ರಾಯ್ಪುರ್ (ಛತ್ತೀಸ್ಗಢ): ಕೊರೊನಾ ಅಲೆಯಲ್ಲಿ ಜನ ಸಾಮಾನ್ಯರ ಜೀವನ ಅಕ್ಷರಶಃ ನರಕದಂತಾಗಿದೆ. ಹೀಗಿರುವಾಗ ಲಾಕ್ಡೌನ್ನಿಂದ ಇನ್ನಷ್ಟು ಸಂಕಷ್ಟದ ಸ್ಥಿತಿಗೆ ತಲುಪಿದ್ದಾರೆ. ಇನ್ನೊಂದೆಡೆ ಕೊರೊನಾ ತಡೆಗೆ ಎಂದು ಪೊಲೀಸರು ಹಗಲಿರುಳು ದುಡಿಯುತ್ತಿದ್ದಾರೆ. ಅಲ್ಲದೇ ಜನರ ಹಸಿವು ನೀಗಿಸುವ ಕಾರ್ಯಕ್ಕೂ ಈಗ ಪೊಲೀಸರು ಮುಂದಾಗಿದ್ದು, ಇದಕ್ಕಾಗಿ ರಾಯ್ಪುರದ ಗೋಕುಲ್ ನಗರದಲ್ಲಿ ‘ಖಾನಾ ಚೌಕಿ’ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಲಾಕ್ಡೌನ್ನಿಂದ ಆಹಾರ ಸಿಗದ ಜನತೆಗೆ ಪೊಲೀಸರು ಆಹಾರ ತಯಾರಿಸಿ ಹಂಚುವ ಕಾರ್ಯ ಮಾಡುತ್ತಿದ್ದಾರೆ. ಬೆಳಗ್ಗೆ ಹಾಗೂ ಸಂಜೆ ಎರಡು ಹೊತ್ತು ಬಡವರ ಹೊಟ್ಟೆ ತುಂಬಿಸುತ್ತಿದ್ದಾರೆ. ಈ ಕಾರ್ಯದಲ್ಲಿ 10ಕ್ಕೂ ಹೆಚ್ಚು ಪೊಲೀಸರು ನಿತ್ಯ ತೊಡಗಿಕೊಂಡಿದ್ದು, ಆಹಾರದ ಅಗತ್ಯ ಇರುವರ ಬಳಿ ತೆರಳಿ ವಿತರಣೆ ಮಾಡುತ್ತಿದ್ದಾರೆ.
ಮೇ ಮೊದಲ ವಾರದಲ್ಲಿ ಪೊಲೀಸ್ ಕಾನ್ಸ್ಸ್ಟೇಬಲ್ ಮಹೇಶ್ ನೇತಮ್ ಹಾಗೂ ಇತರ ಸಿಬ್ಬಂದಿ ಸೇರಿ ಮೊದಲ ಖಾನಾ ಚೌಕಿ ಆರಂಭಿಸಿದರು.