ಕೃಷ್ಣಾ (ಆಂಧ್ರಪ್ರದೇಶ): ಮದುವೆ ಆದ ಮೇಲೆ ತಾಯಿಯಾಗಬೇಕು ಅನ್ನೋದು ಪ್ರತಿ ಹೆಣ್ಣಿನ ಅಸೆ. ಆದರೆ ವೈಜ್ಞಾನಿಕ ಕಾರಣದಿಂದ ಮಕ್ಕಳಾಗದಿದ್ದರೆ ಅದಕ್ಕೆ ಹೊಣೆ ಯಾರು?. ಆದರೂ, ಈ ನೆರೆಹೊರೆಯವರು ಇನ್ನೂ ಮಕ್ಕಳಾಗಿಲ್ವೇ? ಎಂದು ಪದೇ ಪದೇ ಕೇಳಿದಾಗ ದಂಪತಿಗೆ ಉಂಟಾಗುವ ನೋವು, ಮುಜುಗರ ಅಷ್ಟಿಷ್ಟಲ್ಲ. ಅಷ್ಟಕ್ಕೂ ಈ ಪೀಠಿಕೆ ಬರೆಯಲು ಒಂದು ನಿದರ್ಶನವಿದೆ.
ಆಂಧ್ರಪ್ರದೇಶದ ಕೊಂಡಪಲ್ಲಿಯ ಯುವತಿ ಒಂಬತ್ತು ವರ್ಷಗಳ ಹಿಂದೆ ತೆಲಂಗಾಣದ ಖಮ್ಮಂ ಜಿಲ್ಲೆಯ ವೈರಾದ ವ್ಯಕ್ತಿಯೊಂದಿಗೆ ವಿವಾಹವಾಗಿದ್ದಳು. ಆದರೆ ಕಾರಣಾಂತರಗಳಿಂದ ದಂಪತಿಗೆ ಮಕ್ಕಳಾಗಲಿಲ್ಲ. ಹೀಗಾಗಿ ಕುಟುಂಬ ಸದಸ್ಯರು ಹಾಗೂ ನೆರೆಹೊರೆಯವರು ಯಾವಾಗಲೂ ಈ ಬಗ್ಗೆಯೇ ಮಾತನಾಡಿಕೊಳ್ಳುತ್ತಿದ್ದರು. ಇವರೆಲ್ಲರ ಮಾತಿನಿಂದ ಮಹಿಳೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಆದರೆ ಒಂದು ದಿನ ಸೂಕ್ತ ಯೋಜನೆ ರೂಪಿಸಿ ನೆರೆಹೊರೆಯವರು ಆಡಿಕೊಳ್ಳುವುದಕ್ಕೆ ಕಡಿವಾಣ ಹಾಕೋಕೆ ಮುಂದಾದಳು.
ಈ ಮಹಿಳೆ ತಾನು ಗರ್ಭ ಧರಿಸಿರುವುದಾಗಿ ಅತ್ತೆಯ ಮನೆಗೆ ತಿಳಿಸಿ 9 ತಿಂಗಳ ಹಿಂದೆ ತವರಿಗೆ ಬಂದಿದ್ದಾಳೆ. ಈ ಅವಧಿಯಲ್ಲಿ ಆಕೆ ತನ್ನ ಹೊಟ್ಟೆಗೆ ಬಟ್ಟೆ ಸುತ್ತಿಕೊಂಡು ವೈದ್ಯಕೀಯ ತಪಾಸಣೆಗಾಗಿ ಪ್ರತಿ ತಿಂಗಳು ಆಸ್ಪತ್ರೆಗೆ ಹೋಗುತ್ತಿದ್ದಳು. ಈ ತಿಂಗಳ 5ನೇ ತಾರೀಖಿನಂದು ವೈದ್ಯರು ತನಗೆ ಹೆರಿಗೆಗೆ ದಿನಾಂಕ ನೀಡಿದ್ದಾರೆ ಎಂದು ಎಲ್ಲರಿಗೂ ತಿಳಿಸಿದ್ದಾಳೆ.