ಕಲಹಂಡಿ (ಒಡಿಶಾ): ಒಡಿಶಾದ ನಕ್ಸಲ್ ಪೀಡಿತ ಕಲಹಂಡಿ ಜಿಲ್ಲೆಯ ಕರ್ಲಕುಂಟಾ ಸೇತುವೆಯ ಬಳಿ ಮಾವೋವಾದಿಗಳು ಅಡಗಿಸಿಟ್ಟಿದ್ದ ನೆಲಬಾಂಬ್ ಸ್ಫೋಟದಿಂದಾಗಿ ಪತ್ರಕರ್ತರೊಬ್ಬರು ಸಾವನ್ನಪ್ಪಿದ್ದಾರೆ.
ಕಲಹಂಡಿ ಜಿಲ್ಲೆಯಲ್ಲಿ ಇಂದು ನಡೆಯುತ್ತಿದ್ದ ಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸುವಂತೆ ನಕ್ಸಲರು ಸ್ಥಳೀಯರಿಗೆ ಎಚ್ಚರಿಕೆ ನೀಡಿ ಕೆಲವು ಪೋಸ್ಟರ್‌ಗಳನ್ನು ಅಂಟಿಸಿದ್ದರು.
ಈ ಬಗ್ಗೆ ಸ್ಥಳೀಯ ಪತ್ರಿಕೆಯೊಂದರಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದ ರೋಹಿತ್ ಕುಮಾರ್ ಬಿಸ್ವಾಲ್ ಅವರಿಗೆ ಮಾಹಿತಿ ದೊರೆತಿದ್ದು, ಮಾಹಿತಿಯ ಸತ್ಯಾಸತ್ಯತೆ ಪರಿಶೀಲಿಸಲು ಅವರು ಸ್ಥಳಕ್ಕೆ ಧಾವಿಸಿದರು. ಬಿಸ್ವಾಲ್ ಅವರು ಪೋಸ್ಟರ್‌ಗಳ ಚಿತ್ರಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದಾಗ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದೆ.
ಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸುವಂತೆ ನಕ್ಸಲರ ಪೋಸ್ಟರ್ ಇದನ್ನೂ ಓದಿ: ಕುಖ್ಯಾತ ರೌಡಿಯ ಹಂತಕ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಅನುಮಾನಾಸ್ಪದ ಸಾವು!
ಸೇತುವೆ ಬಳಿ ನೆಲಬಾಂಬ್‌ಗಳನ್ನು ಅಡಗಿಸಿಡಲಾಗಿತ್ತು. ಆಕಸ್ಮಿಕವಾಗಿ ಬಿಸ್ವಾಲ್ ಅದರ ಮೇಲೆ ಕಾಲಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಬಂದ ಕಲಹಂಡಿ ಪೊಲೀಸರು ಮತ್ತು ಸಿಆರ್‌ಪಿಎಫ್ ಸಿಬ್ಬಂದಿ ತನಿಖೆ ಆರಂಭಿಸಿದ್ದಾರೆ.