ರಾಯಗಢ(ಒಡಿಶಾ):ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದು 27 ಎಮ್ಮೆಗಳು ಮೃತಪಟ್ಟ ಘಟನೆ ರಾಯಗಡ ಜಿಲ್ಲೆಯ ಪಿತಾಮಹಲ್ ಬಳಿ ನಡೆದಿದೆ. ಅಲೆಪ್ಪಿ-ಧನಬಾದ್ ಎಕ್ಸ್‌ಪ್ರೆಸ್ ರೈಲು ಎಮ್ಮೆಗಳಿಗೆ ಡಿಕ್ಕಿ ಹೊಡೆದಿದೆ.
ಹಳಿ ದಾಟುತ್ತಿದ ವೇಳೆ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿ 27 ಎಮ್ಮೆಗಳ ದುರ್ಮರಣ - 27 ಎಮ್ಮೆಗಳು ದುರ್ಮರಣ
ಎಮ್ಮೆಗಳ ಹಿಂಡು ರೈಲು ಹಳಿಯಲ್ಲಿ ದಾಟುತ್ತಿದ್ದ ವೇಳೆ ಎಕ್ಸ್‌ಪ್ರೆಸ್ ರೈಲು ಹರಿರಿದೆ. ಪರಿಣಾಮ 27 ಎಮ್ಮೆಗಳು ದುರ್ಮರಣಕ್ಕೀಡಾಗಿವೆ.
27 buffalos were killed
ಇದರಿಂದ ಕೆಲ ಗಂಟೆಗಳ ಕಾಲ ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ. ಘಟನಾ ಸ್ಥಳಕ್ಕೆ ತಲುಪಿರುವ ರೈಲು ಸಿಬ್ಬಂದಿ ಎಮ್ಮೆಗಳ ಮೃತದೇಹಗಳನ್ನು ರೈಲ್ವೇ ಟ್ರ್ಯಾಕ್ನಿಂದ ಹೊರಗಡೆ ತೆಗೆಯುವಲ್ಲಿ ಯಶಸ್ವಿಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ದಿವ್ಯಾಂಗ ಗಂಡನಿಗೆ ಆಸರೆ, ಬೈಕ್ನಲ್ಲಿ ಹಾಲು ಮಾರಿ ತಿಂಗಳಿಗೆ ಲಕ್ಷ ಲಕ್ಷ ಸಂಪಾದಿಸುವ ಮಹಿಳೆ!