರ ಪೈಕಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ಸಮೀರ್ ಮನೋಜ್ ಬಂಗಾಲಿ ಎನ್ನುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ :ಗೂಡ್ಸ್ ಟೆಂಪೋಗೆ ವಾಹನ ಡಿಕ್ಕಿ ಹೊಡೆದು ಪರಾರಿ : ಸ್ಥಳದಲ್ಲೇ ಚಾಲಕ ಸೇರಿ ಇಬ್ಬರು ಸಾವು

ಇನ್ನೊಂದೆಡೆ, ಗೂಡ್ಸ್ ಟೆಂಪೋಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಶಿರಾಡಿ ಘಾಟ್‌ನ ಗುಂಡ್ಯ ಕೆಂಪು ಹೊಳೆ ಸಮೀಪ ನಿನ್ನೆ ಸಂಭವಿಸಿದೆ. ಅಪಘಾತದಲ್ಲಿ ಗೂಡ್ಸ್ ಟೆಂಪೋ ವಾಹನದ ಚಾಲಕ ಹಾಗೂ ಇನ್ನೊಬ್ಬರು ಮೃತಪಟ್ಟಿದ್ದು, ಮೃತರು ಹಾಸನ ನಿವಾಸಿಗಳು ಎನ್ನಲಾಗಿದೆ. ಗೂಡ್ಸ್ ಟೆಂಪೋ ವಾಹನವು ಸಂಪೂರ್ಣ ಜಖಂಗೊಂಡಿದೆ. ಅಪಘಾತದ ಸ್ಥಳಕ್ಕೆ ಸಕಲೇಶಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details